Thursday, June 11, 2026
spot_imgspot_img
spot_imgspot_img

ಧರ್ಮಸ್ಥಳ: ನೇತ್ರಾವತಿ ನದಿಯಲ್ಲಿ ಸ್ನಾನ ಮಾಡುತ್ತಿರುವ ವೇಳೆ ಆಕಸ್ಮಿಕವಾಗಿ ನೀರಿನಲ್ಲಿ ಮುಳುಗಿ ಯುವಕ ಸಾವು..!

- Advertisement -
- Advertisement -

ಧರ್ಮಸ್ಥಳ: ಯುವಕನೋರ್ವ ಧರ್ಮಸ್ಥಳದ ನೇತ್ರಾವತಿ ನದಿಯಲ್ಲಿ ಸ್ನಾನ ಮಾಡುತ್ತಿರುವ ವೇಳೆ ಆಕಸ್ಮಿಕವಾಗಿ ನೀರಿನಲ್ಲಿ ಮುಳುಗಿ ಮೃತಪಟ್ಟ ಘಟನೆ ಜ.1 ರಂದು ಸಂಭವಿಸಿದೆ. ಮೃತ ಯುವಕ ಬೆಂಗಳೂರಿನ ಹೆಬ್ಬಾಳದ ಕೆ. ರಾಜು(31) ಎನ್ನಲಾಗಿದೆ.

vtv vitla
vtv vitla

ಬೆಂಗಳೂರು ಹೆಬ್ಬಾಳದ ಹತ್ತು ಜನರ ಯುವಕರ ತಂಡ ಧರ್ಮಸ್ಥಳಕ್ಕೆ ಆಗಮಿಸಿದ್ದು, ನೇತ್ರಾವತಿ ನದಿಯ ಸೇತುವೆಯ ಕೆಳಗಿನ ಆಳವಾದ ನೀರಿನಲ್ಲಿ ಸ್ನಾನ ಮಾಡುತ್ತಿರುವ ವೇಳೆ ಕೆ.ರಾಜುರವರು ಆಕಸ್ಮಿಕವಾಗಿ ನೀರಿನಲ್ಲಿ ಮುಳುಗಿದ್ದರು.

ಸ್ಥಳೀಯರು ಹರ ಸಾಹಸಪಟ್ಟು ಯುವಕನನ್ನು ರಕ್ಷಿಸಲು ಪ್ರಯತ್ನಿಸಿದರೂ ಅದಾಗಲೇ ಅವರು ಮೃತಪಟ್ಟಿದ್ದಾರೆ. ಸ್ಥಳಕ್ಕೆ ಧಾವಿಸಿದ ಅಗ್ನಿಶಾಮಕ ದಳದ ಸಿಬ್ಬಂದಿಗಳು ಕಾರ್ಯಾಚರಣೆ ನಡೆಸಿ ನೀರಿನಲ್ಲಿ ಮುಳುಗಿದ ಮೃತ ದೇಹವನ್ನು ನೀರಿನಿಂದ ಮೇಲಕ್ಕೆತ್ತುವಲ್ಲಿ ಸಹಕರಿಸಿದರು.

- Advertisement -

Related news

error: Content is protected !!