Sunday, June 29, 2025
spot_imgspot_img
spot_imgspot_img

ಸಂಸತ್ ನ ಮುಂಗಾರು ಅಧಿವೇಶನಕ್ಕೆ ಡೇಟ್ ಫಿಕ್ಸ್

- Advertisement -
- Advertisement -

ನವದೆಹಲಿ: ದಿನಾಂಕ ನಿಗದಿಯಾಗಿದೆ. ಸೆಪ್ಟೆಂಬರ್ 14ರಿಂದ ಸಂಸತ್ ನ ಮುಂಗಾರು ಅಧಿವೇಶನ ಆರಂಭವಾಗಲಿದ್ದು, ಅಕ್ಟೋಬರ್ 1ಕ್ಕೆ ಅಧಿವೇಶನ ಕೊನೆಗೊಳ್ಳಲಿದೆ.

ಶನಿವಾರ ಹಾಗೂ ಭಾನುವಾರ ಸೇರಿಂದತೆ ಈ ಬಾರಿ 18 ದಿನಗಳ ಕಾಲ ಅಧಿವೇಶನ ನಡೆಯಲಿದೆ. ದಿನಕ್ಕೆ 2 ಬಾರಿಯಂತೆ ಅಂದರೆ ಬೆಳಗ್ಗೆ 4 ಗಂಟೆ ಹಾಗೂ ಮಧ್ಯಾಹ್ನದ ಬಳಿಕ 4 ಗಂಟೆ ಅಧಿವೇಶನ ನಡೆಯಲಿದೆ.

ಸಂಸತ್ ಕಲಾಪಕ್ಕೆ ಪ್ರತಿಪಕ್ಷಗಳ ಸಿದ್ಧತೆ:

ಸಂಸತ್ ಅಧಿವೇಶನಕ್ಕೆ ಡೇಟ್ ಫಿಕ್ಸ್ ಆಗುತ್ತಿದ್ದಂತೆ ಆಡಳಿತ ಪಕ್ಷಗಳ ವಿರುದ್ಧ ಟೀಕಾಸ್ತ್ರ ಮಾಡಲು ವಿಪಕ್ಷಗಳು ಸಿದ್ಧತೆ ನಡೆಸುತ್ತಿವೆ ಎನ್ನಲಾಗುತ್ತಿದೆ. ಭಾರತೀಯ ಸೈನಿಕರ ಮೇಲೆ ಚೀನಾದ ಸೈನಿಕರು ನಡೆಸಿದ ದಾಳಿ ಬಗ್ಗೆ ಚರ್ಚೆ ನಡೆಯಲಿದೆ. ಕೊರೊನಾ ಸೋಂಕು ನಿಯಂತ್ರಣದಲ್ಲಿ ಆಗಿರುವ ಲೋಪದೋಷಗಳು, ದೇಶದ ಆರ್ಥಿಕ ಕುಸಿತದ ಬಗ್ಗೆಯೂ ಚರ್ಚೆಯಾಗಲಿವೆ ಎಂದು ತಿಳಿದುಬಂದಿದೆ.

ಕೊರೊನಾ ಹಿನ್ನಲೆ ಮುಂಜಾಗ್ರತ ಕ್ರಮ:

ಇನ್ನು ಕೊರೊನಾ ಸೋಂಕು ಹಿನ್ನಲೆಯಲ್ಲಿ ಈ ಬಾರಿಯ ಸಂಸತ್ ಅಧಿವೇಶನಕ್ಕೆ ಮುಂಜಾಗ್ರತ ಕ್ರಮ ಕೈಗೊಳ್ಳಲಾಗುತ್ತಿದೆ. ಸಂಸದರು ಹಾಗೂ ಸಂಸತ್ ನ ಎಲ್ಲ ಸಿಬ್ಬಂದಿಗೂ ಕೊರೊನಾ ಪರೀಕ್ಷೆ ನಡೆಸಲಾಗುತ್ತದೆ.

- Advertisement -

Related news

error: Content is protected !!