Sunday, August 30, 2026
spot_imgspot_img
spot_imgspot_img

ಅನಾರೋಗ್ಯಕ್ಕೆ ಚಿಕಿತ್ಸೆ ಕೊಡಿಸಲಾಗದೆ ಹೆತ್ತಮ್ಮನನ್ನು ನೀರಲ್ಲಿ ಮುಳುಗಿಸಿ ಕೊಂದ ಮಗ

- Advertisement -
- Advertisement -

ಕಲಬುರಗಿ: ಚಿಕಿತ್ಸೆ ಕೊಡಿಸಲು ಸಾಧ್ಯವಾಗದೆ ಮಗನೇ ತಾಯಿಯನ್ನು ನೀರಿನಲ್ಲಿ ಮುಳುಗಿಸಿ ಕೊಂದ ಆತಂಕಕಾರಿ ಘಟನೆ ಕಲಬುರಗಿಯಲ್ಲಿ ತಡವಾಗಿ ಬೆಳಕಿಗೆ ಬಂದಿದೆ.

ಇಲ್ಲಿನ ಯಡ್ರಾಮಿ ತಾಲೂಕಿನ ಬಿಳವಾರ ಗ್ರಾಮದ ಭೀಮಾಶಂಕರ ಎಂಬಾತನೇ ತಾಯಿಯನ್ನು ಕೊಂದ ಮಗ. ತಾಯಿ ರಾಚಮ್ಮ ಶರಬಣ್ಣ ಯಳಿಮೇಲಿ (60) ಅವರಿಗೆ ಅನಾರೋಗ್ಯ ಹಿನ್ನೆಲೆಯಲ್ಲಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿ ಬೇಸತ್ತಿದ್ದ ಮಗ ಭೀಮಾಶಂಕರ ಕೊನೆಗೆ ತನ್ನ ಸ್ನೇಹಿತನೊಂದಿಗೆ ಸೇರಿ ತಾಯಿಯನ್ನು ನೀರಿನಲ್ಲಿ ಮುಳುಗಿಸಿ ಕೊಲೆ ಮಾಡಿದ್ದಾನೆ.

ಯಾದಗಿರಿ ಜಿಲ್ಲೆಯ ಶಹಾಪುರ ತಾಲೂಕಿನ ಹುರಸಗುಂಡಗಿ ಬಳಿಯಿರುವ ಭೀಮಾನದಿಗೆ ತಾಯಿಯನ್ನು ಕರೆ ತಂದು ನೀರಿನಲ್ಲಿ ಮುಳುಗಿಸಿದ್ದಾನೆ. ಬಳಿಕ ಅಲ್ಲೇ ಶವವನ್ನು ಬಿಟ್ಟು ತೆರಳಿದ್ದಾರೆ. ಕೊಲೆ ಮಾಡುವುದಕ್ಕೂ ಮುನ್ನ ಬೈಕ್ ನಲ್ಲಿ ಇಬ್ಬರೂ ತಾಯಿ ರಾಚವ್ವನನ್ನು ಕರೆ ತಂದಿದ್ದರು. ವಾರದ ಹಿಂದೆಯೇ ಈ ಘಟನೆ ನಡೆದಿದೆ ಎನ್ನಲಾಗಿದೆ. ಭೀಮರಾಯನಗುಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪುತ್ರ ಭೀಮಾಶಂಕರನ ಮೇಲೆ ಸಂಶಯ ಬಂದ ಹಿನ್ನೆಲೆಯಲ್ಲಿ ಪೊಲೀಸರು ವಿಚಾರಿಸಿದಾಗ ಆತ ಸತ್ಯ ಬಾಯ್ಬಿಟ್ಟಿದ್ದಾನೆ. ಬಳಿಕ ಆತನನ್ನು ಪೊಲೀಸರು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. ಆತನ ಸ್ನೇಹಿತನಿಗಾಗಿ ಪೊಲೀಸರು ಹುಡುಕಾಟ ಆರಂಭಿಸಿದ್ದಾರೆ.

vtv vitla
vtv vitla
- Advertisement -

Related news

error: Content is protected !!