Thursday, July 30, 2026
spot_imgspot_img
spot_imgspot_img

ನೇಣು ಬಿಗಿದ ಸ್ಥಿತಿಯಲ್ಲಿ ಪತ್ರಕರ್ತೆ ಶವ ಪತ್ತೆ: ಕೊಲೆ ಶಂಕೆ

- Advertisement -
- Advertisement -

ಬೆಂಗಳೂರು : ರಾಯಿಟರ್ಸ್‌ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದ ಪತ್ರಕರ್ತೆ ಶ್ರುತಿ (35) ದೇಹವು ಅವರ ಮನೆಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಪತಿ ಅನೀಶ್‌ ಕೊಯಾಡನ್‌ ಕೊಲೆ ಮಾಡಿರುವುದಾಗಿ ಆಕೆಯ ಕುಟುಂಬದವರು ದೂರು ನೀಡಿದ್ದಾರೆ . 2017ರಲ್ಲಿ ಶ್ರುತಿ ಹಾಗೂ ಅನೀಶ್‌ ವಿವಾಹವಾಗಿತ್ತು. ಬೆಂಗಳೂರಿಗೆ ಮರಳಿದ್ದ ದಂಪತಿ ವೈಟ್‌ಫೀಲ್ಡ್‌ನ ನಲ್ಲೂರುಹಳ್ಳಿ ರಸ್ತೆ ಬಳಿಯ ಎಸ್‌.ವಿ.ಮೈಪೇರ್‌ ವಸತಿ ಸಮುಚ್ಚಯದ ಫ್ಲ್ಯಾಟ್‌ನಲ್ಲಿ ವಾಸವಿತ್ತು. ಖಾಸಗಿ ಕಂಪನಿ ಉದ್ಯೋಗಿಯಾಗಿರುವ ಅನೀಶ್‌, ಪ್ರತಿನಿತ್ಯ ಶ್ರುತಿಗೆ ಚಿತ್ರಹಿಂಸೆ ನೀಡುತ್ತಿದ್ದ. ಸಂಬಳದ ಹಣವನ್ನೆಲ್ಲಾ ತವರು ಮನೆಗೆ ನೀಡುತ್ತೀಯಾ ಎಂದು ಹೇಳಿ ಹಲ್ಲೆ ನಡೆಸುತ್ತಿದ್ದ. ಒಮ್ಮೊಮ್ಮೆ ಮದ್ಯಪಾನ ಮಾಡಿ ಮನೆಗೆ ಬಂದು ಅವಾಚ್ಯ ಶಬ್ದಗಳಿಂದ ನಿಂದಿಸುತ್ತಿದ್ದ ಎಂದು ಶ್ರುತಿ ಸಹೋದರ ನಿಶಾಂತ್‌ ನಾರಾಯಣನ್‌ ದೂರಿನಲ್ಲಿ ಉಲ್ಲೇಖಿಸಿದ್ದಾರೆ.

‘ತನ್ನ ತಂಗಿಯ ಮೇಲೆ ಅನುಮಾನ ವ್ಯಕ್ತಪಡಿಸುತ್ತಿದ್ದ ಅನೀಶ್‌, ಮನೆಯಲ್ಲಿ ಹಿಡನ್‌ ಕ್ಯಾಮೆರಾ ಇಟ್ಟು ಆಕೆಯ ಚಲನವಲನಗಳ ಮೇಲೆ ನಿಗಾ ಇಡುತ್ತಿದ್ದ. ಆಕೆ ಮಾತನಾಡುತ್ತಿದುದ್ದನ್ನೆಲ್ಲಾ ರೆಕಾರ್ಡ್‌ ಮಾಡುತ್ತಿದ್ದ. ವಾರಾಂತ್ಯದಲ್ಲಿ ಪ್ರವಾಸಕ್ಕೆಂದು ಕರೆದುಕೊಂಡು ಹೋಗಿ ಹಿಂಸಿಸುತ್ತಿದ್ದ. ಈ ವರ್ಷದ ಜನವರಿ 15ರಂದು ಹೆಂಡತಿ ಜೊತೆ ಜಗಳ ಮಾಡಿ ಕೊಲೆಗೆ ಯತ್ನಿಸಿದ್ದ. ಆಕೆಯ ಚೀರಾಟ ಕೇಳಿ ಓಡಿ ಬಂದಿದ್ದ ಭದ್ರತಾ ಸಿಬ್ಬಂದಿ ಪ್ರಾಣ ಉಳಿಸಿದ್ದರು ಎಂಬುದಾಗಿಯೂ ದೂರಿನಲ್ಲಿ ವಿವರಿಸಿದ್ದಾರೆ’.

ಶ್ರುತಿಗೆ ಸತತವಾಗಿ ಕರೆ ಮಾಡಿದ್ದರು ಸ್ವೀಕರಿಸಿರಲಿಲ್ಲ. ಹೀಗಾಗಿ ಆಕೆಯ ಅಪಾರ್ಟ್‌ಮೆಂಟ್‌ಗೆ ಹೋಗಿದ್ದೆವು. ಮನೆಯ ಬೀಗ ಹಾಕಿತ್ತು. ಕಿಟಕಿಯಿಂದ ಇಣುಕಿ ನೋಡಿದಾಗ ಒಳಗೆ ಯಾರೂ ಕಾಣಲಿಲ್ಲ. ಭದ್ರತಾ ಸಿಬ್ಬಂದಿ ನೆರವಿನಿಂದ ಬಾಲ್ಕನಿಯ ಬಾಗಿಲು ಮುರಿದು ಒಳಗೆ ಹೋದಾಗ ಮಲಗುವ ಕೋಣೆಯಲ್ಲಿ ಶ್ರುತಿಯ ದೇಹ ನೇಣು ಬಿಗಿದ ಸ್ಥಿತಿಯಲ್ಲಿತ್ತು. ಗಂಡನೇ ಆಕೆಯನ್ನು ಕೊಲೆ ಮಾಡಿರುವ ಶಂಕೆ ಇದೆ ಎಂದೂ ನಿಶಾಂತ್‌ ದೂರಿನಲ್ಲಿ ತಿಳಿಸಿ ವೈಟ್‌ಫೀಲ್ಡ್‌ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿಸಿದ್ದಾರೆ.

- Advertisement -

Related news

error: Content is protected !!