- Advertisement -
- Advertisement -


ಮಿತ್ತೂರು: ಏ.24ರಂದು ಎನ್.ಹೆಚ್275 ಮಾಣಿ ಮೈಸೂರು ಹೆದ್ದಾರಿಯ ಮಿತ್ತೂರಿನಲ್ಲಿ MRPL HiQ ನ ನೂತನ ಘಟಕ “ಶುಭೋದಯ ವ್ಯೂಯೆಲ್ಸ್” ಉದ್ಘಾಟನೆಗೊಳ್ಳಲಿದೆ. ಬೈಪದವು ಗೋಪಾಲಕೃಷ್ಣ ಭಟ್ ಮಾಲಕತ್ವದಲ್ಲಿ ಶುಭಾರಂಭಗೊಳ್ಳಲಿರುವ ಈ ಘಟಕವನ್ನು ಎಸ್.ಆರ್ ರಂಗಮೂರ್ತಿ ಪುಣಚ ಉದ್ಘಾಟಿಸಲಿದ್ದಾರೆ.

ಪುತ್ತೂರು ಶಾಸಕ ಸಂಜೀವ ಮಠಂದೂರು ಅಧ್ಯಕ್ಷತೆಯಲ್ಲಿ ನಡೆಯುವ ಈ ಕಾರ್ಯಕ್ರಮದಲ್ಲಿ ಎಂ.ಆರ್.ಪಿ.ಎಲ್ ಹಣಕಾಸು ವಿಭಾಗದ ನಿರ್ದೇಶಕರಾದ ಪೂವಿಲಾ ಜಸ್ಪಾಲ್, ಎಂ.ಆರ್.ಪಿ.ಎಲ್. ಮಾರ್ಕೆಟಿಂಗ್ ಗ್ರೂಪ್ ಜನರಲ್ನ ಮೆನೇಜರ್ ಸತ್ಯನಾರಾಯಣ ಎಚ್.ಸಿ ಕೋಲ್ಪೆ, ಶ್ರೀ ಷಣ್ಮುಖ ಸುಬ್ರಹ್ಮಣ್ಯ ದೇವಸ್ಥಾನದ ಆಡಳಿತ ಮುಖ್ಯಸ್ಮರಾದ ಸುರೇಶ್ ಕೆ.ಎಸ್, ಸುಬ್ರಹ್ಮಣ್ಯ ಭಟ್ ಕೆ.ಉರಿಮಜಲು, ಪಿ.ರಾಜರಾಮ ಶೆಟ್ಟಿ ಕೋಲ್ಪೆಗುತ್ತು, ಸುಧೀರ್ ಕುಮಾರ್ ಶೆಟ್ಟಿ ಮಿತ್ತೂರು, ಸುಧಾಕರ ಶೆಟ್ಟಿ ಭಾಗವಹಿಸಲಿದ್ದಾರೆ.


- Advertisement -








