- Advertisement -
- Advertisement -

1999ರ ಮುಂಬೈನ ಬಾಂದ್ರಾ ಬಳಿ ಗುಂಡಿನ ದಾಳಿ ಪ್ರಕರಣದಲ್ಲಿ ಭೂಗತ ಪಾತಕಿ ಛೋಟಾ ರಾಜನ್ಗೆ ಬಿಗ್ ರಿಲೀಫ್ ಸಿಕ್ಕಿದೆ. ಸಾಕ್ಷ್ಯಾಧಾರಗಳ ಕೊರತೆಯಿಂದ ಪಾತಕಿ ಛೋಟಾ ರಾಜನ್ ಹಾಗೂ ಇತರರ ವಿರುದ್ಧ ದಾಖಲಾಗಿರುವ ಎಂಸಿಒಸಿಎ ಪ್ರಕರಣದಲ್ಲಿ ಮುಂಬೈನ ವಿಶೇಷ ಕೋರ್ಟ್ ರಿಲೀಫ್ ನೀಡಿದೆ.

ಮುಂಬೈನ ಬಾಂದ್ರಾ ಪಶ್ಚಿಮ ಪ್ರದೇಶದಲ್ಲಿ 1999ರ ಮಾರ್ಚ್ 1ರಂದು ಐವರು ವ್ಯಕ್ತಿಗಳು ಹಾಗೂ ಓರ್ವ ಯುವತಿ ಮೇಲೆ ಗುಂಡು ಹಾರಿಸಲಾಗಿತ್ತು. ಆರು ಮಂದಿಯ ಪೈಕಿ ಐವರು ಚಿಕಿತ್ಸೆ ಫಲಿಸದೇ ಮೃತಪಟ್ಟಿದ್ದರು. ಈ ಪ್ರಕರಣದಲ್ಲಿ ಛೋಟಾ ರಾಜನ್ ಸೇರಿ ಇತರರನ್ನ ಆರೋಪಿಯನ್ನಾಗಿ ಮಾಡಲಾಗಿತ್ತು.

ತನ್ನ ಕಕ್ಷಿದಾರ ಛೋಟಾ ರಾಜನ್ ವಿರುದ್ಧ ಯಾವುದೇ ನೇರ ಸಾಕ್ಷ್ಯಾಧಾರಗಳಿಲ್ಲ. ಹೀಗಿದ್ದೂ ಆತನ ವಿರುದ್ಧ ಆರೋಪಿಸಲಾಗಿತ್ತು ಎಂದು ವಕೀಲ ತುಷಾರ್ ಕೋರ್ಟ್ನಲ್ಲಿ ವಾದಿಸಿದ್ದರು. ಮಾತ್ರವಲ್ಲ ಈ ತನಿಖೆಯು ಅನುಮಾನಗಳಿಂದ ಕೂಡಿದೆ ಎಂದು ವಕೀಲರು ವಾದಿಸಿದ್ದರು.


- Advertisement -








