Tuesday, June 23, 2026
spot_imgspot_img
spot_imgspot_img

ರಾಜ್ಯದ 550ಕ್ಕೂ ಅಧಿಕ ಚಿತ್ರಮಂದಿರಗಳಲ್ಲಿ ಇಂದು ಪುನೀತ್ ರಾಜಕುಮಾರ್ ಗೆ ನಮನ ಕಾರ್ಯಕ್ರಮ

- Advertisement -
- Advertisement -

ಬೆಂಗಳೂರು: ಚಿತ್ರಮಂದಿರಗಳಲ್ಲಿ ಇಂದು ನಟ ಪುನೀತ್ ರಾಜಕುಮಾರ್ ಗೆ ಶ್ರದ್ಧಾಂಜಲಿ ಸಲ್ಲಿಸಲಾಗುವುದು. ರಾಜ್ಯದ 550ಕ್ಕೂ ಅಧಿಕ ಚಿತ್ರಮಂದಿರಗಳಲ್ಲಿ ಇಂದು ಸಂಜೆ 6 ಗಂಟೆಗೆ ಗೀತಾಂಜಲಿ, ಪುಷ್ಪಾಂಜಲಿ, ದೀಪಾಂಜಲಿ ಮೂಲಕ ಪುನೀತ್ ರಾಜಕುಮಾರ್ ಗೆ ನಮನ ಸಲ್ಲಿಸಲಾಗುತ್ತದೆ.

ನಾಗೇಂದ್ರ ಪ್ರಸಾದ್ ರಚಿಸಿದ ಹಾಡಿನ ಮೂಲಕ ಶ್ರದ್ಧಾಂಜಲಿ ಸಲ್ಲಿಸಲಾಗುವುದು. ಪುನೀತ್ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಲಿದ್ದು, ಇದರೊಂದಿಗೆ ಕ್ಯಾಂಡಲ್ ಹಚ್ಚಿ ಗೌರವ ಸಲ್ಲಿಸಲಾಗುವುದು.

ಚಿತ್ರ ಪ್ರದರ್ಶಕರು ನಟ ಪುನೀತ್ ರಾಜಕುಮಾರ್ ಗೆ ನಮನ ಸಲ್ಲಿಸಲಿದ್ದಾರೆ. ಥಿಯೇಟರ್ ಸಿಬ್ಬಂದಿ ಮತ್ತು ಅಭಿಮಾನಿಗಳು ಭಾಗಿಯಾಗಲಿದ್ದಾರೆ.

- Advertisement -

Related news

error: Content is protected !!