Friday, July 11, 2025
spot_imgspot_img
spot_imgspot_img

ಚಂದನವನದಲ್ಲಿ ಮತ್ತೆ ಮೂಡಲಿದೆಯಾ ‘ರಮ್ಯಾ’ ಚೈತ್ರಕಾಲ!

- Advertisement -
- Advertisement -

ಬೆಂಗಳೂರು: ಕನ್ನಡ ಚಿತ್ರರಂಗದಲ್ಲಿ ಮೋಹಕ ತಾರೆ ರಮ್ಯಾ ಅವರಿಗೆ ಇಂದಿಗೂ ಬೇಡಿಕೆ ಇದೆ. ಅವರು ಸಮ್ಮತಿ ಸೂಚಿಸಿದರೆ ಹತ್ತಾರು ಸಿನಿಮಾಗಳಿಂದ ಆಫರ್ ಗಳು ಅವರತ್ತ ಹರಿದು ಬರುತ್ತವೆ. ಇದುವರೆಗೆ ಮೋಹಕ ತಾರೆ ರಮ್ಯಾ ಮಾತ್ರ ಮತ್ತೆ ಬಣ್ಣ ಹಚ್ಚುವುದರ ಕುರಿತು ಸ್ಪಷ್ಟವಾದ ನಿಲುವು ಪ್ರಕಟಿಸಿರಲಿಲ್ಲ. ಆದರೆ, ಇದೀಗ ಬೆಳ್ಳಿ ಪರದೆ ಮೇಲೆ ಮಿಂಚುವ ತುಡಿತ ಹೊರ ಹಾಕಿದ್ದಾರೆ.

ಅಭಿ ಸಿನಿಮಾದ ಮೂಲಕ ಕನ್ನಡ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದ ರಮ್ಯಾ ಅವರು ಬಹುಬೇಡಿಕೆಯ ನಟಿಯಾಗಿ ಖ್ಯಾತಿ ಪಡೆದರು. ರಮ್ಯಾ ಅವರು ರಾಜಕೀಯಕ್ಕೆ ಕಾಲಿಟ್ಟ ಬಳಿಕ ಬಣ್ಣದ ಲೋಕದ ನಂಟು ಕಡಿಮೆ ಮಾಡಿಕೊಂಡಿದ್ದರು. ಕೆಲ ದಿನಗಳಿಂದ ರಾಜಕೀಯದಿಂದಲೂ ದೂರ ಉಳಿದಿರುವ ಅವರು ಇದೀಗ ಸಿನಿಮಾಗಳಲ್ಲಿ ನಟಿಸುವ ಸೂಚನೆ ನೀಡಿದ್ದಾರೆ.

ಇತ್ತೀಚಿಗೆ ಪತ್ರಿಕೆಗೆ ನೀಡಿರುವ ಸಂದರ್ಶನದಲ್ಲಿ ಮತ್ತೆ ಅಭಿನಯಿಸುವ ಬಗ್ಗೆ ಹೇಳಿಕೊಂಡಿದ್ದಾರೆ ರಮ್ಯಾ. “ನಾನು ಸಿನಿಮಾ ಮಾಡಲು ಒಪ್ಪಿಕೊಳ್ಳುವೆ ಎಂದು ಹೇಳಿದರೆ ಸಾಕಷ್ಟು ಜನರಿಗೆ ಖುಷಿಯಾಗುತ್ತದೆ. ನನ್ನ ಬಳಿ ಕೆಲ ಆಫರುಗಳು ಬಂದಿವೆ, ಅವುಗಳಿಗೆ ನಾನು ಹೇಳಬೇಕು ಎಂದು ಯೋಚನೆ ಮಾಡುತ್ತಿದ್ದೇನೆ. ಆದರೆ, ನಿಜ ಹೇಳಬೇಕೆಂದರೆ ನೋಡೋಣ ಅಂತ ಹೇಳಬೇಕಾಗುತ್ತದೆ, ನಾನು ಆಗಲ್ಲ ಎಂದು ಹೇಳಿದರೆ ಅನೇಕರು ಬೇಸರ ಮಾಡಿಕೊಳ್ಳುತ್ತಾರೆ” ಎನ್ನುವ ಮೂಲಕ ಪರೋಕ್ಷವಾಗಿ ಮತ್ತೆ ಚಿತ್ರರಂಗದತ್ತ ಮುಖಮಾಡುವ ಸೂಚನೆ ನೀಡಿದ್ದಾರೆ.

driving
- Advertisement -

Related news

error: Content is protected !!