
ದೇಹದ ಅನಾರೋಗ್ಯದಲ್ಲಿ ಅಸಹನೀಯ ನೋವನ್ನು ಉಂಟುಮಾಡುವ ಸಮಸ್ಯೆಗಳಲ್ಲಿ ಬಾಯಿ ಹುಣ್ಣು ಕೂಡ ಒಂದು, ತುಟಿಗಳ ಒಳಗೆ ನೀರಿನಿಂತ ಕೂಡದ ಗುಳ್ಳೆಗಳು ತಡೆಯಲಾರದಷ್ಟು ನೋವನ್ನು ನೀಡುತ್ತದೆ. ಮಾತನಾಡಲು, ತಿನ್ನಲೂ ಕಷ್ಟ ಕೊಡುವ ಈ ಬಾಯಿಹುಣ್ಣುಗಳು ಸಾಮಾನ್ಯವಾಗಿ ದೇಹದಲ್ಲಿ ಉಷ್ಣತೆ ಹೆಚ್ಚಾದಾಗ, ವಿಟಮಿನ್ಗಳ ಕೊರತೆಯಾದಾಗ ಕಾಣಿಸಿಕೊಳ್ಳುತ್ತದೆ. ಹರ್ಪಿಸ್ ಸಿಂಪ್ಲೆಕ್ಸ್ ಎನ್ನುವ ವೈರಸ್ನಿಂದ ತುಟಿಯ ಒಳಗೆ ಉಂಟಾಗುವ ಗುಳ್ಳೆಗಳು ಕ್ರಮೇಣ ಹುಣ್ಣುಗಳಾಗಿ ಕಾಡುತ್ತವೆ. ವಿಪರೀತ ನೋವು ಮತ್ತು ಉರಿಯಿಂದ ಕೂಡಿದ ಹುಣ್ಣಗಳು ನೋವಿನ ಭಯಾನಕತೆಯನ್ನು ತೋರಿಸಬಿಡುತ್ತವೆ. ಕೊನೇ ಪಕ್ಷ ನೀರು ಕುಡಿಯಲೂ ಕಷ್ಟ ಪಡುವಂತೆ ಮಾಡುವ ಬಾಯಿ ಹುಣ್ಣುಗಳಿಗೆ ಸರಿಯಾದ ಚಿಕಿತ್ಸೆ ಅಗತ್ಯ. ಅದಕ್ಕೆ ನೀವು ವೈದ್ಯರ ಬಳಿಯೇ ಹೋಗಬೇಕೆಂದಿಲ್ಲ. ಮನೆಮದ್ದಿನ ಮೂಲಕವೂ ಬಾಯಿ ಹುಣ್ಣುಗಳನ್ನು ಗುಣಪಡಿಸಿಕೊಳ್ಳಬಹುದು. ಅದು ಹೇಗೆ ಅಂತೀರಾ? ಇಲ್ಲಿದೆ ಸಿಂಪಲ್ ಟಿಪ್ಸ್

ಉಪ್ಪು ನೀರು : ಬಾಯಿ ಹುಣ್ಣುಗಳು ಕಂಡು ಬಂದ ಸಂದರ್ಭದಲ್ಲಿ ಉಗುರು ಬೆಚ್ಚಿನ ನೀರಿಗೆ ಉಪ್ಪನ್ನು ಸೇರಿಸಿ ಬಾಯಿ ಮುಕ್ಕಳಿಸಿ. ಇದರಿಂದ ನೋವು ಶಮನವಾಗಿ, ಹುಣ್ಣು ಒಣಗುತ್ತವೆ. ಪ್ರತಿದಿನ 2 ಅಥವಾ 3 ಬಾರಿ ಮಾಡಿ ಬೇಗನೆ ಬಾಯಿ ಹುಣ್ಣು ಕಡಿಮೆಯಾಗುತ್ತದೆ.
ಅಡುಗೆ ಸೋಡ : ಅಡುಗೆ ಸೋಡ ಕೂಡ ಉಪ್ಪು ನೀರಿನಂತೆಯೆ ನಿಮ್ಮ ಬಾಯಿ ಹುಣ್ಣುಗಳನ್ನು ನಿವಾರಿಸಲ್ಲದು. ಪ್ರತೀ 3 ಗಂಟೆಗಳಿಗೊಮ್ಮೆಯಾದರೂ ನೀರಿಗೆ ಅಡುಗೆ ಸೋಡ ಹಾಕಿ ಬಾಯಿ ಮುಕ್ಕಳಿಸಿ ಇದರಿಂದ ಬಾಯಿ ಹುಣ್ಣು ನಿವಾರಣೆಯಾಗುತ್ತದೆ.

ಆಲಂ ಪುಡಿ : ಆಲಂ ಪುಡಿ ಅಥವಾ ಪಟಿಕ ಎಂದು ಕರೆಯಲಾಗುವ ಕಲ್ಲಿನ ಪುಡಿಯನ್ನು ನೀರಿಗೆ ಬೆರೆಸಿ ಬಾಯಿ ಮುಕ್ಕಳಿಸಿ. ಬಾಯಿಗೆ ಆಲಂ ಪುಡಿ ಬೆರೆಸಿದ ನೀರನ್ನು ಹಾಕಿ 30 ಸೆಕೆಂಡ್ಗಳನ್ನು ಮುಕ್ಕಳಿಸಿ ಉಗುಳಿರಿ. ಇದರಿಂದ ಬಾಯಿ ಹುಣ್ಣು ಬೇಗನೆ ಗುಣಮುಖವಾಗುತ್ತದೆ.
ಜೇನುತುಪ್ಪ: ಆ್ಯಂಟಿ ಅಕ್ಸಿಡೆಂಟ್ ಗುಣಗಳನ್ನು ಹೊಂದಿರುವ ಜೇನುತುಪ್ಪ ಬ್ಯಾಕ್ಟೀರಿಯಾಗಳನ್ನು ನಾಶಪಡಿಸಲು ಸಹಾಯಕವಾಗಿದೆ. ಹೀಗಾಗಿ ನಿಮ್ಮ ಬಾಯಿ ಹುಣ್ಣಿನ ಸಮಸ್ಯೆಗೂ ಉತ್ತಮ ಪರಿಹಾರ ನೀಡಬಲ್ಲದು. ಬಾಯಿ ಹುಣ್ಣಿನ ಮೇಲೆ ಜೇನು ತುಪ್ಪವನ್ನು ಸವರಿದರೆ ಒಂದೆರಡು ದಿನಗಳಲ್ಲಿ ಹುಣ್ಣು ಕಡಿಮೆಯಾಗುತ್ತದೆ.

ಮಿಲ್ಕ್ ಆಫ್ ಮೆಗ್ನೀಶಿಯಂ : ಮಿಲ್ಕ್ ಆಫ್ ಮೆಗ್ನೀಶಿಯಂ ಅಥವಾ ಮೆಗ್ನಿಶಿಯಂ ಹೈಡ್ರಾಕ್ಸೈಡ್ ಎನ್ನುವ ರಾಸಾಯನಿಕ ಗುಣಗಳಿರುವ ಘನ ಪದಾರ್ಥವು ನೀರಿನಲ್ಲಿ ಕರುಗತ್ತವೆ. ಇವು ಬಾಯಿ ಹುಣ್ಣುಗಳ ಶಮನಕ್ಕೆ ಉತ್ತಮವಾಗಿದೆ. ಮಿಲ್ಕ್ ಆಫ್ ಮೆಗ್ನೀಶಿಯಂ ಅನ್ನು ನೀರಿನಲ್ಲಿ ಬೆರೆಸಿ ಕೆಲವು ಸೆಕೆಂಡುಗಳ ಕಾಲ ಬಾಯಿಯಲ್ಲಿ ಇರಿಸಿಕೊಳ್ಳಿ ನಂತರ ಉಗುಳಿ. ದಿನಕ್ಕೆ 3 ಬಾರಿ ಹೀಗೆ ಮಾಡಿದರೆ ನಿಮ್ಮ ಬಾಯಿ ಹುಣ್ಣಿನ ಸಮಸ್ಯೆ ನಿವಾರಣೆಯಾಗುತ್ತದೆ.
ಆಪಲ್ ಸೈಡರ್ ವಿನೆಗರ್: ನೀರಿನೊಂದಿಗೆ ಆಪಲ್ ಸೈಡರ್ ವಿನೆಗರ್ ಅನ್ನು ಮಿಶ್ರಣ ಮಾಡಿ ಬಾಯಿಯಲ್ಲಿ ಇಟ್ಟುಕೊಂಡು ಒಂದರೆಡು ಸೆಕೆಂಡುಗಳ ಬಳಿಕ ಉಗುಳಿ. ಇದರಿಂದ ಬಾಯಿ ಹುಣ್ಣಿಗೆ ಕಾರಣವಾದ ಬ್ಯಾಕ್ಟೀರಿಯಾವನ್ನು ನಾಶಪಡಿಸಿ ಗುಳ್ಳೆಗಳನ್ನು ಗುಣಪಡಿಸುತ್ತದೆ.

ಕ್ಯಾಮೋಮೈಲ್: ಬಾಯಿಹುಣ್ಣಿನ ನೋವು ಮತ್ತು ಉರಿಯೂತವನ್ನು ನಿವಾರಿಸಲು ಕ್ಯಾಮೋಮೈಲ್ ಉತ್ತಮ ಮನೆಮದ್ದಾಗಿದೆ. ಕ್ಯಾಮೋಮೈಲ್ನ ಚಿಕ್ಕ ಸಾಚೆಟ್ಅನ್ನು ಬಾಯಿ ಹುಣ್ಣಿರುವ ಜಾಗದಲ್ಲಿ ಕೆಲವು ನಿಮಿಷಗಳ ಕಾಲ ಇರಿಸಿಕೊಳ್ಳಿ. ಇದರಿಂದ ಬಾಯಿ ಹುಣ್ಣು ಶಮನವಾಗಲು ಉತ್ತಮ ಮನೆಮದ್ದಾಗಿದೆ.

