Tuesday, April 30, 2024
spot_imgspot_img
spot_imgspot_img

ಮಂಗಳೂರು: ಇಬ್ಬರು ರೌಡಿಶೀಟರ್‌ಗಳ ವಿರುದ್ದ ಗೂಂಡಾ ಕಾಯ್ದೆ ದಾಖಲು

- Advertisement -G L Acharya panikkar
- Advertisement -

ಮಂಗಳೂರು: ಕೊಲೆ ಯತ್ನ, ಅಪಹರಣ, ಕ್ರಿಮಿನಲ್ ಸಂಚು, ಕಳ್ಳಭಟ್ಟಿ ಸಾರಾಯಿ ವ್ಯವಹಾರ, ಗಾಂಜಾ ಸೇವನೆ ಸೇರಿದಂತೆ ಹಲವು ಪ್ರಕರಣಗಳಲ್ಲಿ ಆರೋಪಿಗಳಾಗಿರುವ ಇಬ್ಬರು ರೌಡಿಶೀಟರ್‌ಗಳ ವಿರುದ್ದ ಗೂಂಡಾ ಕಾಯ್ದೆ ದಾಖಲಾಗಿದೆ.

ಪ್ರೀತಂ ಪೂಜಾರಿ (26), ಧೀರಜ್ ಕುಮಾರ್ (27)

ವೆಲೆನ್ಸಿಯಾ ಜಂಕ್ಷನ್‌ನಲ್ಲಿರುವ ಕೋಳಿ ಅಂಗಡಿಯೊಂದರ ಸಿಬ್ಬಂದಿಯ ಮೇಲೆ ಇತ್ತಿಚೇಗೆ ಮಾರಣಾಂತಿಕವಾಗಿ ಹಲ್ಲೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದ ಇಬ್ಬರು ಆರೋಪಿಗಳಾದ ಜಲ್ಲಿಗುಡ್ಡೆ ಬಜಾಲ್‌ನ ನಿವಾಸಿ ಪ್ರೀತಂ ಪೂಜಾರಿ (26), ಎಕ್ಕೂರಿನ ನಿವಾಸಿ ಧೀರು ಯಾನೆ ಧೀರಜ್ ಕುಮಾರ್ (27) ಇವರನ್ನು ಸಮಾಜಕ್ಕೆ ಅಪಾಯಕಾರಿ ಎಂದು ಪರಿಗಣಿಸಲಾಗಿರುವುದರಿಂದ ಕಾನೂನು ಸುವ್ಯವಸ್ಥೆ ಕಾಪಾಡುವ ಉದ್ದೇಶದಿಂದ ಅವರ ಮೇಲೆ ಗೂಂಡಾ ಕಾಯ್ದೆಯನ್ನು ದಾಖಲಿಸಲಾಗಿದೆ ಎಂದು ಕಂಕನಾಡಿ ಪೊಲೀಸರು ತಿಳಿಸಿದ್ದಾರೆ.

ಆರೋಪಿಗಳಾದ ಪ್ರೀತಂ ಪೂಜಾರಿ ಹಾಗೂ ಧೀರಜ್ ಕುಮಾರ್ ಕೊಲೆ ಯತ್ನ, ಅಪಹರಣ, ಕ್ರಿಮಿನಲ್ ಸಂಚು, ಕಳ್ಳಭಟ್ಟಿ ಸಾರಾಯಿ ವ್ಯವಹಾರ, ಗಾಂಜಾ ಸೇವನೆ ಸೇರಿದಂತೆ ಹಲವು ಪ್ರಕರಣಗಳಾಗಿದ್ದಾರೆ. ಎಪ್ರಿಲ್ 10ರಂದು ಆರೋಪಿಗಳು ವೆಲೆನ್ಸಿಯಾ ಜಂಕ್ಷನ್‌ನಲ್ಲಿ ವ್ಯಕ್ತಿಯೊಬ್ಬರ ಮೇಲೆ ಹಲ್ಲೆ ನಡೆಸಿದ್ದು, ಇದನ್ನು ಪ್ರಶ್ನಿಸಿದ ಸಮೀಪದ ಕೋಳಿ ಅಂಗಡಿಯ ಸಿಬ್ಬಂದಿಗಳಿಬ್ಬರಿಗೆ ಚೂರಿ ಹಿಡಿದು ಬೆದರಿಸಿ, ಕಲ್ಲು ತೂರಾಟ ನಡೆಸಿ ಹಲ್ಲೆ ನಡೆಸಿದ್ದು, ಬಳಿಕ ಪೊಲೀಸರು ಆರೋಪಿಗಳನ್ನು ಬಂಧಿಸಿ ತಪಾಸಣೆಗೆ ಒಳಪಡಿಸಿದ ವೇಳೆ ಆರೋಪಿಗಳು ಗಾಂಜಾ ಸೇವನೆ ಮಾಡಿದ್ದಾರೆ ಎನ್ನುವುದು ಕೂಡ ದೃಢಪಟ್ಟಿತ್ತು.

- Advertisement -

Related news

error: Content is protected !!