Sunday, August 30, 2026
spot_imgspot_img
spot_imgspot_img

ಕಪ್ಪೆ ಚಿಪ್ಪು ಹೆಕ್ಕಲು ಹೋದ ಒಂದೇ ಕುಟುಂಬದ ಮೂವರು ಸಾವು

- Advertisement -
- Advertisement -

ಉತ್ತರಕನ್ನಡ: ಮರುವಾಯಿ(ಕಪ್ಪೆ ಚಿಪ್ಪು) ಹೆಕ್ಕಲು ಹೋದ ಒಂದೇ ಕುಟುಂಬದ ಮೂವರು ಸಾವನ್ನಪ್ಪಿರುವ ಘಟನೆ ಉತ್ತರಕನ್ನಡ ಜಿಲ್ಲೆಯ ಅಂಕೋಲಾ ತಾಲೂಕಿನಲ್ಲಿ ನಡೆದಿದೆ.

ಉತ್ತರಕನ್ನಡ ಜಿಲ್ಲೆಯ ಅಂಕೋಲಾದ ಗ್ರಾಮ ಕಡಕಾರ ನಿವಾಸಿ ಪೂಜಾ ಮಹೇಶ ನಾಯ್ಕ, ಕುಮಟಾ ಕೋನಳ್ಳಿ ನಿವಾಸಿ ದಿಲೀಪ ನಾಯ್ಕ, ಅಘನಾಶಿನಿ ನಿವಾಸಿ ನಾಗೇಂದ್ರ ನಾಯ್ಕ ಮೃತ ದುರ್ದೈವಿಗಳು.

vtv vitla
vtv vitla

ಅಂಕೋಲಾ ತಾಲೂಕಿನ ಕರಿಕಲ್ ಕಡಕಾರ ಬಳಿಯ ಗಂಗಾವಳಿ ನದಿಯಲ್ಲಿ ಮರುವಾಯಿ ಹೆಕ್ಕಲು ಹೋಗಿ ಈ ಮೂವರು ಪ್ರಾಣ ಕಳೆದುಕೊಂಡಿದ್ದಾರೆ. ಪಿಯುಸಿ ವಿದ್ಯಾರ್ಥಿನಿ ಪೂಜಾ, ದಿಲೀಪ ಮತ್ತು ನಾಗೇಂದ್ರ ಅವರ ಮೃತದೇಹಗಳು ಗಂಗಾವಳಿ ನದಿಯಲ್ಲಿ ಪತ್ತೆಯಾಗಿವೆ. ಘಟನಾ ಸ್ಥಳಕ್ಕೆ ಅಂಕೋಲಾ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ.

vtv vitla
vtv vitla
- Advertisement -

Related news

error: Content is protected !!