Friday, April 26, 2024
spot_imgspot_img
spot_imgspot_img

ಹೆತ್ತತಾಯಿಗೂ ಭಾರವಾಯಿತೇ ಈ ಹಸುಗೂಸು! ಮಗುವನ್ನು ಆಸ್ಪತ್ರೆಯಲ್ಲೇ ಬಿಟ್ಟು ಹೋದ ತಂದೆ-ತಾಯಿ!?

- Advertisement -G L Acharya panikkar
- Advertisement -

ಮೀರತ್ : ಮಕ್ಕಳ ಹುಟ್ಟು ಹೊಸ ಸಂಭ್ರಮಗಳನ್ನು ತರುತ್ತದೆ. ಹಾಗಂತಲೇ ಅವನ್ನು ಚೆನ್ನಾಗಿ ಸಾಕಿ ಸಲುಹುವ ಬಗ್ಗೆ ತಂದೆತಾಯಿ ಹಲವು ಕನಸುಗಳನ್ನು ಕಾಣುತ್ತಾರೆ. ಆದರೆ, ಹುಟ್ಟಿದ ಮಕ್ಕಳನ್ನು ಹೆರಿಗೆಯಾದ ಸರ್ಕಾರಿ ಆಸ್ಪತ್ರೆಯಲ್ಲೇ ತೊರೆದು ತಂದೆ-ತಾಯಿ ಇಬ್ಬರೂ ಓಡಿ ಹೋಗಿರುವ ಅಮಾನವೀಯ ಪ್ರಸಂಗ ಉತ್ತರ ಪ್ರದೇಶದಿಂದ ವರದಿಯಾಗಿದೆ.

ಮೀರತ್ ಮೆಡಿಕಲ್ ಕಾಲೇಜು ಆಸ್ಪತ್ರೆಗೆ ನಕಲಿ ಮೊಬೈಲ್ ನಂಬರ್​ಗಳನ್ನು ಕೊಟ್ಟು ಹೆರಿಗೆಗೆ ದಾಖಲಾಗಿದ್ದ ಇಮ್ರಾನಾ ಮತ್ತು ಆಕೆಯ ಗಂಡ ಶಮೀಮ್, ಈ ರೀತಿ ಓಡಿ ಹೋಗಿರುವ ತಾಯಿ-ತಂದೆ. ರಾಜ್ಯದ ಶಾಮ್ಲಿ ಜಿಲ್ಲೆಯ ಕೈರಾಣ ಎಂಬ ಸ್ಥಳದ ನಿವಾಸಿಗಳೆನ್ನಲಾದ ಈ ದಂಪತಿ ತ್ಯಜಿಸಿಹೋದ ಎರಡು ಹೆಣ್ಣುಮಕ್ಕಳಲ್ಲಿ ಒಂದು ಮಗು ಸಾವಪ್ಪಿದೆ.

ಮಾರ್ಚ್ 22 ರಂದು ಇಮ್ರಾನಾ ಎಂಬುವರಿಗೆ ಹೆರಿಗೆಯಾಗಿದ್ದು, ಎರಡು ಅವಳಿ ಹೆಣ್ಣು ಮಕ್ಕಳು ಹುಟ್ಟಿದವು. ನಂತರ ತಾಯಿ ಮಕ್ಕಳನ್ನು ವಾರ್ಡ್​ಗೆ ಶಿಫ್ಟ್ ಮಾಡಲಾಯಿತು. ಸ್ವಲ್ಪ ಸಮಯದಲ್ಲೇ ವಾರ್ಡ್​ನಲ್ಲಿ ಎಳೆಯ ಮಕ್ಕಳು ವಿಪರೀತ ಅಳುವುದು ಕೇಳಿದಾಗ, ಆಸ್ಪತ್ರೆ ಸಿಬ್ಬಂದಿ ತಾಯಿ ತಂದೆಯನ್ನು ಹುಡುಕಲಾಗಿ ಇಬ್ಬರೂ ನಾಪತ್ತೆಯಾಗಿದ್ದರು ಎನ್ನಲಾಗಿದೆ. ತಾಯಿಯ ಆರೈಕೆಯಿಲ್ಲದೆ ಮಕ್ಕಳ ಪರಿಸ್ಥಿತಿ ಬಿಗಡಾಯಿಸಲು ಆರಂಭವಾದಾಗ ಅವನ್ನು ಮಕ್ಕಳ ವಾರ್ಡ್​ಗೆ ಶಿಫ್ಟ್ ಮಾಡಿ ಶುಶ್ರೂಷೆ ಮಾಡಲಾಯಿತು. ಆದರೆ ಒಂದು ಮಗು ಈ ಸಮಯದಲ್ಲಿ ಸಾವಪ್ಪಿತು ಎನ್ನಲಾಗಿದೆ.

ಈ ಬಗ್ಗೆ ಪೊಲೀಸರಿಗೆ ಮತ್ತು ಜಿಲ್ಲಾ ಬಾಲ ಕಲ್ಯಾಣ ಸಮಿತಿಗೆ ಆಸ್ಪತ್ರೆ ಸಿಬ್ಬಂದಿ ವಿಷಯ ತಿಳಿಸಿದ್ದಾರೆ. ಬದುಕುಳಿದ ಮಗುವಿನ ಜವಾಬ್ದಾರಿಯನ್ನು ಹೊತ್ತಿರುವ ಬಾಲ ಕಲ್ಯಾಣ ಸಮಿತಿ, ಅದನ್ನು ಬಡೌನ್ ಅನಾಥಾಶ್ರಮಕ್ಕೆ ದಾಖಲಿಸುವ ನಿರ್ಧಾರ ತೆಗೆದುಕೊಂಡಿದೆ. ಅತ್ತ ಪೊಲೀಸರು ಕಾಣೆಯಾದ ದಂಪತಿಯ ಹುಡುಕಾಟದಲ್ಲಿ ತೊಡಗಿದ್ದಾರೆ. 

- Advertisement -

Related news

error: Content is protected !!