Saturday, June 28, 2025
spot_imgspot_img
spot_imgspot_img

ವಿಟ್ಲ: ಮೆರವಣಿಗೆ ಮೂಲಕ ಮಕ್ಕಳ ಸಂಭ್ರಮದ ಶಾಲಾ ಪ್ರಾರಂಭೋತ್ಸವ

- Advertisement -
- Advertisement -

ವಿಟ್ಲ: ಶಿಕ್ಷಣ ಇಲಾಖೆ ಆದೇಶದಂತೆ ಇಂದು ಶಾಲಾ ಪ್ರಾರಂಭೋತ್ಸವ ನಡೆದಿದೆ. ಅಂತೆಯೇ ವಿಟ್ಲದ ಸರಕಾರಿ ಪ್ರೌಢಶಾಲೆ ಹಾಗೂ ದ.ಕ.ಜಿ.ಪಂ ಮಾದರಿ ಹಿರಿಯ ಪ್ರಾಥಮಿಕ ಶಾಲೆ ಪ್ರಾರಂಭೋತ್ಸವ ಆದ್ಧೂರಿಯಾಗಿ ನಡೆದಿದೆ.

ಪ್ರಾರಂಭವಾದ ಹಿನ್ನೆಲೆಯಲ್ಲಿ ಶಾಲೆಗಳನ್ನು ಸ್ವಚ್ಛಗೊಳಿಸಿ ಸಂಭ್ರಮದಿಂದ ಶಿಕ್ಷಕರು ಮಕ್ಕಳನ್ನು ಬರಮಾಡಿಕೊಂಡರು. ಶಾಲೆಗಳಲ್ಲಿ ಸಂಭ್ರಮದ ವಾತಾವರಣ ನಿರ್ಮಾಣವಾಗಿತ್ತು. “ಸಮುದಾಯ ಶಾಲೆಯತ್ತ” ಎನ್ನುವ ಸಂದೇಶವನ್ನು ಹಿಡಿದು ಮೆರವಣಿಗೆ ಮೂಲಕ ಮಕ್ಕಳು ಸಂಭ್ರಮದಿಂದ ಶಾಲೆಯತ್ತ ಸಾಗಿದರು.

ಶಾಲಾ ಪ್ರಾರಂಭೋತ್ಸವವು ಶಾಲಾಭಿವೃದ್ಧಿ ಸಮಿತಿ, ಶಿಕ್ಷಕರು, ಸ್ಥಳೀಯ ಗಣ್ಯರು, ಪೋಷಕರು ಮತ್ತು ಹಲವರ ಉಪಸ್ಥಿತಿಲ್ಲಿ ನಡೆಯಿತು.

- Advertisement -

Related news

error: Content is protected !!