Tuesday, April 30, 2024
spot_imgspot_img
spot_imgspot_img

ಹೀರೆಕಾಯಿ ಸೇವನೆಯಿಂದ ಆರೋಗ್ಯಕ್ಕಾಗುವ ಪ್ರಯೋಜನಗಳಿವು

- Advertisement -G L Acharya panikkar
- Advertisement -

ತರಕಾರಿ ಖರೀದಿಸಲೆಂದು, ಮಾರ್ಕೆಟ್ ಹೋದಾಗ, ಬೇರೆ ತರಕಾರಿಗಳ ಪಕ್ಕ ಹೀರೆಕಾಯಿ ನೋಡಿದಾಗ, ಅಯ್ಯೋ ಹೀರೆಕಾಯಿಯಾ? ಬೇಡ ಬಿಡಿ ಅಂತ ಮುಖ ಸಿಂಡರಿಸಿಬಿಡುತ್ತಾರೆ…!ಆದರೆ ನಿಮಗೆ ಗೊತ್ತಿರಲಿ, ಹೀರೆಕಾಯಿಯ ಮೇಲ್ಮೈ ನೋಡುವುದಕ್ಕೆ ಒರಟಾಗಿ, ಕಂಡು ಬಂದರೂ ಕೂಡ, ಇದರ ಒಳಭಾಗದ ತಿರುಳಿನಲ್ಲಿ ಲೆಕ್ಕಕ್ಕೂ ಸಿಗದಷ್ಟಟು ಆರೋಗ್ಯ ಕಾರಿ ಪ್ರಯೋಜನಗಳಿವೆ. ನಮ್ಮಲ್ಲಿ ಹೆಚ್ಚಿನವರಿಗೆ ತರಕಾರಿಗಳಲ್ಲಿ ಅಡಗಿರುವ ಅರೋಗ್ಯಕಾರಿ ಪ್ರಯೋಜನಗಳ ಬಗ್ಗೆ ಗೊತ್ತೇ ಇರುವುದಿಲ್ಲ.

ಕೇವಲ ಅಡುಗೆ ಮಾಡುವಾಗ ಮಾತ್ರ ತರಕಾರಿಗಳ ನೆನಪಾಗುವುದು! ಆದರೆ ಈ ವಿಷ್ಯ ನೆನಪಿರಲಿ ಆಹಾರ ತಯಾರಿಕೆಯಲ್ಲಿ ಬಳಸುವ ಹಲವಾರು ತರಕಾರಿಗಳು, ನಮ್ಮ ದೇಹ ಸೇರಿದ ಮೇಲೆ, ತಮ್ಮ ಸಕಾರಾತ್ಮಕ ಪ್ರಭಾವ ಗಳನ್ನು ಉಂಟು ಮಾಡಿ, ದೇಹದ ಆರೋಗ್ಯವೃದ್ಧಿಸಲು ನೆರವಾಗುತ್ತದೆ. ಇಂತಹ ತರಕಾರಿಗಳಲ್ಲಿ ಹೀರೆಕಾಯಿ ಕೂಡ ಒಂದು.. ಬನ್ನಿಇಂದಿನ ಈ ಲೇಖನದಲ್ಲಿ ಹೀರೆಕಾಯಿ ಯಲ್ಲಿ ಏನೆಲ್ಲಾ ಆರೋಗ್ಯ ಪ್ರಯೋಜನಗಳು ಸಿಗುತ್ತವೆ, ಎನ್ನುವುದನ್ನು ನೋಡೋಣ.

ಕಣ್ಣುಗಳ ಅರೈಕೆಗೆ

ದೇಹದ ಪ್ರಮುಖ ಅಂಗಗಳಲ್ಲಿ, ನಮ್ಮ ಎರಡೂ ಕಣ್ಣುಗಳು ಕೂಡ ಒಂದು. ಹೀಗಾಗಿ ಈ ಕಣ್ಣುಗಳ ಆರೋಗ್ಯದ ಕಡೆಗೆ ಹೆಚ್ಚಿನ ಕಾಳಜಿ ವಹಿಸಬೇಕಾಗುತ್ತದೆ. ಇದಕ್ಕಾಗಿ ಆರೋಗ್ಯಕರ ಆಹಾರ ಪದಾರ್ಥ ಹಾಗೂ ಜೀವನಶೈಲಿಯನ್ನು, ಅನುಸರಿಸುವುದರಿಂದ, ಕಣ್ಣಿನ ಸಮಸ್ಯೆಗಳ ಅಪಾಯವನ್ನು ಕಡಿಮೆ ಆಗುತ್ತಾ ಹೋಗುತ್ತದೆ.

ಈ ನಿಟ್ಟಿನಲ್ಲಿ ನೋಡುವುದಾದರೆ, ಕಣ್ಣಿನ ಆರೋಗ್ಯಕ್ಕೆ ಹೀರೆಕಾಯಿ, ತುಂಬಾನೇ ಒಳ್ಳೆಯ ತರಕಾರಿ ಎಂದ ಸಾಬೀತಾಗಿದೆ. ಇದಕ್ಕೆ ಮುಖ್ಯ ಕಾರಣ, ಈ ತರಕಾರಿಯಲ್ಲಿ ವಿಟಮಿನ್ ‘ ಎ ‘ ಅಂಶ ಹೇರಳವಾಗಿ ಕಂಡು ಬರುವುದರಿಂದ, , ಕಣ್ಣಿನ ದೃಷ್ಟಿ ಸಮಸ್ಯೆ ಎದುರಿಸುವವರಿಗೆ, ಇದೊಂದು ಒಳ್ಳೆಯ ತರಕಾರಿ ಎಂದು ಸ್ವತಃ ಕಣ್ಣಿನ ತಜ್ಞರೇ ಹೇಳುತ್ತಾರೆ.

ಅನಿಮಿಯ ಅಥವಾ ರಕ್ತಹೀನತೆ ಸಮಸ್ಯೆಗೆ

ದೇಹದಲ್ಲಿ ರಕ್ತಹೀನತೆ ಸಮಸ್ಯೆ ಕಂಡುಬಂದರೆ, ಹಲವಾರು ರೀತಿಯ ಆರೋಗ್ಯ ಸಮಸ್ಯೆಗಳು ಕಂಡು ಬರುವುದು. ಇನ್ನು ರಕ್ತಹೀನತೆ ಸಮಸ್ಯೆ ಕಾಡಲು ಮುಖ್ಯ ಕಾರಣ ಏನೆಂದರೆ, ದೇಹದಲ್ಲಿ ಕಂಡು ಬರುವ ಕಬ್ಬಿಣದಾಂಶದ ಕೊರತೆ! ಹೀಗಾಗಿ ಕಬ್ಬಿಣದ ಅಂಶವನ್ನು ಒಳಗೊಂಡಿರುವ ನೈಸರ್ಗಿಕ ಆಹಾರ ಪದಾರ್ಥಗಳ ಸೇವನೆ ಮಾಡುವ ಕಡೆಗೆ ಹೆಚ್ಚು ಗಮನನೀಡಬೇಕು.

ಇನ್ನು ಆರೋಗ್ಯತಜ್ಞರು ಹೇಳುವ ಪ್ರಕಾರ, ಹೀರೆಕಾಯಿಯಲ್ಲಿ ಕಬ್ಬಿಣದ ಅಂಶ ಯಥೇಚ್ಛವಾಗಿ ಕಂಡು ಬರುತ್ತದೆಯಂತೆ. ಒಂದು ವೇಳೆ ನಿಮಗೂ ಕೂಡ ಕಬ್ಬಿಣದ ಅಂಶದ ಕೊರತೆ ಉಂಟಾಗಿ ರಕ್ತಹೀನತೆ ಸಮಸ್ಯೆ ಕಂಡು ಬಂದರೆ, ನಿಮ್ಮ ಆಹಾರ ಪದ್ಧತಿಯಲ್ಲಿ, ಎರಡು ದಿನಕ್ಕೆ ಒಮ್ಮೆಯಾ ದರೂ ಹೀರೆಕಾಯಿ ಯನ್ನು ಬಳಸಲು, ಮರೆಯಬೇಡಿ. ಇನ್ನು ವಿಶೇಷವಾಗಿ ಈ ತರಕಾರಿಯಲ್ಲಿ ವಿಟಮಿನ್ ‘ ಬಿ6 ‘ ಅಂಶ ಹೇರಳವಾಗಿ ಇರುವುದರಿಂದ, ದೇಹದಲ್ಲಿ ಕಂಡು ಬರುವ ಕೆಂಪು ರಕ್ತ ಕಣಗಳ ಆರೋಗ್ಯವನ್ನು ಕಾಪಾಡುತ್ತದೆ.

vtv vitla

ದೇಹದ ತೂಕ ಇಳಿಸಲು ಬಯಸುವವರು

ಇತ್ತೀಚಿನ ದಿನಗಳಲ್ಲಿ ದೇಹದ ತೂಕದ ಸಮಸ್ಯೆ, ಹೆಚ್ಚಿನವರಿಗೆ ಕಾಡುತ್ತಿದೆ. ಇಂತಹವರಿಗೆ ಹೀರೆಕಾಯಿ ಹೇಳಿ ಮಾಡಿಸಿದ ತರಕಾರಿ ಎನ್ನುವುದರಲ್ಲಿಎರಡು ಮಾತಿಲ್ಲ! ಮುಖ್ಯವಾಗಿ ಈ ತರಕಾರಿಯಲ್ಲಿ ಕಡಿಮೆ ಪ್ರಮಾಣದ ಕ್ಯಾಲೋರಿಗಳು ಇರುವುದರ ಜೊತೆಗೆ, ಕೊಬ್ಬಿನಾಂಶ ಹಾಗೂ ಕೊಲೆಸ್ಟ್ರಾಲ್ ಅಂಶ ಕೂಡ ತುಂಬಾನೇ ಕಡಿಮೆ ಪ್ರಮಾಣದಲ್ಲಿ ಕಂಡುರುತ್ತದೆ. ಹೀಗಾಗಿ ದೇಹದ ತೂಕ ಇಳಿಸಲು ಬಯಸುವವರು ಹೀರೆಕಾಯಿಯನ್ನು ತಮ್ಮ ಆಹಾರ ಪದ್ಧತಿಯಲ್ಲಿ ಸೇರಿಸಿಕೊಂಡರೆ, ಒಳ್ಳೆಯದು.

ಮಲಬದ್ಧತೆ

ಇತ್ತೀಚಿನ ದಿನಗಳಲ್ಲಿ, ಅನಾರೋಗ್ಯಕಾರಿ ಆಹಾರ ಪದ್ಧತಿಗಳ ಸೇವನೆಯಿಂದಾಗಿ ಮಲಬದ್ಧತೆಯಿಂದ ಬಳಲುತ್ತಿರುವವರ ಸಂಖ್ಯೆ ಹೆಚ್ಚಾಗುತ್ತಿದೆ. ಒಂದು ವೇಳೆ ಇದನ್ನು ನಿರ್ಲಕ್ಷ್ಯ ಮಾಡುತ್ತಾ ಹೋದರೆ, ಮುಂದೆ ದೊಡ್ಡ ದೊಡ್ಡ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಹೀಗಾಗಿ ಸರಿಯಾದ ಜೀವನಶೈಲಿ ಹಾಗೂ ಆರೋಗ್ಯಕಾರಿ ಆಹಾರ ಪದಾರ್ಥಗಳನ್ನು ಸೇವನೆ ಮಾಡುವ ಅಭ್ಯಾಸ ಮಾಡಿಕೊಳ್ಳಬೇಕು.
ಇನ್ನು ತಜ್ಞರು ಹೇಳುವ ಪ್ರಕಾರ, ಹೀರೆಕಾಯಿಯಲ್ಲಿ ಸೆಲ್ಯುಲೋಸ್ ಎಂಬ ನೈಸರ್ಗಿಕ ನಾರಿನಾಂಶ ಯಥೇಚ್ಛವಾಗಿ ಸಿಗುವುದರಿಂದ, ಇದನ್ನು ನಿಯಮಿತವಾಗಿ ನಮ್ಮ ಆಹಾರಪದ್ಧತಿಯಲ್ಲಿ ಸೇರಿಸಿ ಕೊಳ್ಳುವ ಅಭ್ಯಾಸ ಮಾಡಿಕೊಂಡರೆ, ಜೀರ್ಣಕ್ರಿಯೆ ಪ್ರಕ್ರಿಯೆ ಸರಿಯಾಗಿ ನಡೆದು, ಮಲಬದ್ಧತೆ ಸಮಸ್ಯೆ ಕೂಡ ಬೇಗನೆ ನಿವಾರಣೆಗೆ ಆಗುತ್ತದೆ.

- Advertisement -

Related news

error: Content is protected !!