Saturday, June 20, 2026
spot_imgspot_img
spot_imgspot_img

ಕನ್ಯಾನ: ಹಿಂ.ಜಾ. ವೇ ಕರೋಪಾಡಿ ಇದರ ಆಶ್ರಯದಲ್ಲಿ ಕೆಸರ್‌ ಕಂಡೊಡು ಗೊಬ್ಬುಲೆ ಕಾರ್ಯಕ್ರಮ

- Advertisement -
- Advertisement -

ಹಿಂದೂ ಜಾಗರಣ ವೇದಿಕೆ, ಕರೋಪಾಡಿ ಇದರ ಆಶ್ರಯದಲ್ಲಿ ಕೆಸರ್‌ ಕಂಡೊಡು ಗೊಬ್ಬುಲೆ ಕಾರ್ಯಕ್ರಮವನ್ನು ಒಡಿಯೂರು ಕ್ಷೇತ್ರದ ಗುರುದೇವಾನಂದ ಸ್ವಾಮೀಜಿ ನೆರವೇರಿಸಿದರು. ಕರೋಪಾಡಿ ಗ್ರಾಮದ ಕುಡ್ಪಲ್ತಡ್ಕ ಸೋಣಾರ ಕೃಷಿ ಭೂಮಿಯಲ್ಲಿ ಆಯೋಜಿಸಲಾಯಿತು.

ಈ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಗುರು ಎಜುಕೇಶನ್ ಟ್ರಸ್ಟ್‌ (ರಿ) ಶ್ರೀ ಸರಸ್ವತಿ ವಿದ್ಯಾಲಯ ಕನ್ಯಾನ ಇದರ ಅಧ್ಯಕ್ಷ ಈಶ್ವರ ಪ್ರಸಾದ್, ಹಿಂ.ಜಾ.ವೇ ಪ್ರಾಂತ ಸಹ ಸಂಯೋಜಕ, ವಕೀಲರಾದ ಚಿನ್ಮಯಿ, ಪ್ರಗತಿಪರ ಕರಷಿಕ ರೋಶನ್ ಸಾಂತ ಕುಳ, ಭಾಜಪ ಕೊಳ್ನಾಡು ಮಹಾಶಕ್ತಿ ಕೇಂದ್ರದ ಅಧ್ಯಕ್ಷ ಶಿವಪ್ರಸಾದ್ ಶೆಟ್ಟಿ ಅನೆಯಾಲಗುತ್ತು, ಪ್ರಾಥಮಿಕ ಸುರಕ್ಷ ಅಧಿಕಾರಿ ಮಂಜುಳಾ ಬಿ, ಗೌರವಾಧ್ಯಕ್ಷ ಶ್ರೀಧರ ಶೆಟ್ಟಿ, ಗುಬ್ಯ ಮೇಗಿನಗುತ್ತು, ಅಧ್ಯಕ್ಷ ರಮೇಶ್‌ ಶೆಟ್ಟಿ ಅನೆಯಾಲಗುತ್ತು ಸೇರಿದಂತೆ ಮತ್ತಿತ್ತರರು ಉಪಸ್ಥಿತರಿದ್ದರು. ಮಕ್ಕಳಿಗೆ, ಮಹಿಳೆಯರಿಗೆ, ಸಾರ್ವಜನಿಕರಿಗೆ ವಿವಿಧ ಆಟೋಟ ಸ್ಪರ್ಧೆಗಳು ನಡೆಯಿತು.

- Advertisement -

Related news

error: Content is protected !!