Friday, June 27, 2025
spot_imgspot_img
spot_imgspot_img

ವಿಟ್ಲ: ಗೂಡು ಮುರಿದು 75 ಕೆಜಿಯಷ್ಟು ಚಿಕನ್ ಕದ್ದ ಚೋರರು..!

- Advertisement -
- Advertisement -

ವಿಟ್ಲ: ಅನಂತಾಡಿ ಸಮೀಪದ ಗೋಳಿಕಟ್ಟೆಯ ಚಿಕನ್ ಸ್ಟಾಲ್ ನಿಂದ ಸುಮಾರು 75 ಕೆಜಿಯಷ್ಟು ಕೋಳಿಯನ್ನು ಗೂಡನ್ನುಮುರಿದು ಕದ್ದೊಯ್ದ ಘಟನೆ ನಡೆದಿದೆ.

ಮಾಲಕರು ಎಂದಿನಂತೆ ಅಂಗಡಿ ತೆರೆಯಲು ಬಂದಾಗ ಘಟನೆ ನಡೆದ ಬಗ್ಗೆ ತಿಳಿದಿದೆ,ಈಗ ಕೋಳಿಗೆ ದುಬಾರಿ ಬೆಲೆ ಇದ್ದು 160 ಅಥವಾ 170 ರೂಪಾಯಿ ಮಾರಾಟ ಬೆಲೆಯಾಗಿದ್ದು ಅದೂ ಅಲ್ಲದೆ ಚಿಕನ್ ಸ್ಟಾಲ್ ಗಳೆಲ್ಲವೂ ಕಳೆದೆರಡು ತಿಂಗಳಿನಿಂದ ವ್ಯಾಪಾರ ವಿಲ್ಲದೆ ನಷ್ಟದಲ್ಲೇ ಮುಂದುವರಿಸುತ್ತಿದ್ದರು. ಕಳ್ಳತನ ನಡೆಸಿದ ಕೋಳಿಗಳನ್ನು ಯಾವುದಾದರೂ ಅಂಗಡಿಗೆ ಮಾರಾಟ ಮಾಡಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ.

ಇದನ್ನೂ ಓದಿ: ಅಪಾರ್ಟ್‌ಮೆಂಟ್ ನಲ್ಲಿ ಹೈಟೆಕ್ ವೇಶ್ಯಾವಾಟಿಕೆ ದಂಧೆ: ⭕ ವಿಟ್ಲ ಮೂಲದ ಸೆಟಲ್‌ಮೆಂಟ್‌ ಹಮೀದ್ ಬಂಧನ

ಸ್ಥಳೀಯ ಸಿಸಿ ಕ್ಯಾಮೆರಾದಲ್ಲಿ ಕಾರೊಂದು ಬಂದು ಹೋಗುವ ದೃಶ್ಯ ದಾಖಲಾಗಿದೆ. ವಿಟ್ಲ ಪೊಲೀಸರು ಸ್ಥಳಕ್ಕಾಗಮಿಸಿ ತನಿಖೆ ನಡೆಸಿದ್ದಾರೆ.

vtv vitla
vtv vitla
- Advertisement -

Related news

error: Content is protected !!