Saturday, August 29, 2026
spot_imgspot_img
spot_imgspot_img

ಮದುವೆಯಾದ 10 ಗಂಟೆಯಲ್ಲಿ ಹೃದಯಾಘಾತದಿಂದ ಮೃತಪಟ್ಟ ವರ

- Advertisement -
- Advertisement -

ಹುಬ್ಬಳ್ಳಿ: ಮದುವೆಯಾದ ದಿನದಂದೇ ವರ ಹೃದಯಾಘಾತದಿಂದ ಮೃತಪಟ್ಟ ಹೃದಯವಿದ್ರಾವಕ ಘಟನೆ ಹಾವೇರಿ ಜಿಲ್ಲೆಯ ಶಿಗ್ಗಾಂವ ತಾಲೂಕಿನ ಶ್ಯಾಡಂಬಿ ಗ್ರಾಮದಲ್ಲಿ ನಡೆದಿದೆ.

ಶಿವಾನಂದ ಶೇಖಪ್ಪ ಸುಣಗಾರ (34) ಮೃತ ವರ. ಮದುವೆಯಾದ 10 ಗಂಟೆಯಲ್ಲಿ ಘಟನೆ ಸಂಭವಿಸಿದೆ.

ಡಿಇಡಿ ಪದವೀಧರರಾಗಿರುವ ಶಿವಾನಂದ ಅವರ ವಿವಾಹವು ಮಂಗಳವಾರ ಮಧ್ಯಾಹ್ನ 12:29ಕ್ಕೆ ನಡೆದಿತ್ತು. ಬಳಿಕ ರಾತ್ರಿ ಊಟ ಮಾಡಿದ ನಂತರ ಅವರಿಗೆ ವಾಂತಿ ಕಾಣಿಸಿಕೊಂಡಿದೆ. ತಕ್ಷಣ ಅವರನ್ನು ಆಸ್ಪತ್ರೆಗೆ ಸಾಗಿಸಲಾಯಿತಾದರೂ, ರಾತ್ರಿ 10 ಗಂಟೆ ವೇಳೆಗೆ ಮೃತಪಟ್ಟರು. ನೂತನ ವರನ ಸಾವಿನಿಂದ ಎರಡೂ ಕುಟುಂಬಗಳಲ್ಲಿ ದುಃಖದ ಛಾಯೆ ಆವರಿಸಿದೆ.

vtv vitla
vtv vitla
- Advertisement -

Related news

error: Content is protected !!