Friday, June 26, 2026
spot_imgspot_img
spot_imgspot_img

ಮೂವರು ಹೆಂಡ್ತಿರ ಮುದ್ದಿನ ಗಂಡ ಕೊರೊನಾಗೆ ಬಲಿ..!! ನಾನೇ ಮೊದಲನೇ ಹೆಂಡತಿ ಎಂದು ಆಸ್ಥಿಗಾಗಿ ಪತ್ನಿಯರ ಪರದಾಟ..!?

- Advertisement -
- Advertisement -

ಇಲ್ಲೊಬ್ಬ ರೌಡಿ, ಮದುವೆ ನಾಟಕವಾಡಿ ಆಂಟಿಗಳ ಜೊತೆ ಆಟ ಆಡಿಕೊಂಡಿದ್ದ. ಈಗ ಆತನನ್ನು ಕೊರೊನಾ ಎಂಬ ಮಹಾಮಾರಿ ಬಲಿ ಪಡೆಯುತ್ತಿದ್ದಂತೆ ಆತನ ಅಸಲಿಯತ್ತು ಬೆಳಕಿಗೆ ಬಂದಿದೆ.

ನಾನೇ ಮೊದಲನೇ ಹೆಂಡತಿ ನನಗೆ ಆಸ್ಥಿ ನನಗೆ ಸೇರಬೇಕು ಎಂದು ಆಸ್ತಿಗಾಗಿ ಮೂವರು ಪತ್ನಿಯರು ಪರದಾಡುವಂತಾಗಿದೆ. ಈ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ ತಾಲೂಕಿನ ಬಟ್ಲಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯ ಬೊಮ್ಮೇಪಲ್ಲಿ ಗ್ರಾಮದಲ್ಲಿ ನಡೆದಿದೆ. ಆತ ಮಂಜುನಾಥ.ರೆಡ್ಡಿ ಅಲಿಯಾಸ್ ಬಳ್ಳಾರಿ ಮಂಜ ರೌಡಿಯಾಗಿದ್ದ ಈತ ರೌಡಿಸಂ ಮೂಲಕ ಸಾಕಷ್ಟು ಆಸ್ಥಿ ಸಂಪಾದಿಸಿದ್ದ, ಜೊತೆಗೆ ಆಂಟಿಗಳ ಹುಚ್ಚು ಬೇರೆ, ಹೋದಕಡೆ ಎಲ್ಲಾ ಒಂದೊoದು ಆಂಟಿಗಳನ್ನು ಮೇಂಟೇನ್ ಮಾಡ್ತಿದ್ದ. ಲೆಕ್ಕಕ್ಕೆ ಈತನಿಗೆ ಮೂವರು ಹೆಂಡತೀರು, ಮಂಜನ ಮೊದಲನೇ ಹೆಂಡತಿ ಅನುಸೂಯಮ್ಮ, ಎರಡನೇ ಹೆಂಡತಿ ಗೀತಾ, ಮೂರನೇ ಹೆಂಡತಿ ನಳಿನಿ. ಮೂರನೇ ಹೆಂಡತಿಗೆ ವರ್ಜಿನಲ್ ಗಂಡ ಗೋವರ್ಧನ್ ರೆಡ್ಡಿ ಜೀವಂತವಾಗಿ ಇರುವಾಗಲೇ ಮಂಜ ನಳಿನಿಯನ್ನು ಮರುಳು ಮಾಡಿದ್ದ.

ಅನುಸೂಯಮ್ಮನನ್ನು ಸಾಂಪ್ರದಾಯಿಕವಾಗಿ ಮಧುವೆಯಾಗಿದ್ದ ಮಂಜ , ಮೊದಲನೇ ಹೆಂಡತಿಯನ್ನು ಸೈಡ್ ರೋಲ್ ಮಾಡಿ ಮೂರನೆ ಹೆಂಡತಿ ನಳಿನಿಯನ್ನು ಮೇನ್ ರೋಲ್ ಮಾಡಿಕೊಂಡಿದ್ದ , ನಳಿನಿಯನ್ನು ಬೊಮ್ಮೇಪಲ್ಲಿ ಗ್ರಾಮಕ್ಕೆ ಕೆರತಂದು ಗ್ರಾಮಪಂಚಾಯ್ತಿ ಮೆಂಬರ್ ಮಾಡಿದ್ದ ಮೂರು ತಿಂಗಳಿಗೆ ಮಂಜ ಕೊರೋನ ಏಟಿಗೆ ಬಲಿಯಾದ. ಇದಾದ ಬಳಿಕ ಗ್ರಾಮಕ್ಕೆ ಶುರುವಾಯಿತು ವಕ್ರದೆಸೆ. ಮಂಜ ಸತ್ತಿದ್ದೆ ತಡ ನಳಿನಿ ತನ್ನ ಅಸಲೀ ಆಟ ಶುರು ಹಚ್ಚಿಕೊಂಡಿದ್ದಾಳೆ. ಗ್ರಾಮದ ಅಮಾಯಕರ ಬಳಿ ಇದ್ದ ಅಷ್ಟೋ ಇಷ್ಟು ಜಮೀನುಗಳನ್ನು ಆಸೆ ಆಮೀಷಗಳನ್ನು ತೋರಿ ಲಪಟಾಯಿಸಿದ್ದಾಳಂತೆ. ಕೇಳಿದರೆ ರೌಡಿಗಳನ್ನು ಕೆರಸಿ ಗ್ರಾಮದಲ್ಲಿ ದಾಂಧಲೆ ನಡೆಸ್ತಾಳಂತೆ, ನಳಿನಿ ವಿರುದ್ದ ಪೊಲೀಸರಿಗೆ ದೂರು ಕೊಟ್ಟರೂ ನ್ಯಾಯ ಸಿಕ್ಕಿಲ್ಲ ಎಂದು ಆರೋಪಿಸುತ್ತಿದ್ದಾರೆ.

ಗ್ರಾ.ಪ ಸದಸ್ಯೆ ನಳಿನಿ ಕಾಟಕ್ಕೆ ಇಡೀ ಗ್ರಾಮಕ್ಕೆ ಗ್ರಾಮವೇ ತತ್ತರಿಸಿ ಹೋಗಿದಿಯಂತೆ. ಗ್ರಾಮದಲ್ಲಿ ವಾಹನಗಳಿಗೆ ಬೆಂಕಿ ಹಚ್ಚುವಷ್ಟರ ಮಟ್ಟಿಗೆ ಗ್ರಾಮದಲ್ಲಿ ಹೊಡೆದಾಟ ನಡೆಯುವ ಹಂತ ತಲುಪಿತ್ತು. ಮೊದಲನೇ ಹೆಂಡತಿ ಅನುಸೂಯಮ್ಮ ಎರಡನೇ ಹೆಂಡತಿ ಗೀತಾ ಬಟ್ಲಹಳ್ಳಿ ಠಾಣೆಯಲ್ಲಿ ದೂರು ನೀಡಿದರೂ ಕ್ರಮ ಕೈಗೊಳ್ಳದೇ ಇರುವುದು ಅಸಮಾಧಾನಕ್ಕೆ ಕಾರಣವಾಗಿದೆ ಎನ್ನಲಾಗಿದೆ.

- Advertisement -

Related news

error: Content is protected !!