Monday, August 31, 2026
spot_imgspot_img
spot_imgspot_img

ಕಸದ ಲಾರಿ ಡಿಕ್ಕಿ; ರಸ್ತೆ ದಾಟುತ್ತಿದ್ದ ವಿದ್ಯಾರ್ಥಿನಿ ದುರ್ಮರಣ

- Advertisement -
- Advertisement -

ಬೆಂಗಳೂರು: ಬಿಬಿಎಂಪಿ ಕಸದ ಲಾರಿ ಡಿಕ್ಕಿ ಹೊಡೆದು ಬಾಲಕಿ ಮೃತಪಟ್ಟಿರುವ ದಾರುಣ ಘಟನೆ ಬೆಂಗಳೂರಿನ ಹೆಬ್ಬಾಳದಲ್ಲಿ ಸೋಮವಾರ ಮಧ್ಯಾಹ್ನ ನಡೆದಿದೆ.

ಹೆಬ್ಬಾಳ ಪೊಲೀಸ್ ಠಾಣೆ ಸಮೀಪ ಕೆಳಸೇತುವೆ ಬಳಿ ಕಾರು- ಲಾರಿ-ಬೈಕ್ ನಡುವೆ ಸರಣಿ ಅಪಘಾತ ಸಂಭವಿಸಿದ್ದು, ರಸ್ತೆ ದಾಟುತ್ತಿದ್ದ 12 ವರ್ಷದ ಶಾಲಾ ಬಾಲಕಿ ಅಕ್ಷಯ ಬಿ ಮೃತಪಟ್ಟದ್ದಾಳೆ.

ಈಕೆ ಸ್ಟೆಲ್ಲಾ ಮೇರಿಸ್ ಶಾಲೆಯಲ್ಲಿ 9ನೇ ತರಗತಿ ಓದುತ್ತಿದ್ದಳು. ಭಾರಿ ಮಳೆಯಿಂದಾಗಿ ಅಂಡರ್ ಪಾಸ್​ನಲ್ಲಿ ನೀರು ನಿಂತಿರುವ ಕಾರಣ ಅಂಡರ್ ಪಾಸ್ ಬಳಸದೆ ಬಾಲಕಿ ಮತ್ತು ಜನರು ಡಿವೈಡರ್ ದಾಟಿ ರಸ್ತೆ ದಾಟುತ್ತಿದ್ದರು. ಈ ವೇಳೆ ವೇಗವಾಗಿ ಬಂದ ಕಸದ ಲಾರಿ ಜನರ ಮೇಲೆ ಹರಿದಿದೆ. ಸ್ಥಳದಲ್ಲೇ ಬಾಲಕಿ ಅಕ್ಷಯಾ ಮೃತಪಟ್ಟಿದ್ದಾಳೆ. 8ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ.

ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಆರ್.ಟಿ. ನಗರ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

vtv vitla
vtv vitla
vtv vitla
vtv vitla
- Advertisement -

Related news

error: Content is protected !!