Friday, June 26, 2026
spot_imgspot_img
spot_imgspot_img

ಖೋ-ಖೋ ಆಟಗಾರ್ತಿಯ ಶವ ರೈಲ್ವೆ ಹಳಿಯ ಬಳಿ ಪತ್ತೆ; ಅತ್ಯಾಚಾರ ಶಂಕೆ!

- Advertisement -
- Advertisement -

ಉತ್ತರ ಪ್ರದೇಶ: ರಾಷ್ಟ್ರ ಮಟ್ಟದ ಮಾಜಿ ಖೋ-ಖೋ ಆಟಗಾರ್ತಿಯ ಮೃತದೇಹ ಕತ್ತು ಹಿಸುಕಿ ಕೊಂದ ಸ್ಥಿತಿಯಲ್ಲಿ ಉತ್ತರ ಪ್ರದೇಶದ ಬಿಜೋರ್ ನ ರೈಲ್ವೆ ನಿಲ್ದಾಣದ ಬಳಿ ಪತ್ತೆಯಾಗಿದೆ. ಕೊಲೆಗೂ ಮುನ್ನ ಆಕೆಯ ಮೇಲೆ ಅತ್ಯಾಚಾರ ನಡೆದಿದೆ ಎಂದು ಸಂತ್ರಸ್ತೆಯ ಕುಟುಂಬ ಆರೋಪಿಸಿದೆ.

24 ವರ್ಷದ ಖೋಖೋ ಆಟಗಾರ್ತಿಯಾಗಿದ್ದ ಆಕೆ ಮನೆಯಿಂದ ಹೊರ ಹೋಗಿ ತುಂಬಾ ಸಮಯದವರೆಗೆ ಬಾರದೇ ಇದ್ದಾಗ ಆಕೆಗೆ ಕರೆ ಮಾಡಲಾಗಿತ್ತು. ಆಗ ಫೋನ್ ಸ್ವಿಚ್ ಆಫ್ ಆಗಿತ್ತು. ಬಳಿಕ ನರಹೊರೆಯವರು ರೈಲುಗಳ ಮಧ್ಯದಲ್ಲಿ ಕುತ್ತಿಗೆಗೆ ದುಪಟ್ಟಾ ಬಿಗಿದ ಸ್ಥಿತಿಯಲ್ಲಿ ಆಕೆಯನ್ನು ಗುರುತಿಸಿದ್ದಾರೆ. ತಕ್ಷಣ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತಾದರೂ, ಅಲ್ಲಿ ವೈದ್ಯರು ಆಕೆ ಮೃತಪಟ್ಟಿದ್ದಾಳೆ ಎಂದು ತಿಳಿಸಿದರು. ಈ ಘಟನೆ ಬಗ್ಗೆ ರೈಲ್ವೆ ಪೊಲೀಸರು ಪ್ರಕರಣ ದಾಖಲಿಸಿದ್ದು, ತನಿಖೆ ನಡೆಸುತ್ತಿದ್ದಾರೆ.

- Advertisement -

Related news

error: Content is protected !!