

ಪುತ್ತೂರು: ಕೋಳಿ ಫಾರ್ಮ್‌ನಲ್ಲಿ ಕೆಲಸಕ್ಕಿರುವ ಮಹಿಳೆಯ ಮೇಲೆ ಆ ಫಾರ್ಮ್ ನ ರೈಟರ್ ಅತ್ಯಾಚಾರ ನಡೆಸಿ, ಕೃತ್ಯವನ್ನು ವಿಡಿಯೋ ಚಿತ್ರಿಕರಿಸಿ ಮತ್ತೆ ಮತ್ತೆ ಸಹಕರಿಸುವಂತೆ ಬೆದರಿಕೆಯೊಡ್ಡಿದ್ದಾನೆ ಎಂದು ಪುತ್ತೂರಿನ ಗ್ರಾಮಾಂತರ ಠಾಣೆಗೆ ಮಹಿಳೆ ದೂರು ನೀಡಿದ್ದಾರೆ.

ಅರಿಯಡ್ಕ ಗ್ರಾಮದ ಮಡ್ಯಂಗಳದಲ್ಲಿರುವ ಕೋಳಿ ಫಾರ್ಮ್‌ನಲ್ಲಿ ರೈಟರ್ ಆಗಿರುವ ಉಮ್ಮರ್ ಈ ಕೃತ್ಯ ಎಸಗಿದ್ದಾನೆ. ಮೇ.5 ರಂದು ಸಂತ್ರಸ್ತೆಯು ಕೋಳಿ ಫಾರ್ಮಿನ ಬಾತ್‌ರೂಮ್‌ನಲ್ಲಿದ್ದ ವೇಳೆ ಆಲ್ಲಿಗೆ ಬಂದ ಆರೋಪಿ ಉಮ್ಮರ್ ಆಕೆಯ ಮೇಲೆ ಅತ್ಯಾಚಾರ ಎಸಗಿದ್ದಾನೆ. ಆಕೆ ಈ ವೇಳೆ ಜೋರಾಗಿ ಕಿರುಚಾಡಿದ್ದು, ಈ ವೇಳೆ ಆಕೆಯ ಬಾಯಿಯನ್ನು ತನ್ನ ಕೈಗಳಿಂದ ಬಲವಂತವಾಗಿ ಮುಚ್ಚಿದ್ದಾನೆ. ಈ ಪೈಶಾಚಿಕ ಕೃತ್ಯದ ಬಗ್ಗೆ, ಮಹಿಳೆಯು ತನ್ನ ಗಂಡನಲ್ಲಿ ತಿಳಿಸುವುದಾಗಿ ಆರೋಪಿಯಲ್ಲಿ ತಿಳಿಸಿದ್ದಾರೆ.

ಅತ್ಯಾಚಾರ ನಡೆಸಿದ ಬಳಿಕ ಅದನ್ನು ವಿಡಿಯೋ ಚಿತ್ರೀಕರಿಸಿ ಆರೋಪಿಯು ಮಹಿಳೆಯ ಪತಿಗೆ ಕಳುಹಿಸಿದ್ದು, ಅತ್ಯಾಚಾರ ಎಸಗಿರುವ ಬಗ್ಗೆ, ಹೊರಗೆ ತಿಳಿಸಿದರೆ ಕೊಲೆಗೈಯುವುದಾಗಿ ಜೀವ ಬೆದರಿಕೆ ಒಡ್ಡಿರುವುದಾಗಿ ದೂರಿನಲ್ಲಿ ತಿಳಿಸಿದ್ದಾರೆ. ಈ ಬಗ್ಗೆ ಮಹಿಳೆ ನೀಡಿದ ದೂರಿನಂತೆ ಆರೋಪಿ ಉಮ್ಮರ್ ವಿರುದ್ಧ ಐಪಿಸಿ ಕಲಂ 376 ಹಾಗೂ ಐಟಿ ಅಕ್ಸ್ 67 ರಂತೆ ಪುತ್ತೂರು ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
- ಮೂಡುಬಿದಿರೆ :ಕಾಲು ಜಾರಿ ಬಾವಿಗೆ ಬಿದ್ದು ವೃದ್ದೆ ಸಾವು
- ಕೊಲ್ಲೂರು ಮೂಕಾಂಬಿಕೆಗೆ ಅಂದು ಚಿನ್ನದ ಖಡ್ಗ ಕೊಟ್ಟಿದ್ದ ಎಂಜಿಆರ್!
- ಕಿಂಡರ್ಗಾರ್ಟನ್ನಿಂದ ಪಿಜಿವರೆಗೆ ಉಚಿತ ಶಿಕ್ಷಣ – ಒಡಿಶಾ ಸರ್ಕಾರ ಘೋಷಣೆ
- ಮಂಗಳೂರಿನಿಂದ ಊಟಿಗೆ ಪ್ರವಾಸ ತೆರಳಿದ್ದ ವಿದ್ಯಾರ್ಥಿಗಳಿಗೆ ಆಹಾರ ವಿಷಬಾಧೆ: 15 ಮಂದಿ ಅಸ್ವಸ್ಥ
- ಕೇರಳ ಸಿಎಂ ವಿಡಿ ಸತೀಶನ್, ಕುಟುಂಬಸ್ಥರಿಗೆ ಕೊಲೆ ಬೆದರಿಕೆ : ಆರೋಪಿಯ ಬಂಧನ










