
ಮಂಗಳೂರು: ರಾಷ್ಟೀಯ ಏಕತಾ ಸಪ್ತಾಹದ ಪ್ರಯುಕ್ತ ಪ್ರಧಾನಮಂತ್ರಿ ಜನೌಷಧಿ ಕೇಂದ್ರ ವತಿಯಿಂದ ಜನೌಷಧಿ ಮಿತ್ರ ಸಮ್ಮೇಳನವು ಅ.29ರಂದು ಬೆಳಿಗ್ಗೆ 10ಕ್ಕೆ ಟಿ.ವಿ ರಮಣ ಪೈ ಹಾಲ್, ಕೊಡಿಯಾಲ್ ಬೈಲ್, ಮಂಗಳೂರಿನಲ್ಲಿ ನಡೆಯಲಿದೆ.
ಈ ಕಾರ್ಯಕ್ರಮದಲ್ಲಿ ಮುಖ್ಯ ಅಥಿತಿಯಾಗಿ ಕೇಂದ್ರ ಸಚಿವರು ಭಗವಂತ್ ಖೂಬ ಭಾಗವಹಿಸಲಿದ್ದಾರೆ.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಂಗಳೂರು ನಗರ ದಕ್ಷಿಣ ಶಾಸಕರು ವೇದವ್ಯಾಸ ಕಾಮತ್ ವಹಿಸಲಿದ್ದಾರೆ.

ಕಾರ್ಯಕ್ರಮದಲ್ಲಿ ಬಂದರು ಸಚಿವರು ಎಸ್. ಅಂಗಾರ, ಸಮಾಜ ಕಲ್ಯಾಣ ಇಲಾಖೆ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖಾ ಸಚಿವರು ಕೋಟಾ ಶ್ರೀನಿವಾಸ್ ಪೂಜಾರಿ, ರಾಜ್ಯಾಧ್ಯಕ್ಷರು ನಳಿನ್ ಕುಮಾರ್ ಕಟೀಲ್, ಮಂಗಳೂರು ಶಾಸಕರು ಯು.ಟಿ ಖಾದರ್, ಮಂಗಳೂರು ಉತ್ತರ ಶಾಸಕರು ಭರತ್ ವೈ ಶೆಟ್ಟಿ, ಬೆಳ್ತಂಗಡಿ ಶಾಸಕರು ಹರೀಶ್ ಪೂಂಜಾ, ಪುತ್ತೂರು ವಿಧಾನಸಭಾ ಶಾಸಕರು ಸಂಜೀವ ಮಠಂದೂರು, ಮೂಡಬಿದಿರೆ ಶಾಸಕರು ಉಮಾನಾಥ್ ಕೋಟ್ಯಾನ್, ಎಂ. ಎಲ್ ಸಿ. ಪ್ರತಾಪ್ ಸಿಂಹ ನಾಯಕ್ ಕೆ, ಎಂ.ಎಲ್ ಸಿ. ಬಿ.ಎಂ. ಫಾರುಖ್, ಎಂ.ಎಲ್.ಸಿ. ಹರೀಶ್ ಕುಮಾರ್, ಎಂ.ಎಲ್.ಸಿ. ಆಯನೂರು ಮಂಜುನಾಥ್, ಎಂ.ಎಲ್.ಸಿ ಎಸ್ ಎಲ್ ಭೋಜೇಗೌಡ, ಮೇಯರ್ ಪ್ರೇಮಾನಂದ ಶೆಟ್ಟಿ, ದ.ಕ ಡಿಸಿ ರಾಜೇಂದ್ರ ಕೆ.ವಿ, ಸಿ.ಇ.ಒ ಡಾ. ಕುಮಾರ್, ಮಂಗಳೂರು ಪೊಲೀಸ್ ಕಮಿಷನರ್ ಶಶಿಕುಮಾರ್, ಕಿಶೋರ್ ಕುಮಾರ್, ನಾಗಭೂಷಣ್ ಉಡುಪ, ಪ್ರೊ. ಸಿ. ಎಸ್ ಶಾಸ್ತ್ರಿ, ಡಾ. ನವೀನ್ ಕುಮಾರ್ ಬಿ.ಸಿ, ಡಾ. ರಾಘವೇಂದ್ರ ಪ್ರಸಾದ್ ಬಂಗಾರಡ್ಕ ಭಾಗವಹಿಸಲಿದ್ದಾರೆ.
ಈ ಕಾರ್ಯಕ್ರಮದಲ್ಲಿ ಎಲ್ಲಾರೂ ಭಾಗವಹಿಸಿ ಯೋಜನೆಯ ಫಲಾನುಭವಿಗಳಾಗಬೇಕೆಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.



