- Advertisement -
- Advertisement -





ಹಾಸನ : ತಂದೆಯನ್ನು ಮಗನೊಬ್ಬ ಸ್ಟೀಲ್ ರಾಡ್ನಿಂದ ಹೊಡೆದು ಕೊಂದ ಘಟನೆ ಹಾಸನ ಜಿಲ್ಲೆ ಚನ್ನರಾಯಪಟ್ಟಣ ತಾಲೂಕಿನ ಹಿರಿಸಾವೆ ಗ್ರಾಮದಲ್ಲಿ ನಡೆದಿದೆ. ಸತೀಶ್ (60) ಕೊಲೆಯಾದ ತಂದೆ. ರಂಜಿತ್ (28) ಹತ್ಯೆಗೈದ ಮಗ.
ತಂದೆ ಸರಿಯಾಗಿ ಕುಟುಂಬ ನಿರ್ವಹಣೆ ಮಾಡುತ್ತಿರಲಿಲ್ಲ ಹಾಗೇ ಆತನಿಗೆ ಅಕ್ರಮ ಸಂಬಂಧ ಇತ್ತು ಎನ್ನಲಾಗಿದೆ. ಇದರಿಂದ ಬೇಸತ್ತಿದ್ದ ರಂಜಿತ್ ಹಾಗೂ ಆತನ ತಾಯಿ ಪ್ರತ್ಯೇಕವಾಗಿ ವಾಸವಿದ್ದರು. ಈ ವಿಚಾರಕ್ಕೆ ತಂದೆ ಮಗನ ನಡುವೆ ಆಗಾಗ ಜಗಳ ನಡೆಯುತ್ತಿತ್ತು. ಶನಿವಾರ(ಜ.10) ರಾತ್ರಿ ಕೂಡ ತಂದೆ-ಮಗನ ನಡುವೆ ಈ ವಿಷಯಕ್ಕೆ ಜಗಳ ನಡೆದಿದ್ದು, ಮಾತಿಗೆ ಮಾತು ಬೆಳೆದು ಸ್ಟೀಲ್ ರಾಡ್ನಿಂದ ತಂದೆ ಸತೀಶ್ ತಲೆಗೆ ಹೊಡೆದು ರಂಜಿತ್ ಕೊಲೆಗೈದಿದ್ದಾನೆ. ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
- Advertisement -








