Monday, August 31, 2026
spot_imgspot_img
spot_imgspot_img

ನಾಪತ್ತೆಯಾಗಿದ್ದ ಬಾಲಕ ನಾಲೆಯಲ್ಲಿ ಶವವಾಗಿ ಪತ್ತೆ..!

- Advertisement -
- Advertisement -

ಬಾಗಲಕೋಟೆ : ಬಾಗಲಕೋಟ ಜಿಲ್ಲೆಯ ರಬಕವಿ ಬನಹಟ್ಟಿ ತಾಲೂಕಿನ ಚಿಮ್ಮಡ ಗ್ರಾಮದಲ್ಲಿ ನಿನ್ನೆ ಕಾಣೆಯಾದ ಮಗು ಇಂದು ಶವವಾಗಿ ಕಿನಾಲ್ ನಲ್ಲಿ ಪತ್ತೆಯಾಗಿದೆ.

ಮೃತ ಬಾಲಕ ನಾಗರಾಜ್ ಕಾಂಬಳೆ ಹಾಗೂ ಪೂಜಾ ದಂಪತಿಯ ಪುತ್ರ ಅನಿಕೇತ್ (11) ಎನ್ನಲಾಗಿದೆ. ಒಬ್ಬನೇ ಮಗನಾದ ಅನಿಕೇತ್ ನಾಗರಾಜ್ ಕಾಂಬಳೆ ಇಂದು ಶವವಾಗಿ ಪತ್ತೆಯಾಗಿದ್ದಾನೆ.

ಮಗುವಿನ ತಂದೆ ನಾಗರಾಜ್ ಕಾಂಬಳೆ ಏಳು ವರ್ಷಗಳ ಹಿಂದೆ ಹೃದಯಾಘಾತದಿಂದ ಸಾವನ್ನಪ್ಪಿದ್ದರು. ಈ ಮಗು 5ನೇ ತರಗತಿಯಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದು, ತರಗತಿಯಲ್ಲಿ ತುಂಬಾ ಚೆನ್ನಾಗಿ ಓದುತ್ತಿದ್ದ. ಇನ್ನು ಇಂತಹ ಮಗನನ್ನು ಕಳೆದುಕೊಂಡ ತಾಯಿಯ ಆಕ್ರಂದನ ಮುಗಿಲು ಮುಟ್ಟಿದೆ. ಈ ಘಟನೆ ಬಗ್ಗೆ ಬನಹಟ್ಟಿ ಪೊಲೀಸ್ ಠಾಣೆಯಲ್ಲಿ ಪ್ರ ಕರಣ ದಾಖಲಾಗಿದೆ.

vtv vitla
vtv vitla
- Advertisement -

Related news

error: Content is protected !!