
ಶ್ರೀನಗರ: ಜಮ್ಮು ಕಾಶ್ಮೀರದ ಉರಿ ಬಳಿಯ ರಾಂಪುರ ಸೆಕ್ಟರ್ ನ ಲೈನ್ಆಪ್ ಕಂಟ್ರೋಲ್ ಬಳಿ ಭಾರತೀಯ ಸೇನಾಪಡೆಯ ಯೋಧರು ಮೂವರು ಉಗ್ರರನ್ನು ಹೊಡೆದುರುಳಿಸಿದ್ದು, ಆ ಮೂಲಕ ಸಂಭವನೀಯ ಭಯೋತ್ಪಾದಕ ದಾಳಿಯನ್ನು ವಿಫಲಗೊಳಿಸಿದ್ದಾರೆ.

ಮೂಲಗಳ ಮಾಹಿತಿಯ ಅನ್ವಯ, ಭಯೋತ್ಪಾದಕರು ಇತ್ತೀಚೆಗೆ ಪಾಕ್ ಅಕ್ರಮಿತ ಕಾಶ್ಮೀರ ಭಾಗದಿಂದ ದೇಶದ ಗಡಿಯೊಳಗೆ ನುಸುಳಿ ಬಂದಿದ್ದರು. ಅವರ ಬಳಿ ಪಾಕಿಸ್ತಾನಿ ಪ್ರಜೆಗಳೇ ಎಂಬ ಬಗ್ಗೆ ಅಗತ್ಯ ದಾಖಲೆಗಳು ಪತ್ತೆಯಾಗಿದೆ. ಅಲ್ಲದೇ ಸೇನೆಯ ಅಧಿಕಾರಿಗಳು 5 ಎಕೆ-47 ಗನ್ಗಳು, 8 ಪಿಸ್ತೂಲ್ ಮತ್ತು 70 ಗ್ರೆನೇಡ್ಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಇದರೊಂದಿಗೆ ಈ ವರ್ಷ ಕಾಶ್ಮೀರದಲ್ಲಿ ಬರೋಬ್ಬರಿ 97 ಪಿಸ್ತೂಲ್ಗಳನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ.


ಈ ಕುರಿತು ಮಾಹಿತಿ ನೀಡಿರುವ ಸೇನಾ ಜೆನರಲ್ ಡಿಪಿ ಪಾಂಡೇ, ರಾಮ್ಪುರ ಸೆಕ್ಟರ್ನ ಹತ್ಲಾಂಗ ಅರಣ್ಯ ಪ್ರದೇಶದಲ್ಲಿ ಉ್ರಗರು ಒಳನುಸುಳಿರುವ ಬಗ್ಗೆ ಕಾರ್ಯಾಚರಣೆ ನಡೆಸಲಾಗಿದೆ. ಇದರಲ್ಲಿ ಮೂವರು ಉಗ್ರರು ಸಾವನ್ನಪ್ಪಿದ್ದಾರೆ. ಸೆ.18ರಂದು ಕೂಡ ಕಾರ್ಯಾಚರಣೆ ನಡೆಸಲಾಗಿತ್ತು. ಆದರೆ ಆ ವೇಳೆ ಕಾರ್ಯಾಚರಣೆ ವಿಫಲವಾಗಿತ್ತು ಎಂದು ತಿಳಿಸಿದ್ದಾರೆ.

ಅಲ್ಲದೇ ಜಮ್ಮು ಕಾಶ್ಮೀರದಲ್ಲಿ ಸೇನೆ ಮತ್ತು ಪೊಲೀಸರು ಉಗ್ರರಿಗೆ ಶರಣಾಗಿ ಸಾರ್ವಜನಿಕ ಜೀವನ ನಡೆಸಲು ಅಗತ್ಯವಿರುವ ಕ್ರಮಕೈಗೊಳ್ಳಲು ಅವಕಾಶ ನೀಡಲಾಗಿದೆ. ಕಾಶ್ಮೀರದಲ್ಲಿ ನಡೆಯುತ್ತಿರುವ ಅಭಿವೃದ್ಧಿಯ ಕೆಲಸಗಳನ್ನು ನೋಡಿ ಪಾಕಿಸ್ತಾನ ನಿರಾಶೆಗೊಂಡಿದ್ದು, ಆದ್ದರಿಂದ ಹೊಸ ಮಾದರಿಯಲ್ಲಿ ನಾಗರೀಕರು ಹಾಗೂ ಭಾರತ ಸೇನಾ ಯೋಧರ ಮೇಲೆ ದಾಳಿ ನಡೆಸಲು ಪಿಸ್ತೂಲ್ಗಳನ್ನು ಬಳಕೆ ಮಾಡಿಕೊಳ್ಳಲು ಮುಂದಾಗಿದೆ. ಕಾಶ್ಮೀರದಲ್ಲಿ ಪಿಸ್ತೂಲ್ ಬಳಕೆ ಮಾಡಲು ಪಾಕಿಸ್ತಾನ ಮುಂದಾಗಿದ್ದು, ಪಿಸ್ತೂಲ್ಗಳನ್ನು ಸುಲಭವಾಗಿ ತೆಗೆದುಕೊಂಡು ಹೋಗಿ ದಾಳಿ ನಡೆಸಬಹುದು ಎಂಬುವುದು ಅವರ ಉದ್ದೇಶವಾಗಿದೆ. ರಕ್ಷಣಾ ಪಡೆಗಳು ಈ ಪ್ರದೇಶದಲ್ಲಿ ತಮ್ಮ ಕಾರ್ಯಾಚರಣೆಯನ್ನು ಮುಂದುವರಿಸಿದೆ ಎಂದು ಡಿಪಿ ಪಾಂಡೇ ವಿವರಿಸಿದ್ದಾರೆ.



