Monday, June 22, 2026
spot_imgspot_img
spot_imgspot_img

ಪುತ್ತೂರು: 2 ಅಂಗಡಿಗಳಿಗೆ ನುಗ್ಗಿ ಕಳವು

- Advertisement -
- Advertisement -

ಪುತ್ತೂರು ಉಪ್ಪಿನಂಗಡಿ ರಸ್ತೆಯ ಕೃಷ್ಣನಗರ ಚರ್ಚ್ ಬಳಿಯ ಎರಡು ಅಂಗಡಿಗಳಿಗೆ ಕಳ್ಳರು ನುಗ್ಗಿದ ಘಟನೆ ನಡೆದಿದ್ದು ಬೆಳಗ್ಗೆ ಮಾಲೀಕರು ಅಂಗಡಿ ತೆರೆದಾಗ ಈ ಘಟನೆ ಬೆಳಕಿಗೆ ಬಂದಿದೆ. ಗೋಪಾಲ ಎಂಬವರಿಗೆ ಸೇರಿದ ಅಂಗಡಿಗೆ ಕಳ್ಳರು ಪಕ್ಕದ ಮರ ಏರಿ ಶೀಟ್ ಜಾರಿಸಿ ಒಳನುಗ್ಗಿ ಅಂಗಡಿಯಲ್ಲಿದ್ದ ಸಿಗರೇಟು ಪ್ಯಾಕೇಟ್, ಗುಡ್ಕಾ ಹಾಗೂ ಚಿಲ್ಲರೆ ಹಣವನ್ನು ಕಳವು ಮಾಡಿದ್ದಾರೆ.

ಇನ್ನು ಪಕ್ಕದ ಲತೀಫ್ ಎಂಬವರ ತರಕಾರಿ ಅಂಗಡಿಯ ರೋಲಿಂಗ್ ಶೆಟರ್ ಮೂಲಕ ಒಳನುಗ್ಗಿದ ಕಳ್ಳರು ಡಬ್ಬದಲ್ಲಿ ಇಟ್ಟಿದ್ದ ರೂ.300 ಅನ್ನು ಕಳವು ಮಾಡಿದ್ದಾರೆ. ಅಂತೆಯೇ ಉಪ್ಪಿನಂಗಡಿಯ ಕೊಪ್ಪಳ ಎಂಬಲ್ಲಿ 4 ಮನೆಗಳಿಗೆ ಕಳ್ಳರು ನುಗ್ಗಿದ ಘಟನೆಯೂ ನಡೆದಿದೆ.

- Advertisement -

Related news

error: Content is protected !!