Friday, October 11, 2024
spot_imgspot_img
spot_imgspot_img

ನಮ್ಮ ಭೂಮಿ ಕಬಳಿಸುವ ಶಕ್ತಿ ಈ ಜಗತ್ತಿನಲ್ಲಿ ಯಾರಲ್ಲೂ ಇಲ್ಲ-ರಾಜನಾಥ್‌.!

- Advertisement -
- Advertisement -

ಭಾರತ:-ಚೀನಾ ಸೈನಿಕರ ನಡುವಿನ ಹಿಂಸಾತ್ಮಕ ಗಡಿ ಘರ್ಷಣೆ ಬಳಿಕ, ಶುಕ್ರವಾರ ಲಡಾಖ್ ಗಡಿಗೆ ಭೇಟಿ ನೀಡಿರುವ ರಕ್ಷಣಾ ಸಚಿವ ರಾಜನಾಥ್ ಸಿಂಗ್, ಮುಂಚೂಣಿ ಸೇನಾ ನೆಲೆಗಳ ಸಿದ್ಧತೆ ಕುರಿತು ಹಿರಿಯ ಸೇನಾಧಿಕಾರಿಗಳಿಂದ ಮಾಹಿತಿ ಪಡೆದಿದ್ದಾರೆ.ನಮ್ಮ ಭೂಮಿಯ ಒಂದು ಇಂಚು ಜಾಗವನ್ನೂ ವಿಶ್ವದ ಯಾವುದೇ ಶಕ್ತಿಯಿಂದ ಕಸಿದುಕೊಳ್ಳಲು ಸಾಧ್ಯವಿಲ್ಲ ಎಂಬ ಭರವಸೆಯನ್ನು ನಾನು ನೀಡಬಲ್ಲೆ…’ಎಂದು ಪರೋಕ್ಷವಾಗಿ ಚೀನಾಗೆ ಎಚ್ಚರಿಕೆಯ ಸಂದೇಶ ಕಳುಹಿಸಿದರು.

ಗಾಲ್ವಾನ್‌ ಸಂಘರ್ಷದ ಬಳಿಕ ಇದೇ ಮೊದಲ ಬಾರಿಗೆ ಲಡಾಖ್‌ನ ಮುಂಚೂಣಿಯ ನೆಲೆ ಸ್ಟಾಕ್ನಾಗೆ ಭೇಟಿ ನೀಡಿದ ರಾಜನಾಥ್‌, ಚೀನದ ಮುಖವಾಡ ಕಳಚುವ ಮಾತುಗಳನ್ನಾಡಿದರು.ಚೀನಾ ಹಾಗೂ ಭಾರತದ ನಡುವಿನ ಒಪ್ಪಂದದ ಬಳಿಕ ಇದೀಗ ಲಡಾಖ್ ಗಡಿಯಿಂದ ಉಭಯ ದೇಶಗಳ ಸೇನೆ ಹಿಂದೆ ಸರಿಯುವ ಕಾರ್ಯಾಚರಣೆಯಲ್ಲಿ ತೊಡಗಿವೆ. ಈ ಮಧ್ಯೆ ರಕ್ಷಣಾ ಸಚಿವ ರಾಜನಾಥ್ ಸಿಂಗ್‌ ಲಡಾಕ್‌ಗೆ ಭೇಟಿ ನೀಡಿರುವುದು ಕುತೂಹಲ ಕೆರಳಿಸಿತು.ಲಡಾಖ್‌ನ ಲೇಹ್ ಮತ್ತು ಸ್ಟಕ್ನಾ ಮುಂಚೂಣಿ ನೆಲೆಗಳಿಗೆ ಭೇಟಿ ನೀಡಿದ ರಾಜನಾಥ್ ಸಿಂಗ್, ಗಡಿ ಸಿದ್ಧತೆ ಬಗ್ಗೆ ಹಿರಿಯ ಸೇನಾಧಿಕಾರಿಗಳಿಂದ ಮಾಹಿತಿ ಪಡೆದರು.

- Advertisement -

Related news

error: Content is protected !!