Sunday, August 30, 2026
spot_imgspot_img
spot_imgspot_img

ಸಿಕ್ಕ ಸಿಕ್ಕವರನ್ನು ಸುಲಿಗೆ ಮಾಡುತ್ತಿದ್ದ ಖತರ್ನಾಕ್ ಖದೀಮರು ಅಂದರ್

- Advertisement -
- Advertisement -
vtv vitla

ಸಿಕ್ಕ ಸಿಕ್ಕವರನ್ನು ಸುಲಿಗೆ ಮಾಡುತ್ತಿದ್ದ ಇಬ್ಬರು ಖದೀಮರನ್ನು ಯಲಹಂಕ ಠಾಣೆ ಪೊಲೀಸರು ಬಂಧಿಸಿದ್ದಾರೆ. ಅಸ್ಲಾಂ ಪಾಷಾ ಅಲಿಯಾಸ್​ ಅಸ್ಲಾಂ ಅಲಿಯಾಸ್​​ ತುರಾಬ್ , ಹಾಗೂ ಸೈಯದ್ ಇಮ್ರಾನ್ ಅಲಿಯಾಸ್​ ಟ್ಯಾಬ್ಲೆಟ್ ಇಮ್ರಾನ್ ಬಂಧಿತ ಆರೋಪಿಗಳು. ಆರೋಪಿಗಳು ರೇವಾ ಕಾಲೇಜಿನ ಬಳಿ ಬೈಕಿನಲ್ಲಿ ಜಿಗ್ ಜಾಗ್ ಡ್ರೈವ್​ ಮಾಡಿ ತೊಂದರೆ ಕೊಡುತ್ತಿದ್ದರು. ಈ ವೇಳೆ ಅದೇ ಮಾರ್ಗವಾಗಿ ಬಂದ ಕಾರು ಚಾಲಕ ಶಿದೀನ್ ಷಾ ದಾರಿ ಬಿಡುವಂತೆ ಹಾರ್ನ್​ ಮಾಡಿದ್ದಾರೆ. ಇದರಿಂದ ಕೋಪಗೊಂಡ ಆರೋಪಿಗಳು ಕಾರು ಅಡ್ಡಗಟ್ಟಿ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ.

ಈ ವೇಳೆ ಕಾರು ಚಾಲಕ ಯೂಟರ್ನ್ ತೆಗೆದುಕೊಂಡರೂ ಬೆಂಬಿಡದ ದುಷ್ಕರ್ಮಿಗಳು ಕಾರಿನ ಗಾಜು ಹೊಡೆದು ಹಲ್ಲೆ ಮಾಡಿ 5,000 ನಗದು ಸುಲಿಗೆ ಮಾಡಿ ಪರಾರಿಯಾಗಿದ್ದರು ಎನ್ನಲಾಗಿದೆ. ಆರೋಪಿಗಳ ವಿರುದ್ಧ ಹೆಣ್ಣೂರು ಹಾಗೂ ಕೊತ್ತನೂರು ಸೇರಿದಂತೆ ಹಲವೆಡೆ ದರೋಡೆ ಪ್ರಕರಣ ದಾಖಲಾಗಿದೆ. ಸದ್ಯ ಯಲಹಂಕ ಠಾಣೆ ಪೊಲೀಸರು ಆರೋಪಿಗಳನ್ನು ಜೈಲಿಗಟ್ಟಿದ್ದಾರೆ.

vtv vitla
vtv vitla
- Advertisement -

Related news

error: Content is protected !!