- Advertisement -
- Advertisement -


ಮಂಗಳೂರು: ನಗರದ ಟೌನ್ ಬಳಿ ಅಳವಡಿಸಿದ್ದ ಬೃಹತ್ ಗಾತ್ರದ ಕಟೌಟ್ ಗಾಳಿಗೆ ಹಾರಿ ಎರಡು ಕಾರುಗಳ ಮೇಲೆ ಬಿದ್ದು , ಅಗ್ನಿ ಶಾಮಕ ದಳದ ಸಿಬ್ಬಂದಿ ತೆರವೊಳಿಸಿದ್ದಾರೆ.
ಏ. 27 ರಿಂದ ಏ. 30 ರವರೆಗೆ ಮಂಗಳೂರು ಟೌನ್ ಹಾಲ್ ನಲ್ಲಿ ರಾಷ್ಟ್ರೀಯ ಮಟ್ಟದ ಪವರ್ ಲಿಫ್ಟಿಂಗ್ ಸ್ಪರ್ಧೆ ನಡೆಯಲಿದೆ. ಈ ಹಿನ್ನೆಲೆಯಲ್ಲಿ ಕ್ಲಾಕ್ ಟವರ್ ಬಳಿ ಅಳವಡಿಸಿದ್ದ 40×20 ಬೃಹತ್ ಗಾತ್ರದ ಕಟೌಟ್ ಅಳವಡಿಸಿ ಅರ್ಧ ಗಂಟೆಯಲ್ಲೆ ಗಾಳಿಗೆ ಹಾರಿ ರಸ್ತೆ ಬದಿಯಲ್ಲಿ ಪಾರ್ಕ್ ಮಾಡಿದ್ದ ಎರಡು ಕಾರುಗಳ ಮೇಲೆ ಬಿದ್ದಿದೆ.

ಅದೃಷ್ಟವಶಾತ್ ಪಾರ್ಕ್ ಮಾಡಿದ ಕಾರಿನಲ್ಲಿ ಯಾರೂ ಇರಲಿಲ್ಲ. ಈ ವೇಳೆ ತಕ್ಷಣ ಸ್ಥಳಕ್ಕೆ ಆಗಮಿಸಿದ ಪಾಂಡೇಶ್ವರ ಅಗ್ನಿ ಶಾಮಕ ಸಿಬ್ಬಂದಿ ಕಟೌಟ್ ಅಡಿ ಇದ್ದ ವಾಹನ ತೆರವುಗೊಳಿಸಿದ್ದಾರೆ. ಕಟೌಟ್ ಬಿದ್ದ ಪರಿಣಾಮ ಕೆಲಕಾಲ ಕ್ಲಾಕ್ ಟವರ್ ಬಳಿ ಸಂಚಾರ ಅಸ್ತವ್ಯಸ್ತಗೊಂಡಿತು.


- Advertisement -








