Saturday, June 28, 2025
spot_imgspot_img
spot_imgspot_img

ಕಾಪು: ತಾಯಿ-ಮಗು ನಾಪತ್ತೆ; ಪ್ರಕರಣ ದಾಖಲು

- Advertisement -
- Advertisement -

ಕಾಪು: ತಾಯಿ ಮತ್ತು ಮಗು ನಿಗೂಢವಾಗಿ ನಾಪತ್ತೆಯಾಗಿರುವ ಘಟನೆ ಉಡುಪಿ ಜಿಲ್ಲೆಯ ಕಾಪು ತಾಲೂಕಿನ ಮಲ್ಲಾರು ಗ್ರಾಮದ ಪಕೀರಣಕಟ್ಟೆ ಎಂಬಲ್ಲಿ ನಡೆದಿದೆ.

ಪಕೀರಣಕಟ್ಟೆ ಮಯ್ಯುದ್ದೀನ್ ಜುಮಾ ಮಸೀದಿ ಬಳಿ ನಿವಾಸಿ ಅವರ ಪತ್ನಿ ರೈಸಾ ತಬಸ್ಸುಂ (26) ಮತ್ತು 2 ವರ್ಷ 10 ತಿಂಗಳು ಪ್ರಾಯದ ಮಗ ಇಜಾನ್ ಅಹ್ಮದ್ ನಾಪತ್ತೆಯಾಗಿದ್ದಾರೆ.

ಅಬುದಾಬಿಯಲ್ಲಿ ಉದ್ಯೋಗದಲ್ಲಿರುವ ರಿಜ್ವಾನ್ ಅಹಮದ್ ಪತ್ನಿ ರೈಸಾ ತಬಸ್ಸುಂ ಜೂ. 1ರಂದು ಬೆಳಗ್ಗೆ ಮಲ್ಲಾರಿನಲ್ಲಿರುವ ತನ್ನ ತಾಯಿ ಮನೆಗೆ ಹೋಗಿ ಸ್ವಲ್ವ ದಿನ ಕಳೆದು ಬರುವುದಾಗಿ ಅತ್ತೆ ಬಳಿ ಹೇಳಿ ಮಗನೊಂದಿಗೆ ತೆರಳಿದ್ದರು. ಜೂ. 2ರಂದು ರೈಸಾ ತಬಸ್ಸುಂ ಅವರ ತಾಯಿ ದೂರವಾಣಿ ಕರೆ ಮಾಡಿ ಮಗಳ ಬಗ್ಗೆ ವಿಚಾರಿಸಿದ್ದು, ಅವಳ ಮೊಬೈಲ್ ಸ್ವಿಚ್ಡ್ ಆಫ್ ಆಗಿದೆ. ಅವಳಿಗೆ ಸ್ವಲ್ಪ ಮೊಬೈಲ್ ಕೊಡಿ ಎಂದು ತಿಳಿಸಿದಾಗ, ಆಕೆ ಮಗು ಸಹಿತ ನಾಪತ್ತೆಯಾಗಿರುವುದು ಬೆಳಕಿಗೆ ಬಂದಿದೆ. ಈ ಬಗ್ಗೆ ಕಾಪು ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

- Advertisement -

Related news

error: Content is protected !!