Monday, July 7, 2025
spot_imgspot_img
spot_imgspot_img

ವಿಟ್ಲದ ಯುವಕರ ಪರಿಶ್ರಮ ಮತ್ತು ದೈಗೋಳಿ ಸಾಯಿನಿಕೇತನ ಆಶ್ರಮದಿಂದ ಪುನರ್ಜನ್ಮ ಪಡೆದು ಮರಳಿ ಮನೆ ಸೇರಿದ ಶಿವಮೊಗ್ಗದ ಮಂಜಪ್ಪ.!

- Advertisement -
- Advertisement -

ಕಳೆದ ವಾರ ವಿಟ್ಲದ ಲಯನ್ಸ್ ಕ್ಲಬ್ ಸದಸ್ಯರಾದ ಶ್ರೀ ಲೂಯಿಸ್ ಮಸ್ಕರೇನಿಯಸ್,ಶ್ರೀ ರಾಜೇಶ್ ಮತ್ತು ಶ್ರೀ ಸಂತೋಷ್ ಕುಮಾರ್ ಅವರು ಅಸಹಾಯಕ ಸ್ಥಿತಿಯಲ್ಲಿ ಅಲೆದಾಡುತ್ತಿದ್ದ ಶಿವಮೊಗ್ಗದ ಮಂಜಪ್ಪ ಎಂಬವರನ್ನು ದೈಗೋಳಿಯ ಸಾಯಿನಿಕೇತನ ಸೇವಾಶ್ರಮಕ್ಕೆ ದಾಖಲಿಸಿದ್ದರು.

vtv vitla

ಸಾವಿರಾರು ಬಡ ಜೀವಗಳಿಗೆ ಬದುಕು ಕಲ್ಪಿಸುತ್ತಿರುವ ಸೇವಾಶ್ರಮದಲ್ಲಿ ಮಂಜಪ್ಪರ ಸುಶ್ರೂಷೆ ಮಾಡಿ ಪುನರ್ಜನ್ಮ ನೀಡಿದ್ದಾರೆ. ನಿನ್ನೆ ಅವರ ಮಗಳು ಮತ್ತು ಅಳಿಯ ಆಶ್ರಮಕ್ಕೆ ಬಂದು ಅವರನ್ನು ಮನೆಗೆ ಕರೆದುಕೊಂಡು ಹೋಗಿದ್ದು ಸೇವಾಶ್ರಮದ ಮಾನವೀಯ ಸೇವೆಯನ್ನು ಕೊಂಡಾಡಿದ ಮಂಜಪ್ಪ ಕುಟುಂಬಸ್ಥರು ಆಶ್ರಮದ ಸೇವೆಗಾಗಿ ರೂ 5,000/ವನ್ನು ದೇಣಿಗೆಯಾಗಿ ನೀಡುವ ಮೂಲಕ ಅಳಿಲಸೇವೆ ಸಲ್ಲಿಸಿದ್ದಾರೆ.

ಅವರ ಮುಂದಿನ ಜೀವನ ಸುಖಮಯವಾಗಿರಲಿ ಎಂದು ಆಶ್ರಮದ ವ್ಯವಸ್ಥಾಪಕರು ಭಗವಂತನಲ್ಲಿ ಪ್ರಾರ್ಥಿಸಿದ್ದು ಅನಾಥರ ಮೇಲೆ ಮಾನವೀಯತೆ ಮೆರೆದ ವಿಟ್ಲದ ಸಮಾಜ ಸೇವಕರಿಗೆ ಮತ್ತು ಸೋಶಿಯಲ್ ಮೀಡಿಯಾದ ಎಲ್ಲಾ ಸ್ನೇಹಿತರಿಗೆ ಕೃತಜ್ಞತೆ ಸಲ್ಲಿಸಿದ್ದಾರೆ.

- Advertisement -

Related news

error: Content is protected !!