Tuesday, July 1, 2025
spot_imgspot_img
spot_imgspot_img

ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ 284 ನೌಕರರಿಗೆ 6ನೇ ವೇತನ ಮಂಜೂರಾತಿ ಕಡತಕ್ಕೆ ಸಹಿ

- Advertisement -
- Advertisement -

ಸುಬ್ರಹ್ಮಣ್ಯ: ಜಿಲ್ಲಾ ಉಸ್ತುವಾರಿ ಸಚಿವರು ಮತ್ತು ಬಂದರು, ಮೀನುಗಾರಿಕೆ ಹಾಗೂ ಒಳನಾಡು ಜಲಸಾರಿಗೆ ಸಚಿವ ಎಸ್.ಅಂಗಾರ ಅವರ ನೇತೃತ್ವದ ನಿಯೋಗ ಗುರುವಾರ ಬೆಂಗಳೂರಿನಲ್ಲಿ ಮುಜರಾಯಿ ಸಚಿವೆ ಶಶಿಕಲಾ ಜೊಲ್ಲೆ ಅವರನ್ನು ಭೇಟಿ ಮಾಡಿ ಚರ್ಚೆ ನಡೆಸಿತು. ಕಳೆದ ನಾಲ್ಕು ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ 284 ನೌಕರರಿಗೆ 6ನೇ ವೇತನ ನೀಡಲು ಸಚಿವ ಎಸ್.ಅಂಗಾರ ಅವರು ಮುತುವರ್ಜಿ ವಹಿಸಿ ಈ ಬಗ್ಗೆ ನಿರ್ಣಯಿಸುವಂತೆ ಮುಜರಾಯಿ ಸಚಿವರಲ್ಲಿ ತಿಳಿಸಿದರು.

ಬಳಿಕ ಸಚಿವದ್ವಯರು 6ನೇ ವೇತನ ನೀಡಲು ನಿರ್ಣಯಿಸಿದರು. ಮುಜರಾಯಿ ಸಚಿವರು ನೌಕರರ 6ನೇ ವೇತನ ಮಂಜೂರಾತಿ ಕಡತಕ್ಕೆ ಸಹಿ ಮಾಡಿದರು. ಈ ತಿಂಗಳಾತ್ಯದಲ್ಲಿ ಕುಕ್ಕೆಯಲ್ಲಿ ನಡೆಯುವ ಮಾಸ್ಟರ್‌ಪ್ಲಾನ್ ಸಭೆಯ ಸಂದರ್ಭ ಇಬ್ಬರು ಸಚಿವರು ನೌಕರರಿಗೆ 6ನೇ ವೇತನ ಮಂಜೂರಾತಿ ಪ್ರತಿಯನ್ನು ವಿತರಿಸಲು ನಿರ್ಣಯಿಸಿದರು.

122 ಸಿಬ್ಬಂದಿಗೆ ಖಾಯಂಮಾತಿ:
ತಾತ್ಕಾಲಿಕ ನೆಲೆಯಲ್ಲಿದ್ದ ಕುಕ್ಕೆ ದೇವಳದ 122 ಮಂದಿ ನೌಕರರಿಗೆ ಸಚಿವ ಅಂಗಾರ ಅವರ ಮುತುವರ್ಜಿಯಿಂದ ಈಗಾಗಲೇ ಖಾಯಂ ನೇಮಕಾತಿಗೊಳಿಸಲಾಗಿದೆ. ಈ ಖಾಯಂಮಾತಿಯ ಆದೇಶವನ್ನು ಕೂಡಾ ಮಾಸ್ಟರ್‌ಪ್ಲಾನ್ ಸಭೆಯಲ್ಲಿ ನೌಕರರಿಗೆ ಸಚಿವರು ವಿತರಿಸಲಿದ್ದಾರೆ.ಈ ಮೂಲಕ ಉಸ್ತುವಾರಿ ಸಚಿವರ ಮತ್ತು ಆಡಳಿತ ಮಂಡಳಿಯ ಪ್ರಯತ್ನದ ಫಲವಾಗಿ ಕುಕ್ಕೆ ದೇವಳದ 406 ಸಿಬ್ಬಂಧಿಗಳ 4 ವರ್ಷಗಳ ಕನಸು ನನಸಾದಂತಾಗಿದೆ.

ಶೀಘ್ರ ಸೇವೆ ಆರಂಭಿಸಲು ಮುಖ್ಯಮಂತ್ರಿಗಳಿಗೆ ಮನವಿ:
ಕುಕ್ಕೆ ಸುಬ್ರಹ್ಮಣ್ಯ, ಧರ್ಮಸ್ಥಳ ಮತ್ತು ಕಟೀಲಿನಲ್ಲಿ ಸೇವೆಗಳು ನಡೆಯದೆ ಇರುವುದರಿಂದ ಭಕ್ತರಿಗೆ ತೊಂದರೆಯಾಗಿದೆ ಆದುದರಿಂದ ಶೀಘ್ರ ಈ ಪ್ರಧಾನ ಕ್ಷೇತ್ರಗಳಲ್ಲಿ ಸೇವೆಗಳನ್ನು ಆರಂಭಿಸಬೇಕು ಎಂದು ನಿಯೋಗವು ಸಚಿವರಲ್ಲಿ ವಿನಂತಿಸಿತು.

ಪ್ರಧಾನ ದೇವಳಗಳಲ್ಲಿ ಸೇವೆಗಳ ಆರಂಭ, ಪ್ರಸಾದ ವಿತರಣೆ, ಪೂಜೆಗಳ ಆರಂಭ ಮಾಡಲು ಕ್ರಮಕೈಗೊಳ್ಳುವಂತೆ ಮುಖ್ಯಮಂತ್ರಿಗಳಲ್ಲಿ ಮನವಿ ಸಲ್ಲಿಸುವುದು. ಹಾಗೂ ಸೇವೆ ಇಲ್ಲದಿರುವುದರಿಂದ ಭಕ್ತರಿಗೆ ಆಗುವ ಸಮಸ್ಯೆಗಳನ್ನು ವಿವರಿಸಿ ಶೀಘ್ರವೇ ಸೇವೆ ಆರಂಭಿಸಲು ವ್ಯವಸ್ಥೆ ಮಾಡಲು ಮುಖ್ಯಮಂತ್ರಿಗಳಲ್ಲಿ ವಿನಂತಿಸುವುದಾಗಿ ಸಚಿವದ್ವಯರು ನಿರ್ಣಯಿಸಿದರು. ಈ ಸಂದರ್ಭ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಮೋಹನರಾಂ ಸುಳ್ಳಿ, ಜಿಲ್ಲಾ ಬಿಜೆಪಿ ಶಿಕ್ಷಣ ಪ್ರಕೋಷ್ಠದ ಅಧ್ಯಕ್ಷ ಕೃಷ್ಣ ಶೆಟ್ಟಿ ಕಡಬ, ವ್ಯವಸ್ಥಾಪನಾ ಸಮಿತಿ ಸದಸ್ಯ ಪ್ರಸನ್ನ ದರ್ಬೆ, ಉಪಸ್ಥಿತರಿದ್ದರು.

driving
- Advertisement -

Related news

error: Content is protected !!