Sunday, September 20, 2026
spot_imgspot_img
spot_imgspot_img

ಉಳ್ಳಾಲ: ತಾಯಿಗೆ ಹುಟ್ಟುಹಬ್ಬದ ಶುಭಾಷಯ ತಿಳಿಸಲು ಹಾಸ್ಟೆಲ್‌ ವಾರ್ಡನ್‌ ಮೊಬೈಲ್‌ ಕೊಡಲಿಲ್ಲವೆಂದು ವಿದ್ಯಾರ್ಥಿ ಆತ್ಮಹತ್ಯೆ

- Advertisement -
- Advertisement -

ಉಳ್ಳಾಲ: ತಾಯಿ ಹುಟ್ಟುಹಬ್ಬ ದಿನದ ಶನಿವಾರ ಶುಭಾಷಯಗಳು ತಿಳಿಸಲು ಇಡೀ ದಿನ ಶಾಲಾ ಆಡಳಿತ ಮಂಡಳಿಯ ನಿಯಮದಂತೆ ಹಾಸ್ಟೆಲ್‌ ವಾರ್ಡನ್‌ ಮೊಬೈಲ್‌ ನೀಡದೇ ಇದ್ದು, ಇದರಿಂದ ಮನನೊಂದ ವಿದ್ಯಾರ್ಥಿ ಡೆತ್‌ ನೋಟ್‌ ಬರೆದಿಟ್ಟು ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಉಳ್ಳಾಲ ಠಾಣಾ ವ್ಯಾಪ್ತಿಯ ಕಿನ್ಯಾ ಶಾರದಾ ವಿದ್ಯಾನಿಕೇತನದಲ್ಲಿ ಇಂದು ಬೆಳಿಗ್ಗೆ ಬೆಳಕಿಗೆ ಬಂದಿದೆ.

ಬೆಂಗಳೂರು ಹೊಸಕೋಟೆ ಮೂಲದ ಪೂರ್ವಜ್‌ (14) ಆತ್ಮಹತ್ಯೆ ನಡೆಸಿದ ವಿದ್ಯಾರ್ಥಿ.

ಜೂ.11 ತಾಯಿ ಹುಟ್ಟುಹಬ್ಬದ ದಿನವಾಗಿತ್ತು. ಮನೆಮಂದಿ ಜೊತೆಗೆ ಮಾತನಾಡಲು ಮೊಬೈಲ್‌ ಕೇಳಿದಾಗ ಹಾಸ್ಟೆಲ್‌ ವಾರ್ಡನ್‌ ತಿರಸ್ಕರಿಸಿದ್ದರು. ಮನೆಮಂದಿಯೂ ಪೂರ್ವಜ್‌ ನನ್ನು ಸಂಪರ್ಕಿಸಲು 15 ಬಾರಿ ಯತ್ನಿಸಿದರೂ ಮಾತನಾಡಲು ಬಿಟ್ಟಿರಲಿಲ್ಲ. ರಾತ್ರಿ 12 ಗಂಟೆಯವರೆಗೂ ಮಂಕಾಗಿ ಕುಳಿತಿದ್ದ ಬಾಲಕ ಪೂರ್ವಜ್‌ ಹಾಸ್ಟೆಲ್‌ ಕೋಣೆಯಲ್ಲಿ ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಮನೆಮಂದಿ ಆರೋಪಿಸಿದ್ದಾರೆ.

ಇಂದು ಬೆಳಿಗ್ಗೆ ಘಟನೆಯನ್ನು ಕಂಡ ವಿದ್ಯಾರ್ಥಿ ಹಾಸ್ಟೆಲ್‌ ಅಧಿಕೃತರ ಗಮನಕ್ಕೆ ತಂದಿದ್ದನು. ಸಂಜೆ ವೇಳೆ ಮನೆಮಂದಿ ಹಾಸ್ಟೆಲ್‌ ತಲುಪಿದ್ದಾರೆ. ಇನ್ನಷ್ಟೇ ಮೃತದೇಹವನ್ನು ಶವಮಹಜರಿಗೆ ಕಳುಹಿಸಬೇಕಾಗಿದೆ. ಉಳ್ಳಾಲ ಠಾಣಾ ಪೊಲೀಸರು ಸ್ಥಳದಲ್ಲಿದ್ದಾರೆ.

ಇನ್ನು ತಾಯಿಗೆ ಹುಟ್ಟುಹಬ್ಬದ ಶುಭಾಷಯಗಳು. ಎಲ್ಲರೂ ಖುಷಿಯಾಗಿರಿ, ಶಾಲೆಗೆ ತನಗಾಗಿ ಕಟ್ಟಿರುವ ಶುಲ್ಕವನ್ನು ವಾಪಸ್ಸು ಪಡೆದುಕೊಳ್ಳಿ. ನಿಮ್ಮಿಂದ ನಾನು ದೂರವಾಗುತ್ತಿದ್ದೇನೆ. ಯಾರೂ ಕೂಗಬೇಡಿ, ಎಂದು ಆಂಗ್ಲಭಾಷೆಯಲ್ಲಿ ಡೆತ್‌ ನೋಟಲ್ಲಿ ಬರೆದಿಡಲಾಗಿದೆ.

- Advertisement -

Related news

error: Content is protected !!