Saturday, July 5, 2025
spot_imgspot_img
spot_imgspot_img

ಆನ್ ಲೈನ್ ಗೆಳೆತನದಿಂದಾಗಿ ಲಕ್ಷಾಂತರ ರೂ. ಕಳೆದುಕೊಂಡ ಯುವತಿ

- Advertisement -
- Advertisement -

ಲಕ್ನೋ: 45 ಲಕ್ಷದ ಗಿಫ್ಟ್ ಆಸೆಗೆಯುವತಿಯೋರ್ವಳು 32 ಲಕ್ಷ ರೂ. ಕಳೆದುಕೊಂಡ ಘಟನೆ ಉತ್ತರಪ್ರದೇಶದ ರಾಯ್ ಬರೇಲಿ ಜಿಲ್ಲೆಯಲ್ಲಿ ನಡೆದಿದೆ.

ಯುವತಿ ಸೋಶಿಯಲ್ ಮೀಡಿಯಾ ಇನ್‍ಸ್ಟಾಗ್ರಾಮ್ ನಲ್ಲಿ ಪರಿಚಯವಾದ ಸ್ನೇಹಿತನ ಮಾತು ನಂಬಿ ಈ ಮೋಸದ ಬಲೆಗೆ ಬಿದ್ದಿದ್ದಾಳೆ.

ಯುಕೆ ನಿವಾಸಿ ಎಂದು ಯುವತಿಗೆ ಇನ್‍ಸ್ಟಾಗ್ರಾಮ್ ನಲ್ಲಿ ಯುವಕನೊಬ್ಬ ಪರಿಚಯ ಮಾಡಿಕೊಂಡಿದ್ದಾನೆ. ಇದನ್ನು ನಂಬಿ ಯುವತಿಯು ಅವನ ಜೊತೆ ಸ್ನೇಹ ಬೆಳೆಸಿದ್ದಾಳೆ. ಬಳಿಕ ಯುವಕ ನಿಮಗೆ 45 ಲಕ್ಷದ ಉಡುಗೊರೆಯನ್ನು ಕಳುಹಿಸುತ್ತಿದ್ದೇನೆ ಅದಕ್ಕೆ ನೀವು 32 ಲಕ್ಷ ಟ್ಯಾಕ್ಸ್ ಕಟ್ಟಬೇಕು ಎಂದು ಹೇಳಿದ್ದಾನೆ.

ಇದನ್ನು ನಂಬಿ ಉಡುಗೊರೆಗೆ ಆಸೆ ಬಿದ್ದು, ಯುವತಿ ಆತನಿಗೆ 32 ಲಕ್ಷ ರೂ. ಆನ್‍ಲೈನ್ ಮೂಲಕ ಕಳುಹಿಸಿ ಕೊಟ್ಟಿದ್ದಾಳೆ, ಹಣ ಕಳುಹಿಸಿದ ನಂತರ ಯುವಕ ಈಕೆಯ ಸಂಪರ್ಕಕ್ಕೆ ಸಿಕ್ಕಿಲ್ಲ. ಯಾವುದೇ ರೀತಿಯ ಪ್ರತಿಕ್ರಿಯೆಯನ್ನು ನೀಡಿಲ್ಲ.

ಈ ಕುರಿತು ಸೈಬರ್ ಸೆಲ್ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆಯನ್ನು ನಡೆಸುತ್ತಿದ್ದಾರೆ.

driving
- Advertisement -

Related news

error: Content is protected !!