Thursday, October 1, 2026
spot_imgspot_img
spot_imgspot_img

ಬೈರಂಪಳ್ಳಿ: ಮಕ್ಕಳ ಬೇಸಿಗೆ ಶಿಬಿರದ ಸಮಾರೋಪ ಸಮಾರಂಭ ಕಾರ್ಯಕ್ರಮ

- Advertisement -
- Advertisement -

ಬೈರಂಪಳ್ಳಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಮಕ್ಕಳ ಬೇಸಿಗೆ ಶಿಬಿರದ ಸಮಾರೋಪ ಸಮಾರಂಭ ಕಾರ್ಯಕ್ರಮ ನಡೆಯಿತು.

ಗ್ರಾಮ ಪಂಚಾಯತ್‌ ಸದಸ್ಯರ ನೆಲೆಯಲ್ಲಿ ಪಾಲ್ಗೊಂಡು ಮಕ್ಕಳ ಹಕ್ಕು, ಸಾಮಾಜಿಕ ಜೀವನ, ಕಾನೂನಿನ ಅರಿವು, ಆಧುನೀಕರಣದ ಉಪಯೋಗ ಮತ್ತು ಪರಿಣಾಮದ ಬಗ್ಗೆ ಮಾಹಿತಿ ಹಂಚಿಕೊಳ್ಳಲಾಯಿತು. ಈ ಸಂದರ್ಭ ಶಿಕ್ಷಣ ಫೌಂಡೇಶನ್‌ ಉಡುಪಿ ಜಿಲ್ಲಾ ಸಂಯೋಜಕಿ ಶ್ರೀಮತಿ ರೀನಾ ಎಸ್ ಹೆಗ್ಡೆ, ಗ್ರಾಮ ಪಂಚಾಯತ್ ಅದ್ಯಕ್ಷ ಪ್ರಸಾದ್ ಮಲ್ಯ ಹಾಗೂ ಶಿಕ್ಷಕ ಸುಭಾಷ್ ಉಪಸ್ಥಿತರಿದ್ದರು.

ಮಕ್ಕಳಿಗೆ ಸಿಹಿ ತಿಂಡಿ ವಿತರಿಸಿ ಬಳಿಕ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮವನ್ನು ಗ್ರಂಥಾಲಯ ಸಿಬ್ಬಂದಿ ಶ್ರೀಮತಿ ಶಶಿಕಲಾ ನಿರೂಪಿಸಿ ಧನ್ಯವಾದಗೈದರು.

- Advertisement -

Related news

error: Content is protected !!