Thursday, July 10, 2025
spot_imgspot_img
spot_imgspot_img

ಹಿಂದೂ ಕಾರ್ಯಕರ್ತ ಹರ್ಷ ಹತ್ಯೆ ಪ್ರಕರಣ: ಇಬ್ಬರು ಆರೋಪಿಗಳ ಬಂಧನ; ಶಿವಮೊಗ್ಗದಲ್ಲಿ ಎರಡು ದಿನ ಕರ್ಫ್ಯೂ ಜಾರಿ

- Advertisement -
- Advertisement -

ಶಿವಮೊಗ್ಗ: ಬಜರಂಗದಳ ಕಾರ್ಯಕರ್ತ ಹರ್ಷ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.

ನಗರದಲ್ಲಿ ನಿನ್ನೆ (ಫೆಬ್ರವರಿ 20) ಹರ್ಷ ಎಂಬಾತನ ಕೊಲೆ ನಡೆದಿತ್ತು. ಘಟನೆ ಹಿನ್ನೆಲೆ ಇಂದು ಶಿವಮೊಗ್ಗದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು. ಹರ್ಷ ಮೃತದೇಹ ಕೊಂಡೊಯ್ಯುವ ವೇಳೆ ಕೂಡ ಗಲಭೆ ಏರ್ಪಟ್ಟಿತ್ತು.

ಘಟನೆ ಹಿನ್ನೆಲೆ ಪೊಲೀಸರು ಇಬ್ಬರು ಆರೋಪಗಳನ್ನು ಬಂಧಿಸಿದ್ದಾರೆ. ಈ ಬಗ್ಗೆ ಶಿವಮೊಗ್ಗ ಪೊಲೀಸರು ಪತ್ರಿಕಾ ಪ್ರಕಟಣೆ ಹೊರಡಿಸಿ ಮಾಹಿತಿ ನೀಡಿದ್ದಾರೆ. ಬಜರಂಗದಳದ ಕಾರ್ಯಕರ್ತನಾದ ಹರ್ಷ, 28 ವರ್ಷ, ಕುಂಬಾರ ಬೀದಿ, ಸೀಗೆಹಟ್ಟಿ, ಶಿವಮೊಗ್ಗ ಈತನು ದಿನಾಂಕ 20-02-2022 ರಂದು ರಾತ್ರಿ ಹೋಟೆಲ್‌ ಗೆ ಹೋಗಿ ಊಟ ಮಾಡಿಕೊಂಡು ಬರುತ್ತೇನೆ ಎಂದು ಹೇಳಿ ಮನೆಯಿಂದ ಹೊರಗೆ ಹೋಗಿದ್ದಾಗ ಯಾರೋ ದುಷ್ಕರ್ಮಿಗಳು ದೊಡ್ಡಪೇಟೆ ಠಾಣಾ ವ್ಯಾಪ್ತಿಯ ಎನ್.ಟಿ ರಸ್ತೆ, ಕಾಮತ್‌ ಪೆಟ್ರೋಲ್‌ ಬಂಕ್ ಎದುರು ಭಾರತೀ ಕಾಲೋನಿ ಕ್ರಾಸ್‌ ನ ರಸ್ತೆಯಲ್ಲಿ ಹರ್ಷನ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ಮಾಡಿ ಕೊಲೆ ಮಾಡಿರುತ್ತಾರೆಂದು ನೀಡಿದ ದೂರಿನ ಮೇರೆಗೆ ಗುನ್ನೆ ಸಂಖ್ಯೆ 0077/2022 ಕಲಂ 302 ಐಪಿಸಿ ರೀತ್ಯಾ ಪ್ರಕರಣ ದಾಖಲಿಸಿರುತ್ತದೆ.

ಸದರಿ ಪ್ರಕರಣದ ವಿಶೇಷ ತನಿಖಾ ತಂಡವು ದಿನಾಂಕ 21-02-2022 ರಂದು ಸದರಿ ಪ್ರಕರಣದ ಆರೋಪಿತರಾದ ಖಾಸಿಫ್‌, 30 ವರ್ಷ, ಬುದ್ಧಾನಗರ, ಶಿವಮೊಗ್ಗ ಟೌನ್‌ ಮತ್ತು ಸೈಯ್ಯದ್‌ ನಧೀಂ, 20 ವರ್ಷ, ಜೆಪಿ ನಗರ, ಶಿವಮೊಗ್ಗ ಟೌನ್‌ ರವರುಗಳನ್ನು ದಸ್ತಗಿರಿ ಮಾಡಿ ತನಿಖೆ ಕೈಗೊಂಡಿರುತ್ತದೆ ಎಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಇನ್ನೂ ಸದ್ಯ ಉದ್ವಿಗ್ನ ಸ್ಥಿತಿಯಲ್ಲಿರುವ ಶಿವಮೊಗ್ಗದಲ್ಲಿ ಎರಡು ದಿನ ಕರ್ಫ್ಯೂ ಜಾರಿ ಮಾಡಲಾಗಿದೆ.

vtv vitla
vtv vitla
- Advertisement -

Related news

error: Content is protected !!