Saturday, June 28, 2025
spot_imgspot_img
spot_imgspot_img

ವಿಚಾರಣೆಗೆ ಹಾಜರಾಗುವುದು ನನ್ನ ಕರ್ತವ್ಯವೆಂದ ರಾಗಿಣಿ

- Advertisement -
- Advertisement -

ಸ್ಯಾಂಡಲ್ ವುಡ್ ಗೆ ಡ್ರಗ್ಸ್ ಮಾಫಿಯಾ ನಂಟು ಆರೋಪಕ್ಕೆ ಸಂಬಂಧಿಸಿ ನಟಿ ರಾಗಿಣಿ ಹೆಸರು ಕೇಳಿಬಂದ ಬೆನ್ನಲ್ಲೇ ಇಂದು ವಿಚಾರಣೆಗೆ ಹಾಜರಾಗುವಂತೆ ಸಿಸಿಬಿ ನೋಟಿಸ್ ಕೊಟ್ಟಿತ್ತು.ಆದರೆ ಅನಾರೋಗ್ಯ ಹಿನ್ನಲೆಯಲ್ಲಿ ವಿಚಾರಣೆಗೆ ಕಾಲಾವಕಾಶ ಕೋರಿ ಎಂದು ನಟಿ ರಾಗಿಣಿ ಪರ ವಕೀಲರು ಸಿಸಿಬಿ ಅಧಿಕಾರಿಗಳ ಬಳಿ ಮನವಿ ಮಾಡಿದ್ದಾರೆ.

ಇದರ ಬಳಿಕ ಟ್ವೀಟ್ ಮಾಡಿದ ರಾಗಿಣಿ, ಸಿಸಿಬಿ ಪೊಲೀಸರು ತನಿಖೆ ನಡೆಸುತ್ತಿರುವ ಯಾವುದೇ ಕಾನೂನುಬಾಹಿರ ಚಟುವಟಿಕೆಗೂ ನನಗೂ ಯಾವುದೇ ಸಂಬಂಧವಿಲ್ಲ. ಪೊಲೀಸರ ಬಳಿ ನನಗೆ ಮರೆಮಾಡುವಂತದ್ದು ಏನೂ ಇಲ್ಲ . ಹೀಗಾಗಿ ಸಿಸಿಬಿ ವಿಚಾರಣೆಗೆ ವಿನಮ್ರವಾಗಿ ಭಾಗವಹಿಸುವುದು ನಾಗರಿಕಳಾಗಿ ನನ್ನ ಕರ್ತವ್ಯವೆಂದು ನಾನು ಭಾವಿಸುತ್ತೇನೆ ಎಂದು ಟ್ವೀಟ್ ಮಾಡಿದ್ದಾರೆ.

- Advertisement -

Related news

error: Content is protected !!