Sunday, May 5, 2024
spot_imgspot_img
spot_imgspot_img

ಇನ್ಫೋಸಿಸ್ ನಾರಾಯಣ ಮೂರ್ತಿ ಅಳಿಯ ರಿಷಿ ಬ್ರಿಟನ್‌ ಮುಂದಿನ ಪ್ರಧಾನಿ

- Advertisement -G L Acharya panikkar
- Advertisement -

ನ್ಯೂಯಾರ್ಕ್ : ಕೊರೋನಾ ಬಳಿಕ ಬ್ರಿಟನ್‌ ಪ್ರಧಾನಿ ಬೋರಿಸ್‌ ಜಾನ್ಸನ್‌ ಜನಪ್ರಿಯತೆಗೆ ಭಾರೀ ಪೆಟ್ಟು ಬಿದ್ದಿದೆ. ಆದರೆ ಇದೇ ಅವಧಿಯಲ್ಲಿ ಬೋರಿಸ್‌ ಸಂಪುಟದಲ್ಲಿ ಹಣಕಾಸು ಸಚಿವರಾಗಿರುವ ಬೆಂಗಳೂರು ಮೂಲದ ಇಸ್ಫೋಸಿಸ್‌ ಸಂಸ್ಥಾಪಕ ಎನ್‌.ಆರ್‌.ನಾರಾಯಣ ಮೂರ್ತಿ ಅವರ ಅಳಿಯ ರಿಷಿ ಸುನಕ್‌ ಅವರ ಜನಪ್ರಿಯತೆಯಲ್ಲಿ ಭಾರೀ ಏರಿಕೆ ಕಂಡುಬಂದಿದೆ.

ಇದು ಮುಂದಿನ ದಿನಗಳಲ್ಲಿ ಅವರ ಸಂಭಾವ್ಯ ಪ್ರಧಾನಿ ಅಭ್ಯರ್ಥಿಯಾಗಿ ಹೊರಹೊಮ್ಮುವ ಸುಳಿವು ಎಂಬರ್ಥದ ವರದಿಯೊಂದನ್ನು ನ್ಯೂಯಾರ್ಕ್ ಟೈಮ್ಸ್‌ ವರದಿ ಮಾಡಿದೆ.

ಕೊರೋನಾ ನಿರ್ವಹಣೆಯಲ್ಲಿ ಜಾನ್ಸನ್‌ ವೈಫಲ್ಯದ ಬಗ್ಗೆ ಭಾರೀ ಟೀಕೆ ವ್ಯಕ್ತವಾಗಿದ್ದರೂ, ಇದೇ ಅವಧಿಯಲ್ಲಿ ಅತ್ಯಂತ ಸಂಯಮದಿಂದ ವರ್ತಿಸುವ ಮೂಲಕ, ಉದ್ಯೋಗ ಕಳೆದುಕೊಂಡವರಿಗೆ ಭಾರೀ ಪ್ರಮಾಣದಲ್ಲಿ ಹಣಕಾಸಿನ ನೆರವು ಮೂಲಕ ರಿಷಿ ಸುನಕ್‌ ಎಲ್ಲರ ಮೆಚ್ಚುಗೆ ಗಳಿಸಿದ್ದಾರೆ.

ಈ ವರ್ಷದ ಆರಂಭದಿಂದಲೂ ಸುನಕ್‌ ಅವರ ಜನಪ್ರಿಯತೆ ಹೆಚ್ಚುತ್ತಲೇ ಇದೆ. ಪ್ರಧಾನಿಯಾಗಿ ಹೊಂದಿರಬೇಕಾದ ಹಲವು ಅರ್ಹತೆಗಳ ಕೊರತೆಯನ್ನು ಜಾನ್ಸನ್‌ ಎದುರಿಸುತ್ತಿದ್ದರೆ, ಅವೆಲ್ಲವನ್ನೂ ಸುನಕ್‌ ಪ್ರದರ್ಶಿಸುತ್ತಿದ್ದಾರೆ. ಇತ್ತೀಚಿನ ಸಮೀಕ್ಷೆಯೊಂದರ ವೇಳೆ ಬೋರಿಸ್‌ ಸಂಪುಟದಲ್ಲಿ ಸುನಕ್‌ ಅತ್ಯಂತ ಹೆಚ್ಚಿನ ಮೆಚ್ಚುಗೆ ಪಡೆದುಕೊಂಡಿದ್ದಾರೆ. ಜಾನ್ಸನ್‌ ಅಂತ್ಯಂತ ಕೆಳಗಿನ ಸ್ಥಾನ ಪಡೆದುಕೊಂಡಿದ್ದಾರೆ.

- Advertisement -

Related news

error: Content is protected !!