Tuesday, July 1, 2025
spot_imgspot_img
spot_imgspot_img

ಒಡ್ಯ ಶಾಲೆಗೆ ಸ್ಮಾರ್ಟ್ ಟಿವಿ ಹಸ್ತಾಂತರ

- Advertisement -
- Advertisement -

ನಿಡ್ನಳ್ಳಿ: ಬೆಂಗಳೂರಿನ ಉದ್ಯಮಿ ಸದಾನಂದ ಶೆಟ್ಟಿ ಇವರ ಪತ್ನಿ ಪೂರ್ಣಿಮಾರವರ 38ನೇ ಹುಟ್ಟು ಹಬ್ಬದ ಪ್ರಯಕ್ತ 42 ಇಂಚಿನ ಸ್ಮಾರ್ಟ್ ಟಿ.ವಿ ಯನ್ನು ದ.ಕ.ಜಿ.ಪಂ.ಹಿ.ಪ್ರಾ. ಶಾಲೆ ಒಡ್ಯ ಇಲ್ಲಿಗೆ ಜೂ.13 ರಂದು ಹಸ್ತಾಂತರಿಸಿದರು. ವಿದ್ಯಾಶ್ರೀ ಫ್ರೆಂಡ್ಸ್ ಚಾರಿಟೇಬಲ್ ಟ್ರಸ್ಟ್ ಇದರ ಗೌರವ ಮಾರ್ಗದರ್ಶಕರಾದ ಲಕ್ಷ್ಮೀ ನಾರಾಯಣ ರೈ ಕೆದಂಬಾಡಿರವರು ಇಬ್ಬರು ವಿದ್ಯಾರ್ಥಿಗಳಿಗೆ ಪುಸ್ತಕ ನೀಡಿದರು.

ವೇದಮೂರ್ತಿ ಶ್ರೀಕೃಷ್ಣ ಭಟ್ ಬಟ್ಯಮೂಲೆ, ಕುಡಾಲ್ ಗುತ್ತು ಯಜಮಾನರಾದ ಅಲ್ಚಾರು ವಿಶ್ವನಾಥ ಶೆಟ್ಟಿ, ಅನಂತರಾಮ ರೈ ಮತ್ತು ಪ್ರೇಮಾ ಶೆಟ್ಟಿ ಕೆದಂಬಾಡಿ, ಲಕ್ಷ್ಮೀನಾರಾಯಣ ರೈ ಕೆದಂಬಾಡಿ, ಮಮತಾ, ಶ್ರೀಹರಿ ಪಾಣಾಜೆ, ವಿದ್ಯಾಶ್ರೀ ಫ್ರೆಂಡ್ಸ್ ಚಾರಿಟೇಬಲ್ ಟ್ರಸ್ಟ್ ಉಪಾಧ್ಯಕ್ಷ ಭರತೇಶ್ ರಾವ್, ಶಂಕರ ರೈ ಬಾಳೆಮೂಲೆ, ಪಾಣಾಜೆ ಗ್ರಾಮ ಪಂಚಾಯತ್‌ ಸದಸ್ಯ ಕೃಷ್ಣಪ್ಪ ಪೂಜಾರಿ ಬೊಳ್ಳಿಂಬಳ, ಯಶೋದ, ಎಸ್.ಡಿ.ಎಂ.ಸಿ ಅಧ್ಯಕ್ಷರಾದ ದೇವಪ್ಪ ನಾಯ್ಕ, ಶಿಕ್ಷಕ ವೃಂದ, ವಿದ್ಯಾರ್ಥಿಗಳು, ಅಡುಗೆ ಸಿಬ್ಬಂದಿಗಳು ಉಪಸ್ಥಿತರಿದ್ದರು. ಮುಖ್ಯ ಗುರು ಜನಾರ್ಧನ ಅಲ್ಚಾರು ಸ್ವಾಗತಿಸಿ, ಸಹ ಶಿಕ್ಷಕಿ ದಿವ್ಯಾ ಪಡುಬಿದ್ರಿ ವಂದಿಸಿದರು. ಸಹ ಶಿಕ್ಷಕ ಉಸ್ಮಾನ್ ಮಂಚಿ ಕಾರ್ಯಕ್ರಮ ನಿರೂಪಿಸಿದರು.

- Advertisement -

Related news

error: Content is protected !!