Saturday, August 29, 2026
spot_imgspot_img
spot_imgspot_img

ಅಜ್ಜನನ್ನು ನೋಡಿಕೊಳ್ಳಲು ನೇಮಿಸಿದ್ದ ಶುಶ್ರೂಷಕನಿಂದಲೇ ಮೊಮ್ಮಗನ ಅಪಹರಣ; ಆರೋಪಿಯ ಬಂಧನ..!

- Advertisement -
- Advertisement -

ಮೈಸೂರು: ಬಾಲಕನ ಅಜ್ಜನನ್ನು ನೋಡಿಕೊಳ್ಳಲು ಬಾಲಕನ ಪೋಷಕರು ಶುಶ್ರುಷಕನನ್ನು ನೇಮಿಸಿಕೊಂಡಿಸಿದ್ದು, ಸಾಲ ತೀರಿಸುವ ಉದ್ದೇಶದಿಂದ ಶುಶ್ರುಷಕ ಮತ್ತು ನಾಲ್ವರು ಯುವಕರು 12 ವರ್ಷದ ಬಾಲಕನನ್ನು ಅಪಹರಣ ಮಾಡಿದ ಪ್ರಕರಣ ಮೈಸೂರು ಜಿಲ್ಲೆಯ ಕುವೆಂಪು ನಗರದ ಶ್ರೀರಾಂಪುರದಲ್ಲಿ ನಡೆದಿದೆ.

ಮೈಸೂರು ಪೊಲೀಸರು ವಿರಾಜಪೇಟೆಯಲ್ಲಿ ಐವರು ಅಪಹರಣಕಾರರನ್ನು ಬಂಧಿಸಿದ್ದಾರೆ.

ಬಾಲಕನ ಪೋಷಕರು ಕುವೆಂಪು ನಗರದ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಬಾಲಕನನ್ನು ನಿರ್ಜನ ಪ್ರದೇಶದಲ್ಲಿ ಬಿಟ್ಟು ತಲೆಮರೆಸಿಕೊಂಡಿದ್ದ 20 ರಿಂದ 25 ವರ್ಷದ ಐವರು ಆರೋಪಿ ಯುವಕರನ್ನು ತಕ್ಷಣ ಪತ್ತೆ ಮಾಡಿ ಬಂಧಿಸಲಾಗಿದೆ ಎಂದು ಪೊಲೀಸ್ ಆಯುಕ್ತ ಚಂದ್ರಗುಪ್ತ ಹೇಳಿದ್ದಾರೆ.

ಬಾಲಕನ ಪೋಷಕರು ಕುವೆಂಪು ನಗರದ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.”ಬಾಲಕನನ್ನು ನಿರ್ಜನ ಪ್ರದೇಶದಲ್ಲಿ ಬಿಟ್ಟು ತಲೆಮರೆಸಿಕೊಂಡಿದ್ದ 20 ರಿಂದ 25 ವರ್ಷದ ಐವರು ಆರೋಪಿ ಯುವಕರನ್ನು ತಕ್ಷಣ ಪತ್ತೆ ಮಾಡಿ ಬಂಧಿಸಲಾಗಿದೆ” ಎಂದು ಪೊಲೀಸ್ ಆಯುಕ್ತ ಚಂದ್ರಗುಪ್ತ ಹೇಳಿದ್ದಾರೆ.

“ಗುರುವಾರ ಸಂಜೆ 7.15 ವೇಳೆಗೆ ಕಾರಿನಲ್ಲಿ ಬಾಲಕನನ್ನು ಅಪಹರಿಸಲಾಗಿದೆ ಎಂಬ ಮಾಹಿತಿ ಬಂದಿತ್ತು. ತಕ್ಷಣವೇ ಸ್ಥಳಕ್ಕೆ ಧಾವಿಸಿ ಪ್ರತ್ಯಕ್ಷದರ್ಶಿಗಳಿಂದ ಮಾಹಿತಿ ಸಂಗ್ರಹಿಸಿದ್ದೇವೆ. ಕುಟುಂಬಸ್ಥರಿಂದಲೂ ಮಾಹಿತಿ ಸಂಗ್ರಹಿಸಿದ್ದೇವೆ” ಎಂದು ಅವರು ತಿಳಿಸಿದ್ದಾರೆ. ಪ್ರಾಥಮಿಕ ತನಿಖೆಯಲ್ಲಿ ಅಪಹರಣಕಾರರು ಸಾಲ ತೀರಿಸುವ ಉದ್ದೇಶದಿಂದ ಬಾಲಕನನ್ನು ಅಪಹರಣ ಮಾಡಿದ್ದಾರೆಂದು ತಿಳಿದು ಬಂದಿರುವುದಾಗಿ ಅವರು ಹೇಳಿದ್ದಾರೆ.

- Advertisement -

Related news

error: Content is protected !!