Wednesday, July 9, 2025
spot_imgspot_img
spot_imgspot_img

ಮಲ್ಪೆ: ಹಿಜಾಬ್ ನಿರ್ಬಂಧ ಪ್ರಶ್ನಿಸಿ ಕೋರ್ಟ್ ಮೆಟ್ಟಿಲೇರಿದ್ದ ವಿದ್ಯಾರ್ಥಿನಿಯ ತಂದೆಯ ಹೋಟೆಲ್ ಮೇಲೆ ದಾಳಿ, ಸಹೋದರನ ಮೇಲೆ ಹಲ್ಲೆ..!

- Advertisement -
- Advertisement -

ಮಲ್ಪೆ: ಹಿಜಾಬ್ ಸಂಬಂಧ ಹೈಕೋರ್ಟ್ ಮೆಟ್ಟಿಲೇರಿರುವ ವಿದ್ಯಾರ್ಥಿನಿಯೊಬ್ಬಳ ತಂದೆಯ ಹೋಟೆಲಿಗೆ ಕಲ್ಲು ತೂರಾಟ ನಡೆಸಿ, ಸಹೋದರನಿಗೆ ಹಲ್ಲೆಗೈದಿರುವ ಘಟನೆ ಸೋಮವಾರ ರಾತ್ರಿ 9:30ರ ಸುಮಾರಿಗೆ ಮಲ್ಪೆಯಲ್ಲಿ ನಡೆದಿದೆ.

vtv vitla
vtv vitla

ಮಲ್ಪೆ ಪೇಟೆಯಲ್ಲಿರುವ ಹೈದರ್ ಅಲಿ ಎಂವಬರ ಬಿಸ್ಮಿಲ್ಲಾ ಹೋಟೆಲ್ ಗೆ ಆಗಮಿಸಿದ 70 -100 ಮಂದಿ ದುಷ್ಕರ್ಮಿಗಳು ಕಲ್ಲು ತೂರಾಟ ನಡೆಸಿದ್ದಾರೆನ್ನಲಾಗಿದೆ. ಇದರಿಂದ ಹೋಟೆಲಿನ ಗಾಜುಗಳು ಪುಡಿಯಾಗಿದ್ದು, ಅಪಾರ ಹಾನಿ ಸಂಭವಿಸಿದೆ ಎಂದು ತಿಳಿದು ಬಂದಿದೆ. ಬಳಿಕ ದುಷ್ಕರ್ಮಿಗಳು ಹೊಟೇಲ್ ನಲ್ಲಿ‌ ಇದ್ದ ಅವರ ಮಗ ಸೈಪ್(20) ಎಂಬವರಿಗೆ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ.

ಹಲ್ಲೆಗೆ ಒಳಗಾಗಿರುವ ಸೈಫ್ ಉಡುಪಿಯ ಖಾಸಗಿ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ.

ಸ್ಥಳಕ್ಕೆ ಮಲ್ಪೆ ಪೊಲೀಸರು ಆಗಮಿಸಿದ್ದಾರೆ.

- Advertisement -

Related news

error: Content is protected !!