Wednesday, June 24, 2026
spot_imgspot_img
spot_imgspot_img

ಹಿಜಾಬ್ ನೆಪವನ್ನೊಡ್ಡಿ ತರಗತಿಯಿಂದ ಹೊರಹಾಕಿದ ಕಾಲೇಜು ಪ್ರಾಂಶುಪಾಲರ ಮೇಲೆ ಕ್ರಮ ಕೈಗೊಳ್ಳುವಂತೆ ಅಲ್ಪಸಂಖ್ಯಾತ ಆಯೋಗಕ್ಕೆ ದೂರು..!

- Advertisement -
- Advertisement -
vtv vitla

ಬೆಂಗಳೂರು: ಹಿಜಾಬ್ ಧರಿಸಿದ್ದಕ್ಕಾಗಿ ಮುಸ್ಲಿಂ ವಿದ್ಯಾರ್ಥಿಗಳನ್ನು ತರಗತಿಗಳಿಂದ ಹೊರಹಾಕಿದ ಉಡುಪಿಯ ಸರಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರ ಮೇಲೆ ಕ್ರಮ ಕೈಗೊಳ್ಳುವಂತೆ ಕರ್ನಾಟಕ ರಾಜ್ಯ ಅಲ್ಪಸಂಖ್ಯಾತ ಆಯೋಗಕ್ಕೆ ಕ್ಯಾಂಪಸ್ ಫ್ರಂಟ್ ನಿಯೋಗವು ದೂರನ್ನು ನೀಡಲಾಯಿತು.

ಕ್ಯಾಂಪಸ್ ಫ್ರಂಟ್ ಕರ್ನಾಟಕ ರಾಜ್ಯ ಸಮಿತಿ ಸದಸ್ಯ ಝುಬೈರ್ ನೇತೃತ್ವದ ನಿಯೋಗವು ಕರ್ನಾಟಕ ರಾಜ್ಯ ಅಲ್ಪಸಂಖ್ಯಾತ ಆಯೋಗದ ಕಚೇರಿಗೆ ಭೇಟಿ ಮಾತುಕತೆ ನಡೆಸಿ ದೂರನ್ನು ನೀಡಿದರು. ಕೂಡಲೇ ಕಾಲೇಜು ಪ್ರಾಂಶುಪಾಲರ ವಿರುದ್ಧ ಕ್ರಮಕೈಗೊಳ್ಳಬೇಕು ಹಾಗೂ ವಿದ್ಯಾರ್ಥಿಗಳನ್ನು ತರಗತಿಯೊಳಗೆ ಬಿಡುವಂತೆ ಒತ್ತಾಯಿಸಿದರು. ಮುಹೀನ್ ಮಾಗಡಿ, ನಿಝಾಮ್ ಬೆಂಗಳೂರು ಮತ್ತಿತರ ವಿದ್ಯಾರ್ಥಿಗಳು ನಿಯೋಗದಲ್ಲಿದ್ದರು.

- Advertisement -

Related news

error: Content is protected !!