Sunday, July 6, 2025
spot_imgspot_img
spot_imgspot_img

ಶಿಲ್ಪಾ ಆತ್ಮಹತ್ಯೆ ಪ್ರಕರಣದ ಆರೋಪಿಗಳ ಬಂಧನಕ್ಕೆ ಬಲೆ ಬೀಸಿದ ಪೊಲೀಸರು ; ಕಾಸರಗೋಡಿನಲ್ಲಿ ಹುಡುಕಾಟ

- Advertisement -
- Advertisement -

ಕುಂದಾಪುರ: ಲವ್ ಸೆಕ್ಸ್ ದೋಖಾಗೆ ಶಿಲ್ಪಾ ದೇವಾಡಿಗ ಎಂಬ ಯುವತಿ ಬಲಿಯಾಗಿದ್ದಾಳೆ.‌ ಶಿಲ್ಪಾ ಸಾವಿನ ಬೆನ್ನಲ್ಲೇ ಸಾವಿಗೆ ಕಾರಣರಾದ ಮುಸ್ಲಿಂ ದಂಪತಿಯನ್ನ ಬಂಧಿಸುವಂತೆ ಹಿಂದೂ ಸಂಘಟನೆ ಒತ್ತಾಯಿಸಿದೆ.‌ ಈ ಬಗ್ಗೆ ಆರೋಪಿಯ ಜಾಡು ಹಿಡಿದಿರುವ ಪೊಲೀಸರು ಪತ್ತೆ ಕಾರ್ಯ ಚುರುಕುಗೊಳಿಸಿದ್ದಾರೆ.

ಶಿಲ್ಪಾ ಸಾವಿನ ಬೆನ್ನಲ್ಲೇ ಲವ್ ಜಿಹಾದ್ಎಂದು ಆಕ್ರೋಶ ಹೊರಹಾಕಿರುವ ಹಿಂದೂ ಸಂಘಟನೆಗಳು ಶಿಲ್ಪಾ ಸಾವಿಗೆ ಕಾರಣರಾದ ಅಜೀಜ್ ಹಾಗೂ ಸಲ್ಮಾ ದಂಪತಿಯನ್ನ ಬಂಧಿಸುವಂತೆ 24 ಗಂಟೆಗಳ‌ ಗಡುವು ನೀಡಿತ್ತು.

ಅಲ್ಲದೆ ಸರ್ಕಾರ ಕೂಡ ಲವ್ ಜಿಹಾದ್ ತಡ ಕಾನೂನು ತರಬೇಕು ಜೊತೆಗೆ ಪ್ರಕರಣ ಸಿಐಡಿಗೆ ಕೊಡುವುದರ ಜೊತೆಗೆ ಶಿಲ್ಪಾ ಕುಟುಂಬಕ್ಕೆ10 ಲಕ್ಷ ಪರಿಹಾರ ಕೊಡಬೇಕು ಎಂದು ಆಗ್ರಹಿಸಿರುವ ಭಜರಂಗದಳ ಇದೊಂದು ಮತಾಂತರ ಮಾಡುವ ಬಹುದೊಡ್ಡ ಷಡ್ಯಂತ್ರ. ಇದೊಂದು ಲವ್ ಜಿಹಾದಿನ ವ್ಯವಸ್ಥಿತ ಸಂಚು ಎಂದು ಆರೋಪ ಮಾಡಿದೆ.

ಇನ್ನು ಅಜೀಜ್ ಸಲ್ಮಾಳ ಬಂಧನಕ್ಕೆ ಬಲೆ ಬೀಸಿರುವ ಪೊಲೀಸರು ಎರಡು ತಂಡ‌ ರಚನೆ ಮಾಡಿದ್ದಾರೆ. ಈಗಾಗಲೇ ಒಂದು ತಂಡ ಕೇರಳದ ಕಾಸರಗೋಡಿಗೆ ಅಜೀಜ್ ಸಲ್ಮಾಳ‌ ಜಾಡನ್ನ ಹಿಡಿದು ಹೊರಟಿದೆ. ಶಿಲ್ಪಾ ಕುಟುಂಬಸ್ಥರು ಪ್ರೀತಿಸಿ ವಂಚನೆ ಮಾಡಿದ್ದಾನೆ ಅಂತ ಅಜೀಜ್ ಹಾಗೂ ಆತನ ಪತ್ನಿ ಮೇಲೆ ದೂರನ್ನ ದಾಖಲಿಸಿದ್ದಾರೆ.

- Advertisement -

Related news

error: Content is protected !!