Monday, July 7, 2025
spot_imgspot_img
spot_imgspot_img

ಅ.11ರಂದು ಭಾರತೀಯ ಬಾಹ್ಯಾಕಾಶ ಒಕ್ಕೂಟಕ್ಕೆ ಪ್ರಧಾನಿ ಮೋದಿಯಿಂದ ಚಾಲನೆ

- Advertisement -
- Advertisement -

ಭಾರತೀಯ ಬಾಹ್ಯಾಕಾಶ ವಲಯದ ಧ್ವನಿಯಾಗುವ ಉದ್ದೇಶದಿಂದ ಭಾರತೀಯ ಬಾಹ್ಯಾಕಾಶ ಒಕ್ಕೂಟ (ISpA)ಕ್ಕೆ ಪ್ರಧಾನಮಂತ್ರಿ ನರೇಂದ್ರ ಮೋದಿ ಅಕ್ಟೋಬರ್ 11ನೇ ತಾರೀಕಿನ ಸೋಮವಾರದಂದು ಚಾಲನೆ ನೀಡಲಿದ್ದಾರೆ ಎಂದು ಪ್ರಧಾನಮಂತ್ರಿ ಕಾರ್ಯಾಲಯ (PMO) ಶನಿವಾರ ಹೇಳಿದೆ. ಈ ಸಂದರ್ಭದಲ್ಲಿ ಬಾಹ್ಯಾಕಾಶ ವಲಯದ ಪ್ರತಿನಿಧಿಗಳ ಜತೆಗೆ ಮೋದಿ ಸಂವಾದವನ್ನು ನಡೆಸಲಿದ್ದಾರೆ.

ISpAನಿಂದ ನೀತಿ ನಿರೂಪಣೆ ಮತ್ತು ಸರ್ಕಾರ, ಅದರ ಏಜೆನ್ಸಿಗಳೂ ಸೇರಿದಂತೆ ಭಾರತೀಯ ಬಾಹ್ಯಾಕಾಶ ವ್ಯಾಪ್ತಿಯ ಎಲ್ಲ ಭಾಗೀದಾರರನ್ನು ಇದು ಒಳಗೊಳ್ಳುತ್ತದೆ. ಆತ್ಮನಿರ್ಭರ್ ಭಾರತ್​ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಅವರ ದೃಷ್ಟಿಕೋನವನ್ನು ಬಿಂಬಿಸುವಂತೆ, ISpA ಮೂಲಕ ಭಾರತವು ಸ್ವಾವಲಂಬಿಯನ್ನಾಗಲು, ತಾಂತ್ರಿಕವಾಗಿ ಮುನ್ನಡೆಯಲು ಮತ್ತು ಬಾಹ್ಯಾಕಾಶ ವಲಯಕ್ಕೆ ಸಹಾಯ ಮಾಡುತ್ತದೆ ಎಂದು ಪ್ರಧಾನಮಂತ್ರಿ ಕಾರ್ಯಾಲಯ ಹೇಳಿದೆ.

ಬಾಹ್ಯಾಕಾಶ ಮತ್ತು ಉಪಗ್ರಹ ತಂತ್ರಜ್ಞಾನದಲ್ಲಿ ಮುಂದುವರಿದ ಸಾಮರ್ಥ್ಯ ಹೊಂದಿದ ಪ್ರಮುಖ ದೇಶೀಯ ಮತ್ತು ಜಾಗತಿಕ ಕಾರ್ಪೊರೇಷನ್​ನ ಪ್ರತಿನಿಧಿಗಳು ISpA ಪ್ರತಿನಿಧಿಸುತ್ತಾರೆ. ಸ್ಥಾಪಕ ಸದಸ್ಯರಾಗಿ ಲಾರ್ಸನ್ ಟೂಬ್ರೋ, ನೆಲ್ಕೋ (ಟಾಟಾ ಸಮೂಹ), ಒನ್ ವೆಬ್, ಭಾರ್ತಿ ಏರ್​ಟೆಲ್, ಮ್ಯಾಪ್​ಮೈಇಂಡಿಯಾ, ವಲ್​ಚಂದ್​ನಗರ್​ ಇಂಡಸ್ಟ್ರೀಸ್ ಮತ್ತು ಅನಂತ್ ಟೆಕ್ನಾಲಜಿ ಲಿಮಿಟೆಡ್ ಇದ್ದಾರೆ.

ಇತರ ಪ್ರಮುಖ ಸದಸ್ಯರಾಗಿ ಗೋದ್ರೆಜ್, Hughes India, ಅಝಿಸ್ಟಾ- BST ಏರೋಸ್ಪೇಸ್ ಪ್ರೈವೇಟ್ ಲಿಮಿಟೆಡ್, ಬಿಇಎಲ್, ಸೆಂಟ್ರಮ್ ಎಲೆಕ್ಟ್ರಾನಿಕ್ಸ್ ಅಂಡ್ ಮ್ಯಾಕ್ಸರ್ ಇಂಡಿಯಾ ಕೂಡ ಈ ಗುಂಪಿನಲ್ಲಿ ಇರಲಿವೆ ಎಂದು ಪ್ರಧಾನಮಂತ್ರಿ ಕಾರ್ಯಾಲವು ತಿಳಿಸಿದೆ.

driving
- Advertisement -

Related news

error: Content is protected !!