Saturday, August 8, 2026
spot_imgspot_img
spot_imgspot_img

ಹೆಚ್.ಡಿ ಕುಮಾರಸ್ವಾಮಿ ರಾಸಲೀಲೆ.! ಗಂಭೀರ ಆರೋಪ

- Advertisement -
- Advertisement -

ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ತಾಜ್ ವೆಸ್ಟ್ ಎಂಡ್ ಹೋಟೆಲ್’ನಲ್ಲಿ ರಾಸಲೀಲೆ ಆಡಿಕೊಂಡಿದ್ದರು ಎಂದು ಮಾಜಿ ಸಚಿವ ಸಿ.ಪಿ.ಯೋಗೇಶ್ವರ್ ಗಂಭೀರ ಆರೋಪ ಮಾಡಿದ್ದಾರೆ.

ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಯೋಗೇಶ್ವರ್, ಹೆಚ್.ಡಿ.ಕುಮಾರಸ್ವಾಮಿ ಸಿಎಂ ಆಗಿ ಮಾಡಿದ ಸಾಧನೆಯೇನು? 14 ತಿಂಗಳು ಮುಖ್ಯ ಮಂತ್ರಿ ಯಾಗಿದ್ದಾಗ ತಾಜ್ ವೆಸ್ಟ್ ಎಂಡ್ ಹೋಟೆಲ್’ನಲ್ಲಿ ರಾಸಲೀಲೆ ಆಡಿಕೊಂಡಿದ್ರು, ರಾಜ್ಯದ ಮುಖ್ಯ ಮಂತ್ರಿಯಾಗಿ ಜನರ ಕಷ್ಟ ಆಲಿಸದೇ, ಕ್ಷೇತ್ರಗಳ ಅಭಿವೃದ್ಧಿ ಬಗ್ಗೆ ಗಮನಕೊಡದೇ ಐಷಾರಾಮಿಯಾಗಿ ಹೋಟೆಲ್’ನಲ್ಲಿ ಕಾಲ ಕಳೆಯುತ್ತಿದ್ದಾರೆ ಎಂದು ಮಾಧ್ಯ ಮಗಳಲ್ಲಿಯೂ ಬಂದಿತ್ತು . ಈ ಬಗ್ಗೆ ನಾನುಹೊಸದಾಗಿ ಹೇಳಬೇಕಿಲ್ಲ ಎಂದು ವಾಗ್ದಾಳಿ ನಡೆಸಿದರು.

ಕುಮಾರಸ್ವಾಮಿ ಬಗ್ಗೆ ಇಡೀ ರಾಜ್ಯಕ್ಕೆ ಗೊತ್ತಿದೆ. ಇನ್ನು ಅವರ ಬಗ್ಗೆ ನನ್ನ ಬಾಯಲ್ಲಿ ಯಾಕೆ ಅಣಿಮುತ್ತು ಕೇಳಿಸ್ತೀ ರಾ? ಸಿಎಂ ಆಗಿದ್ದಾಗ ಒಂದು ದಿನಕೂಡ ಚನ್ನಪಟ್ಟಣಕ್ಕೆ ಬಂದು ಜನರ ಸಮಸ್ಯೆ ಕೇಳಿಲ್ಲ , ಈಗ ತಾಲೂಕಿಗೆ ಬಂದು ಕಣ್ಣೀರು ಹಾಕಿ ನಾಟಕ ಮಾಡಿದರೆ ಏನು ಉಪಯೋಗ? ಜನರೆ ತಕ್ಕ ಪಾಠ ಕಲಿಸುತ್ತಾರೆ ಅಷ್ಟೇ . ಹೆಚ್.ಡಿ.ಕೆ ನನ್ನ ಬಗ್ಗೆ ಏಕವಚನದಲ್ಲಿ ಮಾತನಾಡಿದರೆ ನಾನುಕೂಡ ಏಕವಚನದಲ್ಲಿಯೇ ಮಾತನಾಡುತ್ತೇ ನೆ. ಯಾವುದೇ ವಿಚಾರವಾಗಲಿ ಕುಮಾರಸ್ವಾ ಮಿ ಬಹಿರಂಗವಾಗಿ ಚರ್ಚೆಗೆ ಬರಲಿ ಉತ್ತರಿಸಲು ಸಿದ್ಧ ಎಂದು ಹೇಳಿದರು.

- Advertisement -

Related news

error: Content is protected !!