Wednesday, July 22, 2026
spot_imgspot_img
spot_imgspot_img

IPL2021: RCB ವಿರುದ್ಧ ಸಿಎಸ್​​ಕೆಗೆ 6 ವಿಕೆಟ್​​ಗಳ ಭರ್ಜರಿ ಜಯ

- Advertisement -
- Advertisement -
driving

ಇಂಡಿಯನ್​​ ಪ್ರೀಮಿಯರ್​​​​ ಲೀಗ್​​ 15ನೇ ಸೀಸನ್​​​ನ ರಾಯಲ್​​ ಚಾಲೆಂಜರ್ಸ್​ ಬೆಂಗಳೂರು ಮತ್ತು ಚೆನ್ನೈ ಸೂಪರ್ ಕಿಂಗ್ಸ್​ ನಡುವಿನ 35ನೇ ಪಂದ್ಯ ಶಾರ್ಜಾದ ಮೈದಾನದಲ್ಲಿ ನಡೆಯಿತು. ಟಾಸ್​​ ಸೋತರೂ ಮೊದಲು ಬ್ಯಾಟಿಂಗ್​​​​ ಮಾಡಿದ ಆರ್​ಸಿಬಿ ಚೆನ್ನೈಗೆ 157 ರನ್​​ಗಳ ಗುರಿ ನೀಡಿತು. ಆರ್​ಸಿಬಿ ನೀಡಿದ ರನ್​​ಗಳ ಟಾರ್ಗೆಟ್​ ಬೆನ್ನತ್ತಿದ ಚೆನ್ನೈ ಕೇವಲ 18.1 ಓವರ್​​ಗಳಲ್ಲಿ 157 ರನ್​​ ಗಳಿಸುವ ಮೂಲಕ ಭರ್ಜರಿ ಜಯ ಸಾಧಿಸಿದೆ.

ಮೊದಲು ಉತ್ತಮ ಇನ್ನಿಂಗ್ಸ್ ಆರಂಭಿಸಿದ ರುತುರಾಜ್ ಗಾಯಕ್ವಡ್ ಮತ್ತು ಫ್ಯಾಫ್ ಡುಪ್ಲೆಸಿಸ್ 59 ರನ್​​ಗಳ ಜತೆಯಾಟ ಆಡಿದರು. ಚಹಲ್​​​ ಎಸೆತದಲ್ಲಿ ಸಿಕ್ಸ್​ ಹೊಡೆಯಲು ಹೋದ ರಿತುರಾಜ್ ಗಾಯಕ್ವಾಡ್​​ ವಿರಾಟ್​​ ಕೊಹ್ಲಿಗೆ ಅಚ್ಚರಿಯ ಕ್ಯಾಚ್ ನೀಡಿದರು. ನಂತರ ಡುಪ್ಲೆಸಿಸ್ ಔಟಾದರು. ನಂತರ ಕ್ರೀಸ್​​ಗೆ ಬಂದ ಮೊಯೀನ್ ಅಲಿ 18 ಬಾಲ್​​ಗಳಲ್ಲಿ 23 ರನ್​​ ಹೊಡೆದು ವಿಕೆಟ್​​ ಒಪ್ಪಿಸಿದರು. ಬಳಿಕ ಫೀಲ್ಡಿಗೆ ಬಂದ ಎಂ.ಎಸ್​ ಧೋನಿ ಮತ್ತು ರೈನಾ ಚೆನ್ನೈ ತಂಡವನ್ನು ಗೆಲುವಿನ ದಡ ಸೇರಿಸಿದರು.

ಇನ್ನು, ಆರ್​​ಸಿಬಿ ಪರ ಆರಂಭಿಕ ಆಟಗಾರ ದೇವದತ್ ಪಡಿಕ್ಕಲ್ ಮತ್ತು ನಾಯಕ ವಿರಾಟ್​ ಕೊಹ್ಲಿ 111 ರನ್​ಗಳ ಜೊತೆಯಾಟದೊಂದಿಗೆ ಭರ್ಜರಿ ಆಟ ಆಡಿದರು. ಆದರೆ, ಕೊನೆಯ 7 ಓವರ್​​ಗಳಲ್ಲಿ ಮಾತ್ರ ವಿರಾಟ್​​ ಕೊಹ್ಲಿ ನಂತರ ಬ್ಯಾಕ್​​ ಟು ಬ್ಯಾಕ್​​ ವಿಕೆಟ್​​ ಕಳೆದುಕೊಂಡ ಆರ್​ಸಿಬಿ 156 ರನ್​​ ಪೇರಿಸಿತು.

ಕೊಹ್ಲಿ 53(41), ದೇವದತ್​​ ಪಡಿಕ್ಕಲ್​ 70(50), ಎಬಿ ಡಿವಿಲಿಯರ್ಸ್​ 12(11), ಮ್ಯಾಕ್ಸ್​ವೆಲ್​ 11(9) ರನ್​​​ ಗಳಿಸಿದರು. ಡ್ವೇನ್ ಬ್ರಾವೊ ಮತ್ತು ಶಾರ್ದೂಲ್ ಠಾಕೂರ್ ಉತ್ತಮ ಬೌಲಿಂಗ್​​ ಪ್ರದರ್ಶನ ಮಾಡಿದ ಕಾರಣ 200 ರನ್​​​​ ದಾಟಬೇಕಿದ್ದ ಆರ್​ಸಿಬಿ 6 ವಿಕೆಟ್​​ ನಷ್ಟಕ್ಕೆ ಕೇವಲ 156 ಗಳಿಸಿತು.

- Advertisement -

Related news

error: Content is protected !!