Wednesday, April 23, 2025
spot_imgspot_img
spot_imgspot_img

ಪತ್ರೊಡೆ ನನ್ನಿಷ್ಟದ ತಿಂಡಿ:ಬಾಲಿವುಡ್‌ ನಟಿ ಕಂಗನಾ ರನಾವತ್‌.

- Advertisement -
- Advertisement -

ಮಂಗಳೂರು: ತುಳುನಾಡಿನಲ್ಲಿ ಜುಲೈ ಹಾಗೂ ಆಗಸ್ಟ್ ತಿಂಗಳಲ್ಲಿ(ಆಟಿ ತಿಂಗಳು) ಎಲ್ಲಾರ ಮನೆಗಳಲ್ಲಿ ಪತ್ರೊಡೆ ಮಾಡುವುದು ವಾಡಿಕೆ.ಪತ್ರೊಡೆ ಮಂಗಳೂರಿನ ಫೇಮಸ್ ತಿಂಡಿ. ಕೆಸುವಿನ ಎಲೆಯಿಂದ ಮಾಡುವ ಈ ಖಾದ್ಯ ಕರಾವಳಿ ಜನರ ಮೋಸ್ಟ್ ಫೇವರೆಟ್ ತಿಂಡಿ. ಆಟಿ ತಿಂಗಳಲ್ಲಿ ಸಿದ್ಧಪಡಿಸುವ ವಿಶಿಷ್ಟ ಖಾದ್ಯ ಪತ್ರೊಡೆಗೆ ಬಾಲಿವುಡ್‌ ನಟಿ ಕಂಗನಾ ರನಾವತ್‌ ಮರುಳಾಗಿದ್ದಾರೆ. “ಪತ್ರೊಡೆ ನನ್ನಿಷ್ಟದ ತಿಂಡಿಯಾಗಿದೆ. ನನ್ನ ಮನೆಯಲ್ಲಿಯೂ ಈ ತಿಂಡಿ ತಯಾರಿಸಿ ಸವಿಯುತ್ತೇನೆ’ ಎಂದು ಅವರು ಆಗಸ್ಟ್ 13 ರಂದು ತಮ್ಮ ಟ್ವಿಟರ್‌ ಖಾತೆಯಲ್ಲಿ ಬರೆದುಕೊಂಡಿದ್ದಾರೆ.

“ನನ್ನ ತಾಯಿ ಪತ್ರೊಡೆ ತಯಾರಿಸಿದ್ದು, ತಿನ್ನಲು ಹೆಚ್ಚು ರುಚಿಯಾಗಿದೆ. ಕೆಸುವಿನ ಎಲೆಯೊಂದಿಗೆ ತುಳಸಿಯನ್ನೂ ಸೇರಿಸಲಾಗಿದೆ. ಇದು ರುಚಿಕರ ಮಾತ್ರವಲ್ಲ ಔಷಧೀಯ ಗುಣವನ್ನೂ ಹೊಂದಿದೆ’ ಎಂದು ಕಂಗನಾ ತನ್ನ ಟ್ವಿಟರ್‌ ಪೇಜ್‌ನಲ್ಲಿ ಬರೆದುಕೊಂಡಿದ್ದಾರೆ.

- Advertisement -

Related news

error: Content is protected !!