- Advertisement -
- Advertisement -
ಸಕಲೇಶಪುರ: ರಾಜ್ಯ ಅಲೆಮಾರಿ ಅರೆಅಲೆಮಾರಿ ಅಭಿವೃದ್ಧಿ ನಿಗಮದ ಅಧ್ಯಕ್ಷ ಕೆ ರವೀಂದ್ರಶೆಟ್ಟಿ ಉಳಿದೊಟ್ಟು ಪ್ರಯಾಣಿಸುತ್ತಿದ್ದ ಕಾರು ಅಪಘಾತಕ್ಕೀಡಾದ ಘಟನೆ ಶಿರಾಡಿಘಾಡ್ ಸಕಲೇಶಪುರದ ಬಳಿ ನಡೆದಿದೆ. ಸದ್ಯ ಯಾವುದೇ ಪ್ರಾಣಾಪಾಯ, ಗಾಯ ಉಂಟಾಗಿಲ್ಲ.


ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರ ನಿವಾಸದಲ್ಲಿ ನಡೆಯುವ ನಿಗಮ-ಮಂಡಳಿಗಳ ಸಭೆಯಲ್ಲಿ ಪಾಲ್ಗೊಳ್ಳುವ ನಿಟ್ಟಿನಲ್ಲಿ ಅವರು ಮಂಗಳೂರಿನಿಂದ ಹೊರಟಿದ್ದರು. ಸಕಲೇಶಪುರ ಜಂಕ್ಷನ್ನಲ್ಲಿ ಕಾರಿನ ಮುಂದಿನಿಂದಬರುತ್ತಿದ್ದ ಬೈಕ್ ಸವಾರ ಏಕಾಏಕಿ ಏಕಾಏಕಿ ಬಲಗಡೆಗೆ ತಿರುಗಿಸಿದ್ದಾನೆ. ಅಪಾಯವನ್ನು ತಪ್ಪಿಸುವ ಸಲುವಾಗಿ ಚಾಲಕ ಕಾರನ್ನು ಬಲಗಡೆಗೆ ತಿರುಗಿಸಿದ್ದಾರೆ. ನಿಯಂತ್ರಣ ತಪ್ಪಿ ರಸ್ತೆ ಬದಿಯ ಅಳವಡಿಸಲಾಗಿದ್ದ ನಾಮಫಲಕಕ್ಕೆ ಡಿಕ್ಕಿಯಾಗಿದೆ.

ಅಪಘಾತದಲ್ಲಿ ಕಾರಿನ ಒಂದು ಬದಿಗೆ ಅಲ್ಪ ಪ್ರಮಾಣದಲ್ಲಿ ಹಾನಿಯಾಗಿದೆ. ರವೀಂದ್ರ ಶೆಟ್ಟಿ ಮತ್ತು ಕಾರು ಚಾಲಕ ಅಪಾಯದಿಂದ ಪಾರಾಗಿದ್ದು ಮತ್ತೊಂದು ಕಾರಿನಲ್ಲಿ ಬೆಂಗಳೂರಿಗೆ ತೆರಳಿದ್ದಾರೆ.


- Advertisement -








