

ವಿಟ್ಲ : ಸಿದ್ಧಿವಿನಾಯಕ ಯುವಕ ಮಂಡಲ ಧರ್ಮನಗರ – ಕಂಬಳಬೆಟ್ಟು ಇದರ ವತಿಯಿಂದ ಕೆಸರ್‍ಡೊಂಜಿ ದಿನ ಕಾರ್ಯಕ್ರಮವು ವಿಜೃಂಭಣೆಯಿಂದ ನಡೆಯಿತು. ಮೂರು ಗ್ರಾಮಗಳನ್ನೊಳಗೊಂಡ ಹಿಂದೂ ಬಾಂಧವರ ತುಳುನಾಡ ಜಾನಪದ ಕ್ರೀಡೆ ಮತ್ತು ಆಚರಣೆಗಳನ್ನು ನೆನಪಿಸುವ ಸಲುವಾಗಿ ಮತ್ತು ಯುವಜನತೆಯ ಮನಸ್ಸುಗಳನ್ನು ದೇಶ ಭಾಷೆಗಳೊಂದಿಗೆ ಒಗ್ಗೂಡಿಸುವ ಕೆಸರೊಂಜಿ ದಿನ ಕಾರ್ಯಕ್ರಮವು ಜು.24ರಂದು ಕಾರ್ಯಾಡಿ ಬೈಲಿನಲ್ಲಿ ನಡೆಯಿತು.

ಧರ್ಮನಗರದಿಂದ ಕಾರ್ಯಾಡಿಗೆ ಬೈಕ್ ರ್‍ಯಾಲಿ ಮೂಲಕ ಬರಲಾಯಿತು.

ಕಾರ್ಯಕ್ರಮವನ್ನು ಅಶೋಕ್ ಕುಮಾರ್ ರೈ ಕೋಡಿಂಬಾಡಿ ಸಂಚಾಲಕರು, ರೈ ಎಜುಕೇಶನ್ & ಚಾರಿಟೇಬಲ್ ಟ್ರಸ್ಟ್ ಪುತ್ತೂರು ಇವರು ಉದ್ಘಾಟಿಸಿದರು. ಅಧ್ಯಕ್ಷತೆಯನ್ನು ಸಿದ್ಧಿವಿನಾಯಕ ಯುವಕ ಮಂಡಲ ಧರ್ಮನಗರ ಇದರ ಅಧ್ಯಕ್ಷರಾದ ಕಾರ್ತಿಕ್ ಕುಮಾರ್ ಶೆಟ್ಟಿ ಮೂಡಾಯಿಮಾರ್ ವಹಿಸಿದ್ದರು.

ಕಾರ್ಯಕ್ರಮದಲ್ಲಿ ಧರ್ಮಸೇವಾ ವಿಶ್ವಸ್ಥ ಮಂಡಳಿ ಅಧ್ಯಕ್ಷರು ಸುಬ್ರಹ್ಮಣ್ಯ ಭಟ್ ಉರಿಮಜಲು, ಇಡ್ಕಿದು ಗ್ರಾಮ ಪಂಚಾಯತ್ ಉಪಾಧ್ಯಕ್ಷರು ಯಶೋದ ಶಿವಪ್ಪ ಕುಂಡಡ್ಕ, ಕೃಷಿಕರಾದ ಗೋಪಾಲಕೃಷ್ಣ ಭಟ್ ಮಿತ್ತೂರು, ಇಡೀದು ಸೇ.ಸ.ಸಂಘದ ಮುಖ್ಯಕಾರ್ಯನಿರ್ವಹಣಾಧಿಕಾರಿ ಈಶ್ವರ ನಾಯ್ಕ ಎಸ್, ಸಾನ್ವಿ ಕನ್‌ಸ್ಟಕ್ಷನ್ ವಿಟ್ಲ ತಾರಾನಾಥ ಬೊಳಿಗದ್ದೆ, ಗ್ರಾಮ ಪಂಚಾಯತ್ ಇಡ್ಕಿದು ಸದಸ್ಯರಾದ ಚಿದಾನಂದ ಪೆಲತ್ತಿಂಜ ಮತ್ತು ಶಂಕರ ಭಟ್ ಉರಿಮಜಲು, ಇಡ್ಕಿದು ಗ್ರಾಮ ಪಂಚಾಯತ್ ಸದಸ್ಯ ಪ್ರಶಾಂತ್ ಶೆಟ್ಟಿ ಬರೆ, ಯುವ ಉದ್ಯಮಿ ಜೀವನ್ ರೈ ಕುತ್ಯಾಡಿ, ವಿಟಿವಿ ನಿರ್ದೇಶಕ ರಾಮದಾಸ್ ಶೆಟ್ಟಿ, ಧರ್ಮಸೇವಾ ವಿಶ್ವಸ್ಥ ಮಂಡಳಿ ಟ್ರಸ್ಟಿ ಧನರಾಜ್ ಅಮೈಮಾಗಣೆ, ಇಡಿದು ಸೇ.ಸ.ಸಂಘದ ಶಾಖಾಧಿಕಾರಿ ರವೀಂದ್ರ ಮೇಲಾಂಟ ಕಲ್ಲಂದಡ್ಕ, ಸತೀಶ್ ಪೂಜಾರಿ ನೇರೋಳ್ತಡ್ಕ, ಜಿನ್ನಪ್ಪ ಪೂಜಾರಿ ಮುರ, ರಾಜೇಂದ್ರ ಮರೀಲು ಮೆಸ್ಕಾಂ ಪುತ್ತೂರು ಉಪಸ್ಥಿತರಿದ್ದರು.


ಮಧ್ಯಾಹ್ನದ ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕೃಷ್ಣಯ್ಯ ಕೆ. ವಿಟ್ಲ ಅರಮನೆ ವಹಿಸಿ, ಉದ್ಘಾಟನೆಯನ್ನು ಪುತ್ತೂರು ವಿಧಾನಸಭಾ ಕ್ಷೇತ್ರ ಶಾಸಕ ಸಂಜೀವ ಮಠಂದೂರು ನೆರವೇರಿಸಿದರು, ಮುಖ್ಯ ಅತಿಥಿಯಾಗಿ ಕೆ.ಕೆ. ಪೇಜಾವರ, ತುಳು ಜಾನಪದ ವಿದ್ವಾಂಸರು ನಮ್ಮ ಟಿವಿ ಮಂಗಳೂರು ಇವರು ತುಳುನಾಡ ಗೊಬ್ಬುಲು ಮತ್ತು ಆಚರಣೆ ಬಗ್ಗೆ ವಿಷಯ ಮಂಡನೆ ಮಾಡಿದ್ದರು.


ವೇದಿಕೆಯಲ್ಲಿ ಮುಖ್ಯ ಅತಿಥಿಗಳಾಗಿ ಲಕ್ಷ್ಮೀಗಣೇಶ್ ಮೆಡಿಕಲ್ಸ್ ವಿಟ್ಲ ದಿನೇಶ್ ಆಳ್ವ, ಸೇಸಪ್ಪ ಗೌಡ ಹಡೀಲು ನಿವೃತ್ತ ಯೋಧರು, ಯೂನಿಯನ್ ಬ್ಯಾಂಕ್ ,ಜಯಶೀಲ ಶೆಟ್ಟಿ ಮೂಡಾಯಿಮಾರ್, ಇಡ್ಕಿದು ಸೇವಾ ಸಹಕಾರಿ ಸಂಘ ನಿಯಮಿತ ಈಶ್ವರ ಕುಲಾಳ್ ಮಿತ್ತೂರು, ಪದ್ಮನಾಭ ಶೆಟ್ಟಿ ಚಪ್ಪಡಿಯಡ್ಕ, ಬನ್ನೂರು ರೈತಸೇವಾ ಸಹಕಾರಿ ಸಂಘ ಬೊಳ್ವಾರು ಪುತ್ತೂರು ಇದರ ಅಧ್ಯಕ್ಷ ಈಶ್ವರ ಭಟ್ ಪಂಜಿಗುಡ್ಡೆ, ಅಡ್ಯಲಾಯ ಮತ್ತು ಸಪರಿವಾರ ದೈವಗಳ ಸನ್ನಿಧಿ ಕಬಕ ಇದರ ಅಧ್ಯಕ್ಷ ಸತೀಶ್ ರೈ ಡಿಂಬ್ರಿಗುತ್ತು, ಭಾಜಪ ಪುತ್ತೂರು ಗ್ರಾಮಾಂತರ ಮಂಡಲದ ಉಪಾಧ್ಯಕ್ಷ ಅರುಣ್ ವಿಟ್ಲ, ಶ್ರೀ ವಿಷ್ಣುಮೂರ್ತಿ ದೇವಸ್ಥಾನ ಕುಂಡಡ್ಕ ಇದರ ಅಧ್ಯಕ್ಷ ದಯಾನಂದ ಶೆಟ್ಟಿ ಉಜಿರೆಮಾರ್, ಇಡ್ಕಿದು ಪಂಚಯಾತ್ ಅಭಿವೃದ್ಧಿ ಅಧಿಕಾರಿ ಗೋಕುಲ್‌ದಾಸ್ ಭಕ್ತ, ವಿಟ್ಲಮೂಡ್ನುರು ಪಂಚಾಯತ್ ಅಭಿವೃದ್ಧಿ ಅಧಿಕಾರಿ ರಾಘವೇಂದ್ರ, ಕಾರ್ತಿಕ್ ಫ್ರೆಂಡ್ಸ್ ಚಂದಳಿಕೆ ಇದರ ಅಧ್ಯಕ್ಷ ಗಂಗಾಧರ ಪೂಜಾರಿ ಚಂದಳಿಕೆ, ಚರಣ್ ಕಾಪುಮಜಲ್ ಉಪಸ್ಥಿತರಿದ್ದರು.

ಮಕ್ಕಳಿಗೆ, ಮಹಿಳೆಯರಿಗೆ,ಪುರುಷರಿಗೆ ವಿವಿಧ ಆಟೋಟ ಸ್ಫರ್ಧೆಗಳನ್ನು ಏರ್ಪಡಿಸಲಾಗಿತ್ತು. ನೂರಾರು ಜನ ಕೆಸರಿನಲ್ಲಿ ಮಿಂದೆದ್ದು, ಸಂಭ್ರಮಿಸಿದರು.


