Friday, April 26, 2024
spot_imgspot_img
spot_imgspot_img

ಸುಳ್ಯ: ವೃದ್ಧೆಯನ್ನು ಮನೆಯೊಳಗೆ ಕೂಡಿ ಹಾಕಿ ಪರಾರಿಯಾದ ದಂಪತಿಗಳು!

- Advertisement -G L Acharya panikkar
- Advertisement -

ಸುಳ್ಯ: ದಂಪತಿಗಳಿಬ್ಬರು ವೃದ್ಧೆ ತಾಯಿಯನ್ನು ಮನೆಯೊಳಗೆ ಕೂಡಿ ಹಾಕಿ ಮನೆ ಬಿಟ್ಟು ಪರಾರಿಯಾದ ಅಮಾನವೀಯ ಘಟನೆ ಸುಳ್ಯದಲ್ಲಿ ನಡೆದಿದೆ.

ಸುಳ್ಯದ ಆಸುಪಾಸಿನಲ್ಲಿ ದಂಪತಿಗಳಿಬ್ಬರು ಬಳೆ ಮಾರಿ ಜೀವನ ಸಾಗಿಸುತ್ತಿದ್ಧರು. ವೃದ್ದ ತಾಯಿಯ ಜತೆ ಈ ದಂಪತಿಗಳು ಗಾಂಧಿನಗರ ಸಂತೋಷ್ ಚಿತ್ರಮಂದಿರದ ಎದುರಿನ ಬಿಲ್ಡಿಂಗ್ ನ ಬಾಡಿಗೆ ಮನೆಯಲ್ಲಿ ವಾಸವಾಗಿದ್ದರು.

ಕಳೆದ ವಾರ ದಂಪತಿಗಳಿಬ್ಬರಿಗೆ ಕೊರೊನಾ ಪರೀಕ್ಷೆ ನಡೆಸಿದಾಗ ಪಾಸಿಟಿವ್ ಬಂದಿತ್ತು. ಈ ವಿಷಯ ತಿಳಿದು ಆ ದಂಪತಿಗಳು ಶನಿವಾರ ಮನೆಗೆ ಹೊರಗಿನಿಂದ ಬೀಗ ಹಾಕಿ ತೆರಳಿದ್ದಾರೆ. ಆರೋಗ್ಯ ಇಲಾಖೆಯವರು ಅವರು ನೀಡಿದ ವಿಳಾಸ ಹುಡುಕಿಕೊಂಡು ಬಂದಾಗ ಮನೆಗೆ ಬೀಗ ಹಾಕಿತ್ತು.

ಮನೆಯೊಳಗಿದ್ದ ವೃದ್ದೆಯ ಕಿರುಚಾಟ ಕೇಳಿ ಸ್ಥಳೀಯರು ಆಗಸ್ಟ್ 9 ರಂದು ಪೋಲೀಸರಿಗೆ ವಿಷಯ ತಿಳಿಸಿದರು. ಎಸ್. ಐ. ಹರೀಶ್ ರ ನೇತೃತ್ವದಲ್ಲಿ ಆರೋಗ್ಯ ಇಲಾಖೆ ಹಾಗೂ ಸ್ಥಳೀಯರು ಬಾಗಿಲು ತೆರೆದು ವೃದ್ದೆಯನ್ನು ವಿಚಾರಿಸಿ, ಮೂರು ದಿನದಿಂದ ಉಪವಾಸದಲ್ಲಿದ್ದ ವೃದ್ದೆಗೆ ಆಹಾರದ ವ್ಯವಸ್ಥೆ ಮಾಡಿದ್ದಾರೆ. ತಾಲೂಕು ಆರೋಗ್ಯಾಧಿಕಾರಿ ಡಾ.ನಂದಕುಮಾರ್ ರ ನೇತ್ರತ್ವದಲ್ಲಿ ವೃದ್ದೆಯ ಆರೋಗ್ಯ ತಪಾಸಣೆ ನಡೆಸಲಾಯಿತು. ದಂಪತಿಗಳ ಹುಡುಕಾಟಕ್ಕೆ ಅಧಿಕಾರಿಗಳು ಮುಂದಾಗಿದ್ದಾರೆ.

- Advertisement -

Related news

error: Content is protected !!